ICC Women's ODI World Cup: ಬಹುಮಾನ ಮೊತ್ತ ಘೋಷಣೆ: ಪುರಷರ ವಿಶ್ವಕಪ್‌ಗಿಂತಲೂ ಹೆಚ್ಚು
ಭಾರತದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳಿಗೆ ಕೌಟ್ ಡೌನ್ ಆರಂಭವಾಗಿದೆ. ಈಗ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯ ಬಹುಮಾನ ಮೊತ್ತವನ್ನು ಘೋಷಣೆ ಮಾಡಿದೆ. ಈ ಬಾರಿ ಮಹಿಳಾ ವಿಶ್ವಕಪ್ ಗೆಲ್ಲುವ ತಂಡಕ್ಕೆ ಭಾರೀ ಮೊತ್ತ ನೀಡಲಾಗಿದೆ. ಈ ಬಾರಿ ಮಹಿಳಾ ವಿಶ್ವಕಪ್ ಗೆಲ್ಲುವ ತಂಡಕ್ಕೆ ಐಸಿಸಿ 4.48 ಮಿಲಿಯನ್ ಡಾಲರ್ (39.4 ಕೋಟಿ) ಬಹುಮಾನವನ್ನು ಘೋಷಿಸಿದೆ. ಇದು ಕಳೆದ ಬಾರಿಯ ಏಕದಿನ ವಿಶ್ವಕಪ್‌ಗೆ ಹೋಲಿಸಿದರೆ ಈ ಬಾರಿಯ ಮೊತ್ತ 4 ಪಟ್ಟು ಹೆಚ್ಚಾಗಿದೆ.
2023ರ ಪುರುಷರ ಏಕದಿನ ವಿಶ್ವಕಪ್‌ಗಿಂತ ಬಹುಮಾನದ ಮೊತ್ತವೂ ತುಂಬ ಹೆಚ್ಚಾಗಿದೆ. 2023 ರ ಏಕದಿನ ವಿಶ್ವಕಪ್ ನ ಒಟ್ಟು ಬಹುಮಾನದ ಮೊತ್ತವು $10 ಮಿಲಿಯನ್ ಆಗಿತ್ತು. ಭಾರತದಲ್ಲಿ ನಡೆಯಲಿರುವ ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ಒಟ್ಟು 8 ತಂಡಗಳು ಒಳಗೊಂಡಿವೆ. ಈ ಟೂರ್ನಮೆಂಟ್ ನ ಒಟ್ಟು ಬಹುಮಾನದ ಮೊತ್ತವು $13.99 ಮಿಲಿಯನ್ ಆಗಿದ್ದು, ಇದು 2022ರಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆದ ಕೊನೆಯ ಮಹಿಳಾ ವಿಶ್ವಕಪ್ ನ $3.5 ಮಿಲಿಯನ್ ಗಿಂತ ಶೇ.297 ರಷ್ಟು ಹೆಚ್ಚಾಗಿದೆ.

ಮಹಿಳಾ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಸ್ಥಾನವನ್ನು ಪಡೆದ ತಂಡದ ಬಹುಮಾನ ಮೊತ್ತದಲ್ಲೂ ಭಾರೀ ಏರಿಕೆ ಆಗಿದೆ. ರನ್ನರ್ ಅಪ್ ತಂಡವು $2.74 ಮಿಲಿಯನ್ ಪಡೆಯುತ್ತದೆ. ಆದರೆ ಸೆಮಿಫೈನಲ್‌ನಲ್ಲಿ ಸೋತ ತಂಡಗಳೂ ಸಹ $1.12 ಮಿಲಿಯನ್ ಪಡೆಯುತ್ತವೆ. ಐದನೇ ಹಾಗೂ ಆರನೇ ಸ್ಥಾನ ಪಡೆದ ತಂಡ $700,000, 7ನೇ ಹಾಗೂ 8ನೇ ಸ್ಥಾನ ಪಡೆದ ತಂಡ $280,000 ದೊರೆಯಲಿದೆ. ಟೂರ್ನಿಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೂ $250,000 ದೊರೆಯಲಿದೆ.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಬಹುಮಾನ ಮೊತ್ತವನ್ನು ಐಸಿಸಿ ಅಧ್ಯಕ್ಷ ಜಯ್ ಶಾ ಘೋಷಿಸಿದ್ದಾರೆ. ಇದೇ ವೇಳೆ ಇದು ಮಹಿಳಾ ಕ್ರಿಕೆಟ್‌ನ ಪ್ರಯಾಣದಲ್ಲಿ ಒಂದು ದೊಡ್ಡ ಮೈಲಿಗಲ್ಲು ಎಂದು ಹೇಳಿದ್ದಾರೆ. ಮಹಿಳಾ ಕ್ರಿಕೆಟ್ ದೃಷ್ಟಿಯಿಂದ ಇದು ಒಂದು ದೊಡ್ಡ ಮೈಲುಗಲ್ಲಾಗಿದೆ. ಪುರುಷರಂತೆ, ಮಹಿಳಾ ಕ್ರಿಕೆಟ್ ಆಟವನ್ನು ಬೆಳೆಸುವ ದೃಷ್ಟಿಯಿಂದ ಇದು ದೊಡ್ಡ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.
8 ತಂಡಗಳು ಭಾಗಿ
ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಒಟ್ಟಾರೆ ಈ ಟೂರ್ನಿಯಲ್ಲಿ 31 ಪಂದ್ಯಗಳು ನಡೆಯಲಿವೆ. ನವಿ ಮುಂಬೈ, ಗುವಾಹಟಿ, ವಿಶಾಖಪಟ್ಟಣಂ, ಇಂದೋರ್, ಕೊಂಬೊ ಸೇರಿದಂತೆ ಆರು ನಗರಗಳಲ್ಲಿ ವಿಶ್ವಕಪ್ ಆಯೋಜಿಸಲಾಗುತ್ತಿದೆ. ಅಕ್ಟೋಬರ್ 29 ರಂದು ಮೊದಲ ಸೆಮಿಫೈನಲ್ ಪಂದ್ಯ, ಅಕ್ಟೋಬರ್ 30 ರಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ನವೆಂಬರ್ 2 ರಂದು ಫೈನಲ್ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications