ಉದ್ಘಾಟನ ಪಂದ್ಯಕ್ಕೂ ಮುನ್ನ ಶ್ರೇಯಾ ಘೋಷಾಲ್ ಕಾರ್ಯಕ್ರಮ
ಮಹಿಳಾ ಏಕದಿನ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಈ ಬಿಗ್ ಈವೆಂಟ್‌ಗೆ ಭರದ ಸಿದ್ಧತೆಗಳು ನಡೆದಿವೆ. ಈ ಟೂರ್ನಿಯ ಉದ್ಘಾಟನಾ ಪಂದ್ಯ ಗುವಹಾಟಿಯಲ್ಲಿ ನಡೆಯಲಿದೆ. ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸ್ಟಾರ್ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರು ಪ್ರದರ್ಶನ ನೀಡಲಿದ್ದಾರೆ. ವಿಶ್ವ ಮಟ್ಟದ ವೇದಿಕೆಯಲ್ಲಿ ಶ್ರೇಯಾ ಘೋಷಾಲ್ ತಮ್ಮ ಜನಪ್ರೀಯ ಹಾಡುಗಳನ್ನು ಹಾಡಲಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಐಸಿಸಿ ಅತಿ ಕಡಿಮೆ ಬೆಲೆಯ ಟಿಕೆಗಳನ್ನು ಘೋಷಿಸಿದೆ. ಭಾರತದಲ್ಲಿ ನಡೆಯಲಿರುವ ಲೀಗ್ ಹಂತದ ಪಂದ್ಯಗಳಿಗೆ ರೂ. 100 ಟಿಕೆಟ್ ಘೋಷಿಸಿದೆ. ಇನ್ನು ಅಭಿಮಾನಿಗಳನ್ನು ಸ್ಟೇಡಿಯಂನತ್ತ ಕರೆತರಲು ಟಿಕೆಟ್ ದರದಲ್ಲಿ ಬದಲಾವಣೆ ಮಾಡಿದೆ. ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಗುರುವಾರ ಸಂಜೆ 7 ಗಂಟೆಯಿಂದ ಟಿಕೆಟ್ ಮಾರಾಟ ಆರಂಭವಾಗಲಿದೆ. ವಿಶ್ವದಾದ್ಯಂತ ಟಿಕೆಟ್‌ಗಳನ್ನು Tickets.cricketworldcup.com ಮೂಲಕ ಪಡೆಯಬಹುದಾಗಿದೆ. ಈ ಟಿಕೆಟ್‌ಗಳನ್ನು ಸೋಮವಾರ (ಸೆ.8) ಸಂಜೆ 7ಕ್ಕೆ ಟಿಕೆಟ್ ಮಾರಾಟ ಕೊನೆಗೊಳ್ಳಲಿದೆ. ಇನ್ನು ಮತ್ತೊಮ್ಮೆ ಟಿಕೆಟ್ ಮಾರಾಟ ಸೆ.9 ರಂದು ರಾತ್ರಿ 8 ರಿಂದ ಮಾರಾಟವಾಗಲಿದೆ.

12 ವರ್ಷದ ಬಳಿಕ ಮಹಿಳಾ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಈ ಪಂದ್ಯಗಳು ಭಾರತದ ಗುವಾಹಟಿ, ಇಂದೋರ್, ವಿಶಾಖಪಟ್ಟಣಂ, ನವಿ ಮುಂಬೈ ಹಾಗೂ ಶ್ರೀಲಂಕಾದ ಕೊಲಂಬೊದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಗುವಾಹಟಿಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭವು ಕ್ರಿಕೆಟ್, ಸಂಸ್ಕೃತಿ ಮತ್ತು ಸಂಗೀತದೊಂದಿಗೆ ಅಭಿಮಾನಿಗಳನ್ನು ಸೆಳೆಯಲಿದೆ.
ಯಾಸ್ತಿಕಾ ಭಾಟಿಯಗೆ ಗಾಯ
ಭಾರತ ತಂಡದಲ್ಲಿ ಉಮಾ ಚೆಟ್ರಿ ಅವರು ಸ್ಥಾನ ಪಡೆದಿದ್ದಾರೆ. ಇವರು ಗಾಯಾಳು ಯಾಸ್ತಿಕಾ ಭಾಟಿಯ ಅವರನ್ನು ರಿಪ್ಲೇಸ್ ಮಾಡಲಿದ್ದಾರೆ. ಯಾಸ್ತಿಕಾ ಭಾಟಿಯ ವಿಶಾಖಪಟ್ಟಣಂನಲ್ಲಿ ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಇವರ ಬದಲಿಗೆ ಉಮಾ ಚೆಟ್ರಿ ಅವರನ್ನು ತಂಡಕ್ಕೆ ಸೇರಿಸಕೊಳ್ಳಲಾಗಿದೆ. ಈ ತಂಡವನ್ನು ನಾಯಕಿ ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಈ ಟೂರ್ನಿಯಲ್ಲಿ ಸ್ಮೃತಿ ಮಂಧನಾ ಉಪನಾಯಕಿ ಯಾಗಿ ಕಾಣಿಸಿಕೊಳ್ಳಲಿದ್ದಾರೆ. ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರೇಣುಕಾ ಸಿಂಗ್ ಠಾಕೂರ್ ಮತ್ತು ರಿಚಾ ಘೋಷ್. ಪಂದ್ಯಾವಳಿಯಲ್ಲಿ ತೇಜಲ್ ಹಸಬ್ನಿಸ್, ಪ್ರೇಮಾ ರಾವತ್, ಪ್ರಿಯಾ ಮಿಶ್ರಾ, ಮಿನ್ನು ಮಣಿ ಮತ್ತು ಸಯಾಲಿ ಸತ್ಘರೆ ಸೇರಿದಂತೆ ಸ್ಟ್ಯಾಂಡ್‌ಬೈ ಆಟಗಾರರು ಇದ್ದಾರೆ.

ಗಾಯಕಿ ಶ್ರೇಯಾ ಘೋಷಾಲ್ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಸಂಗೀತ ಸುಧೆಯನ್ನು ಅಭಿಮಾನಿಗಳಿಗೆ ಉಣ ಬಡಿಸಲಿದ್ದಾರೆ.
ಭಾರತ ತಂಡದ ಸಂಪೂರ್ಣ ವೇಳಾ ಪಟ್ಟಿ
ಸೆ.30, ಗುವಾಹಟಿ, ಶ್ರೀಲಂಕಾ
ಅ.5, ಕೊಲಂಬೊ, ಪಾಕಿಸ್ತಾನ
ಅ.9, ವಿಶಾಖಪಟ್ಟಣಂ, ದಕ್ಷಿಣ ಆಫ್ರಿಕಾ
ಅ.12, ವಿಶಾಖಪಟ್ಟಣಂ, ಆಸ್ಟ್ರೇಲಿಯಾ
ಅ.19, ಇಂದೋರ್, ಇಂಗ್ಲೆಂಡ್
ಅ.23, ಮುಂಬೈ, ನ್ಯೂಜಿಲೆಂಡ್
ಅ.26, ಮುಂಬೈ, ಬಾಂಗ್ಲಾದೇಶ
ಅ.29, ಮೊದಲ ಸೆಮಿಫೈನಲ್
ಅ.30, ಮುಂಬೈ, ಎರಡನೇ ಸೆಮಿಫೈನಲ್
ನ.2, ಫೈನಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications