Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುಎಇ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಗೆಲುವು

ವೆಲ್ಲಿಂಗ್ಟನ್, ಮಾ.13: ನಾಯಕ ಎಬಿ ಡಿ ವಿಲೆಯರ್ಸ್ (99) ಹಾಗೂ ಫರ್ಹಾನ್ ಬೆಹರ್ದೀನ್ (64ರನ್) ಅವರ ಅಮೋಘ ಆಟದ ನೆರವಿನಿಂದ ಯುಎಇ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಗೆಲುವು ಸಾಧಿಸಿದೆ. 342 ರನ್ ಗಳ ಬೃಹತ್ ಮೊತ್ತ ಚೇಸ್ ಮಾಡಿದ ಯುಎಇ ತಂಡ 47.3 ಓವರ್ ಗಳಲ್ಲಿ 195 ಸ್ಕೋರಿಗೆ ಆಲೌಟ್ ಆಗಿ ಸೊಲೊಪ್ಪಿಕೊಂಡಿದೆ.

342 ರನ್ ಗುರಿ ಬೆನ್ನು ಹತ್ತಿದ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡ ಆರಂಭಿಕ ಆಘಾತ ಅನುಭವಿಸಿತು. ತಂಡದ ಮೊತ್ತ 29 ಆಗಿದ್ದಾಗ ಬೆರೆಂಜರ್ 5 ರನ್ ಗಳಿಸಿ ಮಾರ್ಕೆಲ್ ಗೆ ವಿಕೆಟ್ ಒಪ್ಪಿಸಿದರು. ನಂತರ ಅಮ್ಜದ್ ಅಲಿ 21 ರನ್, ಖುರಂ ಖಾನ್ 12ರನ್ ಗಳಿಸಿ ಪೆವಿಲಿಯನ್ ಸೇರಿದರು. ಶೈಮಾನ್ ಅನ್ವರ್ ಉತ್ತಮ ಬ್ಯಾಟಿಂಗ್ ಆಟ ಪ್ರದರ್ಶನ ನೀಡಿದರೂ 39 ರನ್ ಗಳಿಸಿ ಔಟಾದರು.

ಉಳಿದಂತೆ ಪಾಟೀಲ್ 57 ರನ್ ಗಳಿಸಿ ಅಜೇಯರಾಗಿ ಉಳಿದರು. ದಕ್ಷಿಣ ಆಫ್ರಿಕಾ ಪರ ಫಿಲ್ಯಾಂಡರ್, ಮಾರ್ಕೆಲ್ ಹಾಗೂ ನಾಯಕ ಎಬಿ ಡಿವಿಲೆಯರ್ಸ್ ತಲಾ 2 ವಿಕೆಟ್ ಕಿತ್ತರು. ಸ್ಟೇನ್, ಡುಮಿನಿ, ತಾಹೀರ್ ತಲಾ 1 ವಿಕೆಟ್ ಪಡೆದರು.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್: ದಕ್ಷಿಣ ಆಫ್ರಿಕಾ ಆರಂಭ ಕಳಪೆಯಾಗಿತ್ತು. ಭರವಸೆ ಆಟಗಾರ ಹಶೀಂ ಆಮ್ಲಾ 12 ರನ್ ಗಳಿಸಿ ಔಟಾದರು. ಡಿ ಕಾಕ್ 26 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ರೋಸೋ ಹಾಗೂ ಎಬಿ ಡಿ ವಿಲೆಯರ್ಸ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

Match Report: De Villiers, Behardien propel South Africa to 341/6 against UAE

ಎಬಿ ಡಿವಿಲೆಯರ್ಸ್ 99 ರನ್(82ಎ, 6x4, 4x6) ಗಳಿಸಿ ಕಮ್ರಾನ್ ಶಜಾದ್ ಗೆ ವಿಕೆಟ್ ಒಪ್ಪಿಸಿದರು. ರೋಸೋ 43 ರನ್ ಗಳಿಸಿ ಔಟಾದರೆ, ಡೇವಿಡ್ ಮಿಲ್ಲರ್ 49ರನ್ ಗಳಿಸಿ ಅರ್ಧ ಶತಕ ಗಳಿಸದೆ ಪೆವಿಲಿಯನ್ ಗೆ ಮರಳಿದರು. ಕೊನೆ ಹಂತದಲ್ಲಿ ಫರ್ಹಾನ್ ಬೆಹರ್ದೀನ್ 31 ಎಸೆತಗಳಲ್ಲಿ 64 ರನ್ (5x4,3X6) ಚೆಚ್ಚಿದರು. 50 ಓವರ್ ಗಳಲ್ಲಿ 6 ವಿಕೆಟ್ ಗಳಿಸಿ 341ಸ್ಕೋರ್ ಮಾಡಿತು. ಯುಎಇ ಪರ ಮಹಮ್ಮದ್ ನವೀದ್ 63ಕ್ಕೆ3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+