Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕುಂಬ್ಳೆ ಪ್ರಕಾರ ವಿಶ್ವಕಪ್‌ನಲ್ಲಿ ಈ ತಂಡ ಖಂಡಿತಾ ಸೆ.ಫೈನಲ್ ಪ್ರವೇಶಿಸಲಿದೆ!

ICC World Cup 2019: Anil Kumble picks his ‘definite’ semi-finalist

ಬೆಂಗಳೂರು, ಮೇ 17: ಐಸಿಸಿ ವಿಶ್ವಕಪ್‌ನಲ್ಲಿ ಐದು ಸಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ ಆಸ್ಟ್ರೇಲಿಯಾ. ಈ ಸಾರಿಯ ಕ್ರಿಕೆಟ್ ವಿಶ್ವಕಪ್‌ನ ಆತಿಥ್ಯವನ್ನು ಯುನೈಟೆಡ್ ಕಿಂಗ್ಡಮ್ ವಹಿಸುತ್ತಿದ್ದು, ಹಾಲಿ ಚಾಂಪಿಯನ್ ಪಟ್ಟವಿಂದಿಗೂ ಕಾಂಗರೂ ಪಡೆಯ ಹೆಸರಿನಲ್ಲಿದೆ.

ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಆತಿಥೇಯರ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪದಲ್ಲಿ ಪಾಲ್ಗೊಂಡು ಆಸೀಸ್ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಒಂದು ವರ್ಷದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಇಬ್ಬರು ಪ್ರತಿಭಾನ್ವಿತ ಬ್ಯಾಟ್ಸ್ಮನ್‌ಗಳು ತಂಡದಿಂದ ಹೊರಬಿದ್ದಿದ್ದರ ಬಿಸಿ ಕಾಂಗರೂ ಪಡೆಗೆ ತಾಕಿತ್ತು.

ಸ್ಮಿತ್-ವಾರ್ನರ್ ನಿಷೇಧ ಶಿಕ್ಷೆಗೆ ಗುರಿಯಾದ ಬಳಿಕ ಆಸ್ಟ್ರೇಲಿಯಾ ಕಳಪೆ ಫಾರ್ಮ್‌ಗಾಗಿ ಮುಖಭಂಗ ಅನುಭವಿಸಿತ್ತು. ಮತ್ತೆ ಬರಬರುತ್ತಾ ಚೇತರಿಕೆ ಕಂಡ ಆಸೀಸ್, ಪ್ರಸಕ್ತ ವರ್ಷಾಂರಂಭದಲ್ಲಿ ಭಾರತ ಪ್ರವಾಸದ ವೇಳೆ ಏಕದಿನ ಸರಣಿಯಲ್ಲಿ 3-2ರ ಗೆಲುವು, ಪಾಕಿಸ್ತಾನ ವಿರುದ್ಧ 5-0 ಜಯ ಸಂಭ್ರಮಿಸಿತ್ತು.

ನಿಷೇಧ ಮುಕ್ತಾಯಗೊಂಡಿರುವುದರಿಂದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ವಿಶ್ವಕಪ್ ತಂಡವನ್ನು ಸೇರಿಕೊಂಡಿದ್ದಾಗಿದೆ. ಈ ಬಾರಿಯೂ ಆಸೀಸ್ ಗೆಲ್ಲುವ ಮುನ್ಸೂಚನೆ ನೀಡಿದೆ. ಇದನ್ನೇ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಹೇಳಿಕೊಂಡಿದ್ದಾರೆ.

'ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಇದುವರೆಗೂ ಉತ್ತಮ ಪ್ರದರ್ಶನ ನೀಡಿದೆ. ಪ್ರಶಸ್ತಿ ಗೆಲ್ಲುವಷ್ಟು ಬಲಿಷ್ಠವಾಗಿಯೂ ಆಸೀಸ್ ಇದೆ. ಇಂಗ್ಲೆಂಡ್ ಪರಿಸ್ಥಿತಿಗಳ ಬಗ್ಗೆ ಕಾಂಗರೂ ಪಡೆಗೆ ಅರಿವಿದೆ. ಹೀಗಾಗಿ ಆಸ್ಟ್ರೇಲಿಯಾ ಈ ಬಾರಿ ಸೆಮಿಫೈನಲ್‌ಗಂತೂ ಖಂಡಿತಾ ಪ್ರವೇಶಿಸಲಿದೆ' ಎಂದು ಕ್ರಿಕೆಟ್ ನೆಕ್ಸ್ಟ್ ಜೊತೆ ಮಾತನಾಡುತ್ತ ಕುಂಬ್ಳೆ ಹೇಳಿಕೊಂಡಿದ್ದಾರೆ.

Story first published: Friday, May 17, 2019, 19:23 [IST]
Other articles published on May 17, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+