ಟೀಮ್ ಇಂಡಿಯಾದ 2019ರ ವಿಶ್ವಕಪ್ ಭವಿಷ್ಯ ನುಡಿದ ಬ್ರಿಯಾನ್ ಲಾರಾ

ನವದೆಹಲಿ, ಮೇ 21: ಈ ಬಾರಿಯ ವಿಶ್ವಕಪ್‌ಗಾಗಿ ವಿರಾಟ್ ಕೊಹ್ಲಿ ಬಳಗ ಸಂಪೂರ್ಣ ಸಮತೋಲನದಲ್ಲಿದೆ. ಅನುಭವಿ ಆಟಗಾರರು ಅವರವರ ಪ್ರದರ್ಶನ ನೀಡಿದರೆ ಟೀಮ್ ಇಂಡಿಯಾ ಪ್ರಶಸ್ತಿ ಜಯಿಸಲಿದೆ ಎಂದು ವೆಸ್ಟ್ ಇಂಡೀಸ್ ಮಾಜಿ ನಾಯಕ ಬ್ರಿಯಾನ್ ಲಾರಾ ಹೇಳಿದ್ದಾರೆ.
'ಭಾರತ ಕ್ರಿಕೆಟ್ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಮತ್ತೆ ಚಾಂಪಿಯನ್ ಅನ್ನಿಸಿಕೊಂಡರೆ ಅದರಲ್ಲಿ ಅಚ್ಚರಿಯಿಲ್ಲ. ಅವರು ಈಗಾಗಲೇ ವಿಭಿನ್ನ ಪರಿಸ್ಥಿತಿಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ' ಎಂದು ಕ್ರಿಕ್‌ಬಝ್ ಜೊತೆ ಮಾತನಾಡುತ್ತ ಲಾರಾ ಅಭ್ರಿಪ್ರಾಯಿಸಿದ್ದಾರೆ.
ಮಾತು ಮುಂದುರೆಸಿದ ಲಾರಾ, 'ಅಲ್ಲದೆ ಭಾರತ ತಂಡ ಸಂಪೂರ್ಣವಾಗಿ ಸಮತೋಲನದಲ್ಲಿದೆ. ಅವರು ಗೆದ್ದರೆ ನಮಗೇನೂ ಬೇಸರವಿಲ್ಲ. ಯಾಕೆಂದರೆ ಟೀಮ್ ಇಂಡಿಯಾ ಬಲಿಷ್ಠವಾಗಿದೆ ಎನ್ನೋದರಲ್ಲಿ ಅನುಮಾನವಿಲ್ಲ' ಎಂದು ತಿಳಿಸಿದ್ದಾರೆ.
ತವರಿನಲ್ಲೇ ಟೂರ್ನಿ ನಡೆಯುತ್ತಿರುವುದರಿಂದ ಇಂಗ್ಲೆಂಡ್ ಕೂಡ ಪ್ರಶಸ್ತಿಗೆ ಸ್ಪರ್ಧಿ ತಂಡ. ಏಕದಿನ ಕ್ರಿಕೆಟ್‌ನಲ್ಲಿ ನಂ.1 ಸ್ಥಾನದಲ್ಲಿರುವ ಇಯಾನ್ ಮಾರ್ಗನ್ ಮುಂದಾಳತ್ವದ ಇಂಗ್ಲೆಂಡ್ ಈಗ ಉತ್ತಮ ಫಾರ್ಮ್‌ನಲ್ಲೂ ಇದೆ ಎಂದು ಬ್ರಿಯಾನ್ ಲಾರಾ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications