ವಿಶ್ವಕಪ್ ಇತಿಹಾಸ ನಿರ್ಮಿಸಿದ ಆ್ಯರನ್ ಫಿಂಚ್-ಡೇವಿಡ್ ವಾರ್ನರ್ ಜೋಡಿ!

ಲಂಡನ್, ಜೂನ್ 26: ಲಂಡನ್‌ನ ಲಾರ್ಡ್ಸ್‌ನಲ್ಲಿ ಮಂಗಳವಾರ (ಜೂನ್ 25) ನಡೆದ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಯಾದ ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ಆ್ಯರನ್ ಫಿಂಚ್ ಅದ್ಭುತ ಜೊತೆಯಾಟ ನೀಡಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 64 ರನ್ ಜಯ ಗಳಿಸಿತ್ತು.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಮಂಗಳವಾರ, ಐಸಿಸಿ ವಿಶ್ವಕಪ್ 2019ರಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿ ಆಸ್ಟ್ರೇಲಿಯಾ ಗುರುತಿಸಿಕೊಳ್ಳುವಲ್ಲಿ ವಾರ್ನರ್-ಫಿಂಚ್ ಪ್ರಮುಖ ಪಾತ್ರ ವಹಿಸಿದ್ದರು. ಈ ಪಂದ್ಯದ ಜೊತೆಯಾಟದ ಮೂಲಕ ಈ ಆರಂಭಿಕ ಜೋಡಿ ವಿಶ್ವಕಪ್ ಇತಿಹಾಸ ನಿರ್ಮಿಸಿದೆ. ವಿಶ್ವಕಪ್ ನಲ್ಲಿ ಸತತ 5 ಇನ್ನಿಂಗ್ಸ್‌ಗಳಲ್ಲಿ 50+ ರನ್ ಗಳಿಸಿದ ಮೊದಲ ಆರಂಭಿಕ ಜೋಡಿಯಾಗಿ ಫಿಂಚ್-ವಾರ್ನರ್ ಗುರುತಿಸಿಕೊಂಡಿದ್ದಾರೆ.
ವಿಶ್ವಕಪ್‌ನಲ್ಲಿ ಸತತ 5 ಇನ್ನಿಂಗ್ಸ್‌ಗಳಲ್ಲಿ 50+ ರನ್ ಆರಂಭಿಕ ಜೊತೆಯಾಟದ ಸಾಧನೆ ಯಾಕೆ ವಿಶಿಷ್ಠ ಎನ್ನುವುದಕ್ಕೆ ಇಲ್ಲೊಂದಿಷ್ಟು ಮಾಹಿತಿಯಿದೆ.

ಸತತ 4 ಬಾರಿ 50+ ರನ್
ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿದ ಜೋಡಿ ಸತತ 4 ಇನ್ನಿಂಗ್ಸ್‌ಗಳಲ್ಲಿ 50+ ರನ್ ಗಳಿಸಿದ ಹಿಂದಿನ ದಾಖಲೆಯಿದೆ. ವಿಶ್ವಕಪ್‌ನಲ್ಲಿ 4 ಆರಂಭಿಕ ಜೋಡಿಗಳು 50+ ರನ್ ಜೊತೆಯಾಟ ನೀಡಿವೆ. ಆದರೆ ವಿಶ್ವಕಪ್‌ನಲ್ಲಿ ಆರಂಭಿಕ ಬ್ಯಾಟ್ಸ್ಮನ್‌ಗಳು ಸತತ ಐದು ಪಂದ್ಯಗಳಲ್ಲಿ 50+ ರನ್ ಮೈಲಿಗಲ್ಲು ಸ್ಥಾಪಿಸಿದ್ದು ಇದೇ ಮೊದಲು. ಈ ಅಪೂರ್ವ ಸಾಧನೆ ಸದ್ಯ ವಾರ್ನರ್-ಫಿಂಚ್ ಹೆಸರಲ್ಲಿ ದಾಖಲಾಗಿದೆ.

ಆ್ಯರನ್ ಫಿಂಚ್ ಶತಕ
ಇದೇ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ 116 ಎಸೆತಗಳಿಗೆ ಭರ್ತಿ 100 ರನ್ ಬಾರಿಸಿದರು. ಇದು ಫಿಂಚ್ ಈ ಟೂರ್ನಿಯಲ್ಲಿ ದಾಖಲಿಸಿದ 2ನೇ ಶತಕ. ಇತ್ತ ಡೇವಿಡ್ ವಾರ್ನರ್ 61 ಎಸೆತಗಳಿಗೆ 53 ರನ್ ಸೇರಿಸಿದ್ದರು. ಆಸ್ಟ್ರೇಲಿಯಾ 50 ಓವರ್‌ಗೆ 285 ರನ್ ಬಾರಿಸಿತ್ತು. ಆದರೆ ಇಂಗ್ಲೆಂಡ್, ಬೆನ್ ಸ್ಟೋಕ್ಸ್ 89 ರನ್ ಹೊರತಾಗಿಯೂ 44.4 ಓವರ್‌ನಲ್ಲಿ ಎಲ್ಲಾ ವಿಕೆಟ್ 221 ಪೇರಿಸಿತು.

ಸತತ ನಾಲ್ಕು 50+ ರನ್, 4 ಜೋಡಿ
ಇಂಗ್ಲೆಂಡ್‌ನ ಕ್ರಿಸ್ ತವಾರೆ-ಗ್ರೇಮ್ ಫೌಲರ್ (1983), ಆಸ್ಟ್ರೇಲಿಯಾದ ಡೇವಿಡ್ ಬೂನ್-ಜೆಫ್ ಮಾರ್ಷ್ (1987-92), ಪಾಕಿಸ್ತಾನದ ಆಮರ್ ಸೊಹೈಲ್-ಸಾಯೀದ್ ಅನ್ವರ್ (1996), ಆಸೀಸ್‌ನ ಆ್ಯಡಂ ಗಿಲ್‌ಕ್ರಿಸ್ಟ್-ಮ್ಯಾಥ್ಯೂ ಹೇಡನ್ (2003-07) ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಸತತ 4 ಪಂದ್ಯಗಳಲ್ಲಿ 50+ ರನ್ ಗಳಿಸಿ ಗುರುತಿಸಿಕೊಂಡಿದ್ದರು.

ಡೇವಿಡ್ ವಾರ್ನರ್ ಮುಂದು
ಟೂರ್ನಿಯಲ್ಲಿ ಒಟ್ಟು ಅತ್ಯಧಿಕ ರನ್ ಸಾಧಕರಲ್ಲಿ ಸದ್ಯ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟು 7 ಇನ್ನಿಂಗ್ಸ್‌ಗಳಲ್ಲಿ ವಾರ್ನರ್ ಭರ್ತಿ 500 ರನ್ ಬಾರಿಸಿದ್ದಾರೆ. ಇದರಲ್ಲಿ 46 ಬೌಂಡರಿ, 6 ಸಿಕ್ಸರ್‌ಗಳು ಸೇರಿವೆ. ವಾರ್ನರ್ ಕೂಡ ಟೂರ್ನಿಯಲ್ಲಿ 2 ಶತಕಗಳನ್ನು ಬಾರಿಸಿದ್ದಾರೆ. ಒಟ್ಟು ರನ್ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಆ್ಯರನ್ ಫಿಂಚ್ 496 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications