15 ವರ್ಷಗಳ ನಂತರ ಕ್ರಿಕೆಟರ್ ದಿನೇಶ್ ಕಾರ್ತಿಕ್ ಕನಸು ನನಸು

ಬೆಂಗಳೂರು, ಜುಲೈ 02: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಅವರ ಕನಸು ಕೊನೆಗೂ ನನಸಾಗಿದೆ. ವಿಶ್ವಕಪ್ ತಂಡದ ಆಡುವ ಹನ್ನೊಂದಲ್ಲಿ ದಿನೇಶ್ ಕಾಣಿಸಿಕೊಂಡಿದ್ದಾರೆ.
ಐಸಿಸಿ ವಿಶ್ವಕಪ್ ಕ್ರಿಕೆಟ್ 2019ರ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಡುವ ಆವಕಾಶ ಪಡೆದುಕೊಂಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾಧವ್ ಬದಲಿಗೆ ಆಡಲು ದಿನೇಶ್ ಆಯ್ಕೆಯಾಗುವ ಮೂಲಕ ವಿಶ್ವಕಪ್ ಪಂದ್ಯದಲ್ಲಿ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದಾರೆ.
34 ವರ್ಷದ ದಿನೇಶ್ ಅವರು 15 ವರ್ಷಗಳ ಹಿಂದೆ 2004ರಲ್ಲಿ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ್ದರು. ಆನಂತರ ಒಟ್ಟು 91 ಪಂದ್ಯವಾಡಿದರೂ ವಿಶ್ವಕಪ್ ನಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. 2007ರ ವಿಶ್ವಕಪ್ ತಂಡಕ್ಕೆ ಕಾರ್ತಿಕ್ ಆಯ್ಕೆಯಾದರೂ ಆಡಲು ಅವಕಾಶ ಸಿಕ್ಕಿರಲಿಲ್ಲ. ನಂತರ 2011, 2015ರ ವಿಶ್ವಕಪ್ ತಂಡಕ್ಕೆ ಕಾರ್ತಿಕ್ ಆಯ್ಕೆಯಾಗಿರಲಿಲ್ಲ.
92ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿರುವ ದಿನೇಶ್ ಕಾರ್ತಿಕ್ ಅವರು 1,138 ರನ್ ಗಳಿಸಿದ್ದು, ವೈಯಕ್ತಿಕ 79 ಗರಿಷ್ಠ ಸ್ಕೋರ್ ಬಾರಿಸಿದ್ದಾರೆ. ನಿದಹಾಸ್ ಟ್ರೋಫಿಯ ಅಂತಿಮ ಹಣಾಹಣಿಯಲ್ಲಿ ಕೊನೆ ಓವರ್ ನಲ್ಲಿ ದಿನೇಶ್ ಆರ್ಭಟಿಸಿ ಕಪ್ ಗೆಲ್ಲಿಸಿ ಕೊಟ್ಟಿದ್ದರು. ಟೀಂ ಇಂಡಿಯಾದ ಖಾಯಂ ವಿಕೆಟ್ ಕೀಪರ್, ಮಾಜಿ ನಾಯಕ ಎಂಎಸ್ ಧೋನಿ ಅವರ ಜೊತೆಗೆ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ತಂಡಕ್ಕೆ ಆಯ್ಕೆಯಾಗಿದ್ದು, ಇತ್ತೀಚೆಗೆ ರಿಷಬ್ ಪಂತ್ ಕೂಡಾ ತಂಡ ಸೇರಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications