ವಿಶ್ವಕಪ್ 2019: ಉದ್ಘಾಟನಾ ಪಂದ್ಯಕ್ಕೆ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ರೆಡಿ

ಲಂಡನ್, ಮೇ 27: ಮೇ 30ರಿಂದ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡದ ವೇಗಿ ಮಾರ್ಕ್ ವುಡ್, ಗಾಯದಿಂದ ಚೇತರಿಸಿಕೊಂಡಿದ್ದಾರೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎಂದು ತಂಡ ಮಾಹಿತಿ ಒದಗಿಸಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಸೌತಾಂಪ್ಟನ್ ನಲ್ಲಿ ಶನಿವಾರ (ಮೇ 25) ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ವಾರ್ಮ್ ಅಪ್ ಪಂದ್ಯದಲ್ಲಿ ಬೌಲಿಂಗ್‌ಗಾಗಿ ಓಡುವಾಗ ಕಾಲು ನೋವಿಗೆ ಒಳಗಾಗಿ ಮಾರ್ಕ್ ವುಡ್ ಮೈದಾನದಿಂದ ಹೊರ ನಡೆದಿದ್ದರು. ಆ ವೇಳೆ ವುಡ್ 3.1 ಓವರ್ ಎಸೆದಿದ್ದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 12 ರನ್‌ಗಳ ಜಯ ಸಾಧಿಸಿತ್ತು.
ಮೇಲಿಂದ ಮೇಲೆ ಪಾದದ (ಆ್ಯಂಕಲ್) ಗಾಯಕ್ಕೆ ತುತ್ತಾಗುತ್ತಲೇ ಇರುವ 29ರ ಹರೆಯದ ಮಾರ್ಕ್, ಆ ಬಳಿಕ ಸ್ಕ್ಯಾನಿಂಗ್‌ಗೆ ಒಳಗಾಗಿದ್ದರು. ಸ್ಕ್ಯಾನಿಂಗ್ ವರದಿಯನ್ನನುಸರಿಸಿ ವುಡ್, ಗುರುವಾರ (ಮೇ 30) ನಡೆಯಲಿರುವ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲು ಅನುವು ಮಾಡಲಾಗಿದೆ.
ಗಾಯದಿಂದ ಚೇತರಿಸಿಕೊಂಡಿರುವ ಮಾರ್ಕ್ ವುಡ್ ಸೋಮವಾರ (ಮೇ 27) ಅಫ್ಘಾನಿಸ್ತಾನ ವಿರುದ್ಧದ ವಾರ್ಮ್ ಅಪ್ ಪಂದ್ಯಕ್ಕೆ ಮೈದಾನಕ್ಕಿಳಿಯಲು ತಯಾರಾಗಿದ್ದರು. ಆದರೆ ಮುಂದೆ ಪ್ರಮುಖ ಪಂದ್ಯವಿರುವುದರಿಂದ ಅವರು ಸೋಮವಾರ ತಂಡದಲ್ಲಿ ಆಡುತ್ತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications