Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌: ಮ್ಯಾಕ್ಸ್‌ವೆಲ್ ಮಿಂಚೋದು ಬ್ಯಾಟಿಂಗ್‌ನಲ್ಲ ಇಲ್ಲ ಬೌಲಿಂಗ್‌ನಲ್ಲ?!

ICC World Cup 2019: Glenn Maxwell wants to contribute more with the ball

ಸಿಡ್ನಿ, ಮೇ 22: ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚೋದು ಬ್ಯಾಟಿಂಗ್‌ನಲ್ಲ ಇಲ್ಲ ಬೌಲಿಂಗ್‌ನಲ್ಲ? ಬೌಲಿಂಗ್‌ನಲ್ಲಿ ಅಂತಿದ್ದಾರೆ ಸ್ವತಃ ಮ್ಯಾಕ್ಸ್‌ವೆಲ್. ಮ್ಯಾಕ್ಸ್‌ವೆಲ್ ಅವರ ಆಫ್‌ ಸ್ಪಿನ್‌ ಬೌಲಿಂಗ್‌ಗೆ ಬ್ಯಾಟ್ಸ್ಮನ್‌ಗಳು ಬಲಿಯಾಗಬಲ್ಲರು. ಹೀಗಾಗಿ ಗ್ಲೆನ್‌ ಬೌಲಿಂಗ್‌ ಕೊಡುಗೆಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಕಾಂಗರೂ ಪಡೆ ಯೋಜನೆ ಹಾಕಿಕೊಂಡಿದೆ.

ಕಳೆದ ಸಾರಿ ಅಂದರೆ 2015ರಲ್ಲಿ ವಿಶ್ವಕಪ್‌ ಆತಿಥ್ಯವನ್ನು ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ವಹಿಸಿಕೊಂಡಿದ್ದವು. ತವರಿನ ವೇಗಿ ಸ್ನೇಹಿ ಪಿಚ್‌ನಲ್ಲಿ ನಡೆದಿದ್ದ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ 6 ವಿಕೆಟ್‌ಗಳನ್ನು ಪಡೆದಿದ್ದರಲ್ಲದೆ, 324 ವೈಯಕ್ತಿಕ ರನ್ ಕೂಡ ಕಲೆ ಹಾಕಿದ್ದರು. ಹೀಗಾಗಿ ಟ್ರೋಫಿ ಆಸೀಸ್ ತಂಡದ ಪಾಲಾಗಿತ್ತು.

ಇಂಗ್ಲೆಂಡ್‌ ಬ್ಯಾಟಿಂಗ್‌ ಪಿಚ್ ಆದರೂ, ಅಲ್ಲಿ ಸ್ಪಿನ್ ಪರಿಣಾಮಕಾರಿಯಾಗಬಲ್ಲದು ಎಂದು ಭಾವಿಸಲಾಗಿದೆ. ಹೀಗಾಗಿ ಮ್ಯಾಕ್ಸ್‌ವೆಲ್ ಅವರು ಸ್ಪಿನ್ ಸ್ಪೆಶಾಲಿಷ್ಟ್‌ಗಳಾದ ನಾಥನ್ ಲಿಯಾನ್ ಮತ್ತು ಆದಂ ಝಂಪಾ ಜೊತೆ ತಂಡಕ್ಕೆ ಮಹತ್ತರ ಕೊಡುಗೆ ನೀಡುವುದರಲ್ಲಿದ್ದಾರೆ.

'ನಾನು ಚೆಂಡು ಎಸೆಯುವಾಗೆಲ್ಲ ಚೆಂಡು ಬೌಂಡರಿ ಗೆರೆ ದಾಟದಂತೆ ನೋಡಿಕೊಳ್ಳುತ್ತೇನೆ. ಬೌಂಡರಿ ಗೆರೆ ದಾಟಿಲ್ಲವೆಂದರೆ ಅದರರ್ಥ ಒಂದೋ ಔಟ್ ಅಥವಾ ಡಾಟ್ ಅನ್ನಿಸುವ ಸಾಧ್ಯತೆಗಳು ಹೆಚ್ಚು. ಇದು ಪಂದ್ಯದ ಕೊನೇ ಕ್ಷಣಗಳಲ್ಲಿ ಎದುರಾಳಿ ತಂಡವನ್ನು ಇಕ್ಕಟ್ಟಿಗೀಡು ಮಾಡಬಲ್ಲದು' ಎಂದು ಗ್ಲೆನ್ ಹೇಳಿಕೊಂಡಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಮತ್ತು ಭಾರತ ಪ್ರವಾಸ ಸರಣಿಯ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಅನೇಕ ಓವರ್‌ಗಳನ್ನು ಎಸೆದಿದ್ದರು. ವಿಕೆಟ್‌ಗಳನ್ನು ಕೂಡ ಪಡೆದಿದ್ದರು. ಈ ಸರಣಿಗಳಲ್ಲಿ ಆಸೀಸ್ ಗೆಲುವಿಗೆ ಮ್ಯಾಕ್ಸ್‌ವೆಲ್ ಬೌಲಿಂಗ್ ಕೊಡುಗೆ ಗಮನಾರ್ಹವಾಗಿತ್ತು.

Story first published: Wednesday, May 22, 2019, 13:10 [IST]
Other articles published on May 22, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+