For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಕಿಂಗ್ ಕೊಹ್ಲಿ ದಾಖಲೆ ಮುರಿಯಲಿದ್ದಾರೆ ಹಾಶಿಮ್ ಆಮ್ಲಾ!

ICC World Cup 2019: ವಿರಾಟ್ ಕೊಹ್ಲಿ ದಾಖಲೆಯನ್ನ ಮುರಿಯಲಿದ್ದಾರಾ ಹಾಶಿಮ್ ಆಮ್ಲಾ?
ICC World Cup 2019: Hashim Amla on verge of breaking Virat Kohli’s ODI record

ಲಂಡನ್, ಮೇ 30: ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್ಮನ್ ಹಾಶಿಮ್ ಆಮ್ಲಾ ಅವರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದೀರ್ಘಕಾಲದ ದಾಖಲೆಯೊಂದನ್ನು ಮುರಿಯುವುದರಲ್ಲಿದ್ದಾರೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಗುರುವಾರ (ಮೇ 30) ನಡೆಯಲಿರುವ ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ ನಡುವಣ ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಆಮ್ಲಾಗೆ ಕೊಹ್ಲಿ ದಾಖಲೆ ಸರಿಗಟ್ಟಲು ಅವಕಾಶವಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮೇ 30ರಂದು ನಡೆಯುವ ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಆಮ್ಲಾ ಏನಾದರೂ 90 ರನ್ ಬಾರಿಸಿದರೆ, ದಕ್ಷಿಣ ಆಫ್ರಿಕಾ ಪರ 8000 ರನ್ ಪೂರೈಸಿದ ನಾಲ್ಕನೇ ಆಟಗಾರನಾಗಿ ಹಾಶಿಮ್ ಗುರುತಿಸಿಕೊಳ್ಳಲಿದ್ದಾರೆ.

ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, ಮೇ 30, ಕ್ರಿಕೆಟ್ ವಿಶ್ವಕಪ್ Live ಸ್ಕೋರ್‌ಕಾರ್ಡ್

1
43644

ಕೊಹ್ಲಿ ದಾಖಲೆ ಮುರಿಯುವ ಜೊತೆ ಎಲ್ಲೆಲ್ಲಿ ದಾಖಲೆ ನಿರ್ಮಿಸಲು ಆಮ್ಲಾಗೆ ಅವಕಾಶವಿದೆ ಎಂದು ಇಲ್ಲಿ ಸಂಕ್ಷಿಪ್ತ ಮಾಹಿತಿಯಿದೆ.

ವೇಗದ 8000 ರನ್‌

ವೇಗದ 8000 ರನ್‌

ಗುರುವಾರದ ಪಂದ್ಯದಲ್ಲಿ ಆಮ್ಲಾ 90 ರನ್ ಬಾರಿಸಿದರೆ ದಕ್ಷಿಣ ಆಫ್ರಿಕಾ ಪರ 8000 ರನ್ ಬಾರಿಸಿದ ನಾಲ್ಕನೇ ಆಟಗಾರ ಕೀರ್ತಿಗೆ ಆಮ್ಲಾ ಪಾತ್ರರಾಗಲಿದ್ದಾರೆ. ದಕ್ಷಿಣ ಆಫ್ರಿಕಾ ಪರ ಇದಕ್ಕೂ ಹಿಂದೆ ಜಾಕ್ ಕ್ಯಾಲೀಸ್ (11550 ರನ್), ಎಬಿ ಡಿ ವಿಲಿಯರ್ಸ್ (9427 ರನ್) ಮತ್ತು ಹರ್ಶೆಲ್ ಗಿಬ್ಸ್ (8094 ರನ್) 8000+ ರನ್ ಸಾಧನೆ ಮಾಡಿದ್ದರು. ಆಮ್ಲಾ 90 ರನ್ ಕಲೆ ಹಾಕಿದರೆ ಏಕದಿನದಲ್ಲಿ ವೇಗದ 8000 ರನ್‌ಗಾಗಿ ಕೊಹ್ಲಿಯನ್ನು ಹಿಂದಿಕ್ಕಲಿದ್ದಾರೆ.

3 ಇನ್ನಿಂಗ್ಸ್ ಮೊದಲೇ ದಾಖಲೆ

3 ಇನ್ನಿಂಗ್ಸ್ ಮೊದಲೇ ದಾಖಲೆ

8000 ರನ್ ಗಡಿ ದಾಟಲು ಕೊಹ್ಲಿ 175 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದರೆ, ಆಮ್ಲಾ ಈಗ 171 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಹೀಗಾಗಿ ಆಮ್ಲಾ ಗುರುವಾರದ ಪಂದ್ಯದಲ್ಲಿ 90+ ರನ್ ಗಳಿಸಿದರೆ ಕೊಹ್ಲಿಗಿಂತ 3 ಇನ್ನಿಂಗ್ಸ್ ಮುಂಚಿತವಾಗಿ 8000+ ರನ್ ಪೇರಿಸಿದ ಹೆಗ್ಗಳಿಗೆ ಪಾತ್ರರಾಗಲಿದ್ದಾರೆ.

1000 ರನ್ ಸಾಧನೆಗೆ ಅವಕಾಶ

1000 ರನ್ ಸಾಧನೆಗೆ ಅವಕಾಶ

ಇದೇ ಪಂದ್ಯದಲ್ಲಿ ಹಾಶಿಮ್ ಆಮ್ಲಾಗೆ ಇನ್ನೊಂದು ದಾಖಲೆಯ ಅವಕಾಶವೂ ಇದೆ. ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ಮೊದಲ ವಿಶ್ವಕಪ್ ಪಂದ್ಯದಲ್ಲಿ ಆಮ್ಲಾ 37 ರನ್ ಬಾರಿಸಿದರೆ, ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ 1000 ರನ್ ಬಾರಿಸಿದ ದಕ್ಷಿಣ ಆಫ್ರಿಕಾದ ಎರಡನೇ ಆಟಗಾರನಾಗಿ, ವಿಶ್ವದ 22ನೇ ಆಟಗಾರನಾಗಿ ಆಮ್ಲಾ ಗುರುತಿಸಿಕೊಳ್ಳಲಿದ್ದಾರೆ. ಈ ಮೊದಲು ಆಫ್ರಿಕಾ ಪರ ಜಾಕ್ ಕ್ಯಾಲೀಸ್ (1054 ರನ್) ಈ ದಾಖಲೆ ನಿರ್ಮಿಸಿದ್ದರು.

ಆಮ್ಲಾ ಹೆಸರಲ್ಲಿ ಅನೇಕ ಮೈಲಿಗಲ್ಲು

ಆಮ್ಲಾ ಹೆಸರಲ್ಲಿ ಅನೇಕ ಮೈಲಿಗಲ್ಲು

ಬಿರುಸಿನ ಬ್ಯಾಟಿಂಗ್‌ಗಾಗಿ ಗುರುತಿಸಿಕೊಂಡಿರುವ ಹಾಶಿಮ್ ಆಮ್ಲಾ ಈಗಾಗಲೇ ಹಲವಾರು ದಾಖಲೆಗಳನ್ನು ಮಾಡಿದ್ದಾರೆ. ಏಕದಿನದಲ್ಲಿ ವೇಗದ 2000 ರನ್, 3000 ರನ್, 4000 ರನ್, 5000 ರನ್, 6000 ರನ್ 7000 ರನ್ ಗೆರೆಯನ್ನೀಗಾಗಲೇ ಆಮ್ಲಾ ದಾಟಿಯಾಗಿದೆ.

Story first published: Thursday, May 30, 2019, 10:25 [IST]
Other articles published on May 30, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+