ವಿಶ್ವಕಪ್ 2019: ಬಾಂಗ್ಲಾ ವಿರುದ್ಧ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ XI

ಬರ್ಮಿಂಗ್‌ಹ್ಯಾಮ್, ಜುಲೈ 2: ಇಂಗ್ಲೆಂಡ್ ವಿರುದ್ಧ ಗೆಲ್ಲೋ ಪಂದ್ಯವನ್ನು ಕೈಚೆಲ್ಲಿಕೊಂಡು ಸೆಮಿಫೈನಲ್ ಖಾತ್ರಿಯನ್ನು ಮುಂದೂಡಿಕೊಂಡಿರುವ ಟೀಮ್ ಇಂಡಿಯಾ ಮಂಗಳವಾರ (ಜುಲೈ 2) ಬಾಂಗ್ಲಾ ವಿರುದ್ಧ ವಿಶ್ವಕಪ್ 40ನೇ ಪಂದ್ಯಕ್ಕಾಗಿ ಕಣಕ್ಕಿಳಿಯುತ್ತಿದೆ. ಈಗಲೂ ಸೆಮಿಫೈನಲ್ ಆಸೆಯನ್ನು ಉಳಿಸಿಕೊಂಡಿರುವ ಬಾಂಗ್ಲಾಕ್ಕೆ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಭಾರತ ಗೆದ್ದರೆ ಕೊಹ್ಲಿ ಬಳಗ ಐಸಿಸಿ ವಿಶ್ವಕಪ್ 2019ರಲ್ಲಿ ಸೆಮಿಫೈನಲ್ ಪ್ರವೇಶಿಸಿದ 2ನೇ ತಂಡವಾಗಿ ಗುರುತಿಸಿಕೊಳ್ಳಲಿದೆಯಲ್ಲದೆ, ಸದ್ಯ ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿರುವ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್‌ಗೆ ತಂಡಗಳ ಪ್ರಶಸ್ತಿ ಸುತ್ತಿನೆಡೆಗಿನ ಕದನ ಮುಂದುವರೆಯಲಿದೆ.
ಭಾರತ vs ಬಾಂಗ್ಲಾದೇಶ, ಜುಲೈ 2, Live ಸ್ಕೋರ್‌ಕಾರ್ಡ್
ಭಾನುವಾರ (ಜೂನ್ 30) ಒಂದಿಷ್ಟು ಎಡವಟ್ಟುಗಳೊಂದಿಗೆ ಭಾರತ, ಇಂಗ್ಲೆಂಡ್ ವಿರುದ್ಧದ ಪಂದ್ಯ ಸೋತು ಭಾರತೀಯರನ್ನು ನಿರಾಸೆಗೊಳಿಸಿತ್ತು. ಬಾಂಗ್ಲಾದೇಶ ವಿರುದ್ಧವಾದರೂ ಭಾರತ ಹಿಂದಿನ ಸೋಲಿನ ಸೇಡು ತೀರಿಸಿಕೊಳ್ಳಬೇಕಿದೆ. ಬಾಂಗ್ಲಾ ಪಡೆಯನ್ನು ಹೆಡೆಮುರಿ ಕಟ್ಟಲಿರುವ ಭಾರತದ ಸಂಭಾವ್ಯ XI ಇಂತಿದೆ.

ಓಪನಿಂಗ್ ಬ್ಯಾಟ್ಸ್ಮನ್‌ಗಳು
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಟಗಾರ, ಉಪನಾಯಕ ರೋಹಿತ್ ಶರ್ಮಾ (102 ರನ್) ಶತಕದಾಟ ನೀಡಿದ್ದರು. ಏಕದಿನದ 25ನೇ ಶತಕವನ್ನು ಶರ್ಮಾ ಆ ಪಂದ್ಯದಲ್ಲಿ ಪೂರೈಸಿಕೊಂಡಿದ್ದರು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲೂ ರೋಹಿತ್ ಆರಂಭಿಕರಾಗಿ ಇಳಿದರೆ ಇವರಿಗೆ ಸಾಥ್ ನೀಡಲು ಕೆಎಲ್ ರಾಹುಲ್ ಬರಲಿದ್ದಾರೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡ ತಂಡ ಸೇರಿಕೊಂಡಿದ್ದು, ಆರಂಭಿಕರಾಗಿ ರೋಹಿತ್ ಜೊತೆ ಬಂದರೂ ಅಚ್ಚರಿಯಿಲ್ಲ. ಇನ್ನು 3ನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಆಡಲಿದ್ದಾರೆ (1. ರೋಹಿತ್ ಶರ್ಮಾ, 2. ಕೆಎಲ್ ರಾಹುಲ್, 3 ವಿರಾಟ್ ಕೊಹ್ಲಿ).

ಮಧ್ಯಮ ಕ್ರಮಾಂಕ
ಹಿಂದಿನ ಪಂದ್ಯದಲ್ಲಿ ವಿಶ್ವಕಪ್ ಚೊಚ್ಚಲ ಪಂದ್ಯವನ್ನಾಡಿದ್ದ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್ ನೀಡದಿದ್ದರೂ ಭಾರತದ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಪಂತ್ ಆ ಪಂದ್ಯದಲ್ಲಿ 32 ರನ್ ಕೊಡುಗೆ ನೀಡಿದ್ದರು. ಇಂದಿನ ಪಂದ್ಯದಲ್ಲೂ ಪಂತ್ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 5ನೇ ಕ್ರಮಾಂಕದಲ್ಲಿ ಎಂಎಸ್ ಧೋನಿ ಆಡಲಿದ್ದಾರೆ (4. ರಿಷಬ್ ಪಂತ್, 5. ಎಂಸ್ ಧೋನಿ).

ಆಲ್ ರೌಂಡರ್‌ಗಳು
ಇಂಗ್ಲೆಂಡ್ ವಿರುದ್ಧ ಅಂತಿಮ 5 ಓವರ್ ಬಾಕಿಯಿರುವಾಗ ಬ್ಯಾಟ್ ಎತ್ತಿಕೊಂಡು ಬಂದಿದ್ದ ಆಲ್ ರೌಂಡರ್ ಕೇದಾರ್ ಜಾಧವ್, ನಿರಾಶೆ ಮೂಡಿಸಿದ್ದರು. ಪ್ರತೀ ಓವರ್‌ಗೆ 13 ರನ್‌ಗಳ ಅವಶ್ಯಕತೆಯಿದ್ದರೂ ಧೋನಿ ಜೊತೆ ಸಿಂಗಲ್ ರನ್ ಗಳಿಸಿ ಜಾಧವ್ ವಿಶ್ವಕಪ್ ಕ್ರಿಕೆಟ್‌ಗೆ ಹೊಸಬ ಅನ್ನುವಂತ ಆಟ ನೀಡಿದ್ದರು. ಹೀಗಾಗಿ ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಜಾಧವ್ ಮತ್ತೆ ಕಾಣಿಸಿಕೊಳ್ಳುತ್ತಾರೆ ಅನ್ನೋದು ಹೇಳಲಾಗದು. ಜಾಧವ್ ಬದಲು ಮತ್ತೊಬ್ಬ ಆಲ್ ರೌಂಡರ್ ರವೀಂದ್ರ ಜಡೇಜಾ ಬರುವ ಸಾಧ್ಯತೆಯಿದೆ. (6. ರವೀಂದ್ರ ಜಡೇಜಾ/ಕೇದಾರ್ ಜಾಧವ್, 7. ಹಾರ್ದಿಕ್ ಪಾಂಡ್ಯ).

ಬೌಲಿಂಗ್ ವಿಭಾಗ
ಇಂಗ್ಲೆಂಡ್ ವಿರುದ್ಧದ ಸೋಲಿಗೆ ಭಾರತದ ಸ್ಪಿನ್ನರ್‌ಗಳು ಎದುರಾಳಿಗೆ ಭರ್ಜರಿ ರನ್ ನೀಡಿದ್ದೂ ಒಂದು ನೆಪವೇ. ಆ ಪಂದ್ಯದಲ್ಲಿ ಮೊಹಮ್ಮದ್ ಶಮಿ ಮತ್ತು ಬೂಮ್ರಾ ಮಾತ್ರ ಎದುರಾಳಿಗೆ ಕೊಂಚ ಬೆದರಿಕೆಯೊಡ್ಡಿದ್ದರು. ಆದರೆ ಸ್ಪಿನ್ ಮತ್ತು ವೇಗ ಎರಡೂ ಬೌಲರ್‌ಗಳು ಪಂದ್ಯವೊಂದಕ್ಕೆ ಬೇಕಿರುವುದರಿಂದ ಈ ಪಂದ್ಯದಲ್ಲೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಅದೇ ಬೌಲರ್‌ಗಳು ಟೀಮ್ ಇಂಡಿಯಾಕ್ಕೆ ಬಲ ತುಂಬಲಿದ್ದಾರೆ (8. ಮೊಹಮ್ಮದ್ ಶಮಿ, 9. ಯುಜುವೇಂದ್ರ ಚಾಹಲ್, 10. ಕುಲದೀಪ್ ಯಾದವ್, 11. ಜಸ್‌ಪ್ರೀತ್ ಬೂಮ್ರಾ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications