Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2019: ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ XI

ICC World Cup 2019: India probable XI against England at Birmingham

ಬರ್ಮಿಂಗ್‌ಹ್ಯಾಮ್, ಜೂನ್ 30: ಬರ್ಮಿಂಗ್ ಹ್ಯಾಮ್‌ನ ಎಜ್ ಬಾಸ್ಟನ್‌ನಲ್ಲಿ ಭಾನುವಾರ (ಜೂನ್ 30) ಐಸಿಸಿ ವಿಶ್ವಕಪ್ 2019ರ 38ನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ಭಾರತ ತಂಡಗಳು ಕುತೂಹಲಕಾರಿ ಕಾಳಗಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯ ಗೆದ್ದರೆ ಭಾರತ ಸೆಮಿಫೈನಲ್ ಪ್ರವೇಶಿಸಲಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾಗಿದೆ. ಸದ್ಯ ಅಂಕಪಟ್ಟಿಯಲ್ಲಿ ಭಾರತ ದ್ವಿತೀಯ ಸ್ಥಾನದಲ್ಲಿದೆ. ಒಟ್ಟು 11 ಅಂಕಗಳನ್ನು ಕಲೆ ಹಾಕಿರುವ ವಿರಾಟ್ ಕೊಹ್ಲಿ ಬಳಗಕ್ಕೆ ಸೆಮಿಫೈನಲ್ ಖಾತ್ರಿಯಾಗಲು ಇನ್ನೊಂದೇ ಪಾಯಿಂಟ್ ಬೇಕು. ಅಂದರೆ ಇಂಗ್ಲೆಂಡ್ ಎದುರು ಗೆಲ್ಲಬೇಕಿದೆ. ಹಾಗಂತ ಇಂಗ್ಲೆಂಡ್ ಪಂದ್ಯ ಬಿಟ್ಟುಕೊಡುತ್ತಾ?

ಇಂಗ್ಲೆಂಡ್ vs ಭಾರತ, ಜೂನ್ 30, Live ಸ್ಕೋರ್‌ಕಾರ್ಡ್

1
43681

ಪ್ರಬಲ ತಂಡಗಳ ಕದನವಾಗಿ ಗುರುತಿಸಿಕೊಳ್ಳಲಿರುವ ಇತ್ತಂಡಗಳ ಪಂದ್ಯಕ್ಕಾಗಿ ಭಾರತ ಪರ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ.

ಆರಂಭಿಕ ಬ್ಯಾಟ್ಸ್ಮನ್‌ಗಳು

ಆರಂಭಿಕ ಬ್ಯಾಟ್ಸ್ಮನ್‌ಗಳು

ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್‌ಗಳಾಗಿ ಉಪನಾಯಕ ರೋಹಿತ್ ಶರ್ಮಾ ಮತ್ತು ಯುವ ಬ್ಯಾಟ್ಸ್ಮನ್ ಕನ್ನಡಿಗ ಕೆಎಲ್ ರಾಹುಲ್ ಬರಲಿದ್ದಾರೆ. ಇಬ್ಬರೂ ಆಡಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ರೋಹಿತ್ ಶರ್ಮಾ ಅವರು ವೆಸ್ಟ್ ಇಂಡೀಸ್ ವಿರುದ್ಧ ಅಂಪೈರ್ ಎಡವಟ್ಟಿಗೆ ಬಲಿಯಾಗದಿದ್ದರೆ, ಅಂದೂ ಭರ್ಜರಿ ಬ್ಯಾಟ್ ಬೀಸುವುದರಲ್ಲಿದ್ದರು. ಇನ್ನು ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಮೈದಾನ ಪ್ರವೇಶಿಸಲಿದ್ದಾರೆ. (1. ರೋಹಿತ್ ಶರ್ಮಾ, 2. ಕೆಎಲ್ ರಾಹುಲ್, 3. ವಿರಾಟ್ ಕೊಹ್ಲಿ).

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಬದಲಾವಣೆಯಾಗುವ ಸಾಧ್ಯತೆಯಿದೆ. ಮುಖ್ಯವಾಗಿ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ನಿರೀಕ್ಷಿತ. ಸದ್ಯ 4ನೇ ಕ್ರಮಾಂಕದಲ್ಲಿ ಆಲ್ ರೌಂಡರ್ ವಿಜಯ್ ಶಂಕರ್ ಆಡುತ್ತಿದ್ದು ಈ ಆರ್ಡರ್‌ನಲ್ಲಿ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ 5ನೇ ಕ್ರಮಾಂಕ ಎಂದಿನಂತೆ ಎಂಸ್ ಧೋನಿಯದ್ದು (4. ರಿಷಬ್ ಪಂತ್, 5.ಎಂಸ್ ಧೋನಿ).

ಆಲ್ ರೌಂಡರ್ ಗಳು

ಆಲ್ ರೌಂಡರ್ ಗಳು

ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವ ಆಲ್ ರೌಂಡರ್ ಕೇದಾರ್ ಜಾಧವ್ ಹಿಂದಿನ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲೂ ಕಣಕ್ಕಿಳಿದಿದ್ದರು. ಇಂಗ್ಲೆಂಡ್ ವಿರುದ್ಧವೂ ಜಾಧವ್ 6ನೇ ಕ್ರಮಾಂಕದಲ್ಲಿ ಬರಲಿದ್ದಾರೆ. ಮತ್ತೊಬ್ಬ ವ್ಯಾಲ್ಯುಯೇಬಲ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಎಂದಿನಂತೆ 7ನೇ ಕ್ರಮಾಂಕದಲ್ಲಿ ಬ್ಯಾಟ್ ಎತ್ತಿಕೊಳ್ಳುವುದನ್ನು ನಿರೀಕ್ಷಿಸಲಾಗಿದೆ. (6. ಕೇದಾರ್ ಜಾಧವ್, 7. ಹಾರ್ದಿಕ್ ಪಾಂಡ್ಯ).

ಬೌಲಿಂಗ್ ಬಳಗ

ಬೌಲಿಂಗ್ ಬಳಗ

ಈ ವಿಶ್ವಕಪ್‌ನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ವೇಗಿ ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಅತೀ ಪ್ರಮುಖ ಬೌಲರ್ ಎನಿಸಿಕೊಳ್ಳುತ್ತಿದ್ದಾರೆ. ಕೊಂಚ ಬ್ಯಾಟ್ ಕೂಡ ಬೀಸಬಲ್ಲ ಸಾಮರ್ಥ್ಯದ ಶಮಿ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕಾಣಿಸಿಕೊಳ್ಳೋ ನಿರೀಕ್ಷೆಯಿದೆ. ಇನ್ನು ಸ್ಪಿನ್ನರ್ ಯುಜುವೇಂದ್ರ ಚಾಹಲ್ 9ನೇ, ಚೈನಾಮನ್ ಕುಲದೀಪ್ ಯಾದವ್ 10ನೇ, ವೇಗಿ ಜಸ್‌ಪ್ರೀತ್ ಬೂಮ್ರಾ 11ನೇ ಸ್ಥಾನಗಳಲ್ಲಿ ಬರಲಿದ್ದಾರೆ (8. ಮೊಹಮ್ಮದ್ ಶಮಿ, 9. ಯುಜುವೇಂದ್ರ ಚಾಹಲ್, 10. ಕುಲದೀಪ್ ಯಾದವ್, 11. ಜಸ್‌ಪ್ರೀತ್ ಬೂಮ್ರಾ)

Story first published: Sunday, June 30, 2019, 15:21 [IST]
Other articles published on Jun 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+