Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2019: ಹೊಸ ಮೈಲಿಗಲ್ಲು ಸ್ಥಾಪಿಸಿದ ಲಂಕಾ ವೇಗಿ ಲಸಿತ್ ಮಾಲಿಂಗ

ICC World cup 2019: Lasith Malinga takes 50th World cup wickets

ಲೀಡ್ಸ್, ಜೂನ್ 22: ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಶುಕ್ರವಾರ (ಜೂನ್ 21) ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದ ಫಲಿತಾಂಶ ಇಂಗ್ಲೆಂಡ್‌ಗೆ ಆಘಾತ ನೀಡಿತ್ತು. ಗೆದ್ದುಕೊಳ್ಳೋ ಪಂದ್ಯವನ್ನು ಇಂಗ್ಲೆಂಡ್‌ ಸ್ವಲ್ಪದರಲ್ಲಿ ಕೈಚೆಲ್ಲಿತ್ತು. ಇಯಾನ್ ಮಾರ್ಗನ್ ಬಳಗದ ಸೋಲಿಗೆ ಪ್ರಮುಖ ಕಾರಣ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಅವರ ಮಾರಕ ಬೌಲಿಂಗ್ ದಾಳಿ. ಒಟ್ಟು 4 ವಿಕೆಟ್ ಪಡೆದಿದ್ದ ಮಾಲಿಂಗ ಈ ಪಂದ್ಯದ ಹೀರೋ ಅನ್ನಿಸಿದ್ದರು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ, ಅವಿಷ್ಕ ಫೆರ್ನಾಂಡೋ 49, ಕುಸಾಲ್ ಮೆಂಡಿಸ್ 46, ಏಂಜಲೋ ಮ್ಯಾಥ್ಯೂಸ್ ಅಜೇಯ 85 ರನ್ ನೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 232 ರನ್ ಬಾರಿಸಿತ್ತು. 233 ರನ್ ಗುರಿ ಇಂಗ್ಲೆಂಡ್‌ ಪಾಲಿಗೆ ಅಂಥದ್ದೇನೂ ಸವಾಲಿನದ್ದಾಗಿರಲಿಲ್ಲ.

ಆದರೆ ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ಲೆಕ್ಕಾಚಾರ ಉಲ್ಟಾ ಆಯಿತು. ಆಂಗ್ಲರು 1 ರನ್ ಬಾರಿಸುತ್ತಲೇ ಆರಂಭಿಕ ಬ್ಯಾಟ್ಸ್ಮನ್‌ ಜಾನಿ ಬೇಸ್ಟೋವ್ ವಿಕೆಟ್ ಅನ್ನು ಮಾಲಿಂಗ ಮುರಿದರು. ಅನಂತರ ಜೇಮ್ಸ್ ವಿನ್ಸ್, ಜೋ ರೂಟ್ ಮತ್ತು ಜೋಸ್ ಬಟ್ಲರ್ ವಿಕೆಟ್‌ಗಳು ಕೂಡ ಮಾಲಿಂಗ ದಾಳಿಗೆ ಬಲಿಯಾದವು.

ಇಂಗ್ಲೆಂಡ್‌ ಪರ ರೂಟ್ 57, ಬೆನ್ ಸ್ಟೋಕ್ಸ್ ಅಜೇಯ 82 ರನ್ ಸೇರಿಸಿ ಮಾಡಿದ ಹೋರಾಟ ವ್ಯರ್ಥಗೊಂಡಿತು. ಇಂಗ್ಲೆಂಡ್ 20 ರನ್‌ಗಳ ಸೋಲನುಭವಿಸಿತು. ಈ ಪಂದ್ಯದಲ್ಲಿ 43 ರನ್ ನೀಡಿದ್ದ ಲಸಿತ್ 4 ಪ್ರಮುಖ ವಿಕೆಟ್‌ಗಳನ್ನು ಮುರಿದು ಇಂಗ್ಲೆಂಡ್ ಪಾಲಿಗೆ ವಿಲನ್ ಅನ್ನಿಸಿದ್ದರು. ಅದ್ಭುತ ಬೌಲಿಂಗ್‌ಗಾಗಿ ಮಾಲಿಂಗ ಪಂದ್ಯಶ್ರೇಷ್ಠರೆನಿಸಿದರೂ ಕೂಡ.

ಐಸಿಸಿ ವಿಶ್ವಕಪ್ 2019ರಲ್ಲಿ 4 ಇನ್ನಿಂಗ್ಸ್‌ಗಳಲ್ಲಿ ಒಟ್ಟು 8 ವಿಕೆಟ್‌ ಪಡೆದಿರುವ ಮಾಲಿಂಗ, ಒಟ್ಟಾರೆ ವಿಶ್ವಕಪ್‌ನಲ್ಲಿ 50 ವಿಕೆಟ್ ಪಡೆದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಶುಕ್ರವಾರದ ಪಂದ್ಯಕ್ಕೂ ಮೊದಲು ಮಾಲಿಂಗ್ ಒಟ್ಟು 46 ವಿಕೆಟ್ ಸಾಧನೆ ಮಾಡಿದ್ದರು. ಈ ವಿಶ್ವಕಪ್‌ನಲ್ಲಿ ಟಾಪ್ ಟೆನ್ ವಿಕೆಟ್ ಸಾಧಕರಲ್ಲಿ ಲಸಿತ್ ಸದ್ಯ 10ನೇ ಸ್ಥಾನದಲ್ಲಿದ್ದಾರೆ.

Story first published: Saturday, June 22, 2019, 16:18 [IST]
Other articles published on Jun 22, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+