ವಿಶ್ವಕಪ್: ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ ಆಸೀಸ್ ಆಲ್ ರೌಂಡರ್ ಸ್ಟೋಯ್ನಿಸ್

ಲಂಡನ್, ಜೂನ್ 19: ಕ್ರಿಕೆಟ್ ವಿಶ್ವಕಪ್ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಆಲ್ ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆಸೀಸ್ ತಂಡಕ್ಕೆ ಮರಳುವುದರಲ್ಲಿದ್ದಾರೆ. ಆದರೆ ಸ್ಟೋಯ್ನಿಸ್ ಈ ಕೂಡಲೇ ಆಸೀಸ್ ತಂಡ ಸೇರುವ ಬಗ್ಗೆ ಕೋಚ್ ಜಸ್ಟಿನ್ ಲ್ಯಾಂಗರ್ ಖತರಿಪಡಿಸಿಲ್ಲ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಸ್ಟೋಯ್ನಸ್ ಕುರಿತು ಮಾತನಾಡಿದ ಲ್ಯಾಂಗರ್, ಸ್ಟೋಯ್ನಿಸ್ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಮುಂದಿನ ಪಂದ್ಯದಲ್ಲಿ ಆಡುವ 11ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಗ್ಯಾರಂಟಿಯಿಲ್ಲ ಎಂದಿದ್ದಾರೆ. ಜೂನ್ 9ರಂದು ನಡೆದಿದ್ದ ಭಾರತ ವಿರುದ್ಧದ ಪಂದ್ಯದ ವೇಳೆ ಬೌಲಿಂಗ್ ಮಾಡುತ್ತ ಗಾಯಕ್ಕೀಡಾಗಿದ್ದ ಸ್ಟೋಯ್ನಿಸ್, ಅನಂತರ ಎರಡು ಪಂದ್ಯಗಳಿಂದ ತಂಡದಿಂದ ಹೊರಗುಳಿದಿದ್ದರು.
ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕೃತ ವೆಬ್‌ಸೈಟ್ ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ಜೊತೆ ಮಾತನಾಡಿದ ಜಸ್ಟಿನ್, 'ಸ್ಟೋಯ್ನಿಸ್ ಬಗ್ಗೆ ನಿಗಾವಹಿಸುತ್ತಿದ್ದೇವೆ. ಸಂಪೂರ್ಣ ಫಿಟ್‌ಗೆ ಮರಳಲು ಬೇಕಾದ್ದನ್ನು ಅವರೂ ಮಾಡುತ್ತಿದ್ದಾರೆ. ಇಂಥಹ ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳಲು ಅವರೂ ಬಯಸಲಾರರು' ಎಂದಿದ್ದಾರೆ.
'ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದು ನನಗೇನೂ ಅಚ್ಚರಿ ತಂದಿಲ್ಲ. ಇದರ ಕೀರ್ತಿ ಸ್ಟೋಯ್ನಿಸ್‌ಗೂ ವೈದ್ಯಕೀಯ ಸಿಬ್ಬಂದಿಗೂ ಸಲ್ಲಬೇಕು. ಒಟ್ಟಿನಲ್ಲಿ ಟೂರ್ನಿಯಲ್ಲಿ ಸ್ಟೋಯ್ನಿಸ್ ತಂಡದ ಜೊತೆಗಿದ್ದು ಪರಿಣಾಮ ಬೀರಲಿದ್ದಾರೆ' ಎಂದು ಲ್ಯಾಂಗರ್ ತಿಳಿಸಿದರು. ಜೂನ್ 20ರಂದು ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ಪಂದ್ಯವನ್ನಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications