ವಿಶ್ವಕಪ್ 2019: ಅಫ್ಘಾಸ್ತಾನ ವಿರುದ್ಧ ಭಾರತ ಕೇಸರಿ ಜೆರ್ಸಿ ಧರಿಸುತ್ತಿಲ್ಲ?!

ಲಂಡನ್, ಜೂನ್ 20: ಈ ಬಾರಿಯ ಐಸಿಸಿ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಕೇಸರಿ ಜೆರ್ಸಿಯೊಂದಿಗೆ ಮೈದಾನಕ್ಕಳಿಯಲಿದೆ ಎಂದು ಹೇಳಲಾಗಿತ್ತು. ವಿಶ್ವಕಪ್‌ನ ಎರಡು ಪಂದ್ಯಗಳಲ್ಲಿ ಕೊಹ್ಲಿ ಬಳಗ ಕೇಸರಿ ದಿರಿಸಿನೊಂದಿಗೆ ಆಡಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಭಾರತ, ಅಫ್ಘಾನ್ ವಿರುದ್ಧ ಕೇಸರಿ ಜೆರ್ಸಿ ಧರಿಸುತ್ತಿಲ್ಲ. ಇಂಗ್ಲೆಂಡ್ ವಿರುದ್ಧ ಮಾತ್ರ ಈ ಹೊಸ ದಿರಿಸು ಧರಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಭಾರತ ಕ್ರಿಕೆಟ್‌ನ ಕಿಟ್ ಪ್ರಾಯೋಜಕ ನೈಕ್, ಈ ಬಾರಿ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಕ್ಕೆ ಹೊಸ ಬಣ್ಣದ ಜೆರ್ಸಿ ಒದಗಿಸುತ್ತಿದೆ. ಕೇಸರಿ ಬಣ್ಣದ ಜೆರ್ಸಿಯಲ್ಲಿ ಗಾಢ ನೀಲಿ ಬಣ್ಣದ ಹಿಂಬದಿ ಪ್ರಿಂಟ್ ಇರಲಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿತ್ತು. ಇದನ್ನು ಬಿಸಿಸಿಐ ಕೂಡ ಖಾತರಿಪಡಿಸಿತ್ತು.
ಭಾರತ, ಇಂಗ್ಲೆಂಡ್, ಅಫ್ಘಾನ್, ಶ್ರೀಲಂಕಾ ತಂಡಗಳ ಜೆರ್ಸಿ ನೀಲಿ ಬಣ್ಣದ್ದು. ಐಸಿಸಿ ನಿಯಮದ ಪ್ರಕಾರ ಮೈದಾನಕ್ಕೆ ಇಳಿಯುವಾಗ ಇತ್ತಂಡಗಳು ಒಂದೇ ಬಣ್ಣದ ಜೆರ್ಸಿ ಧರಿಸುವಂತಿಲ್ಲ. ಹೀಗಾಗಿ ಹಿಂದಿನ ಮಾಹಿತಿಯ ಪ್ರಕಾರ ಭಾರತ ತಂಡ, ಜೂನ್ 22ರಂದು ಅಫ್ಘಾನಿಸ್ತಾನ ವಿರುದ್ಧ ಮತ್ತು ಜೂನ್ 30ರಂದು ಇಂಗ್ಲೆಂಡ್ ವಿರುದ್ಧ ಕೇಸರಿ ಜೆರ್ಸಿ ಧರಿಸಲಿದೆ ಎನ್ನಲಾಗಿತ್ತು.
ಬಹುಶಃ ಅಫ್ಘಾನ್ vs ಭಾರತ ಪಂದ್ಯದಲ್ಲಿ ಭಾರತ ಹಿಂದಿನ ಜೆರ್ಸಿಯನ್ನೇ ಧರಿಸಿ ಎದುರಾಳಿಗೆ ದಿರಿಸು ಬದಲಿಸಲು ಅವಕಾಶ ನೀಡಲಿದೆ. ಆತಿಥೇಯ ಇಂಗ್ಲೆಂಡ್‌ಗೆ ಒಂದೇ ಬಣ್ಣದ ಜೆರ್ಸಿ ಧರಿಸಲು ಅನುಮತಿಯಿರುವುದರಿಂದ ಇಂಗ್ಲೆಂಡ್ vs ಭಾರತ ಪಂದ್ಯದಲ್ಲಿ ಆಂಗ್ಲರು ಹಿಂದಿನ ಜೆರ್ಸಿಯನ್ನೇ ಧರಿಸಲಿದ್ದಾರೆ. ಭಾರತ ಈ ವೇಳೆ ನೂತನ ಜೆರ್ಸಿಯೊಂದಿಗೆ ಮೈನಾಕ್ಕಿಳಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications