Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ಅಪರೂಪದ ದಾಖಲೆ ಬರೆದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್

ICC World Cup 2019: Mitchell Starc scripts World Cup history against New Zealand

ಲಂಡನ್, ಜೂನ್ 30: ವಿಶ್ವಕಪ್‌ನಲ್ಲಿ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಸಾರಿ 4ಕ್ಕೂ ಅಧಿಕ ವಿಕೆಟ್ ಗಳಿಸಿದ ಬೌಲರ್ ಆಗಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ದಾಖಲೆ ಬರೆದಿದ್ದಾರೆ. ಶನಿವಾರ (ಜೂನ್ 30) ನಡೆದ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಸ್ಟಾರ್ಕ್ ಈ ಸಾಧನೆ ಮೆರೆದಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಒಟ್ಟು 4 ಸಾರಿ 4ಕ್ಕೂ ಹೆಚ್ಚು ವಿಕೆಟ್ ಗಳಿಸಿರುವ ಸ್ಟಾರ್ಕ್ ಒಟ್ಟು 8 ಇನ್ನಿಂಗ್ಸ್‌ಗಳಲ್ಲಿ 24 ವಿಕೆಟ್‌ಗಳೊಂದಿಗೆ ಐಸಿಸಿ ವಿಶ್ವಕಪ್ 2019ರಲ್ಲಿ ಅತೀ ಹೆಚ್ಚು ವಿಕೆಟ್ ಸಾಧಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇದು ವಿಶ್ವಕಪ್ ಆವೃತ್ತಿಯಲ್ಲಿ ಬೌಲರ್ ಗಳಿಸಿದ ಎರಡನೇ ಅತೀ ಹೆಚ್ಚಿನ ಸಂಖ್ಯೆಯ ವಿಕೆಟ್.

ಆಸ್ಟ್ರೇಲಿಯಾದವರೇ ಆಗಿದ್ದ ಗ್ಲೆನ್ ಮೆಗ್ರಾತ್ ಅವರು 2007ರ ವಿಶ್ವಕಪ್‌ನಲ್ಲಿ 26 ವಿಕೆಟ್ ಪಡೆದು ಈ ಯಾದಿಯಲ್ಲಿ ಸದ್ಯ ಮೊದಲ ಸ್ಥಾನದಲ್ಲಿದ್ದಾರೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಇನ್ನೂ ಒಂದು ಪಂದ್ಯ ಬಾಕಿಯಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಸ್ಟಾರ್ಕ್‌ಗೆ ಮೆಗ್ರಾತ್ ಮೀರಿಸಲು ಅವಕಾಶವಿದೆ.

ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ 243 ರನ್ ಬಾರಿಸಿತ್ತು. ನ್ಯೂಜಿಲೆಂಡ್ ಇನ್ನಿಂಗ್ಸ್ ವೇಳೆ ಸ್ಟಾರ್ಕ್ ಕೇವಲ 26 ರನ್‌ಗೆ 5 ವಿಕೆಟ್ ಉರುಳಿಸಿ ಕಿವೀಸ್ ದಾಂಡಿಗರನ್ನು ಕಾಡಿದರು. ಹೀಗಾಗಿ ಕೇನ್ ವಿಲಿಯಮ್ಸನ್ ಬಳಗ 43.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 157 ರನ್ ಪೇರಿಸಿ 86 ರನ್‌ನಿಂದ ಶರಣಾಯ್ತು.

Story first published: Sunday, June 30, 2019, 17:18 [IST]
Other articles published on Jun 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+