ವಿಶ್ವಕಪ್: ಮಿಂಚಿದ ರಾಸ್ ಟೇಲರ್, ಬಾಂಗ್ಲಾದೇಶ ಮಣಿಸಿದ ನ್ಯೂಜಿಲ್ಯಾಂಡ್

ಲಂಡನ್, ಜೂನ್ 6: ಬುಧವಾರ (ಜೂನ್ 5) ವಿಶ್ವಕಪ್ 8ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ-ಭಾರತ ಸೆಣಸಾಡಿದ್ದರೆ, ಇದೇ ದಿನ ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್ ತಂಡಗಳು 9ನೇ ಪಂದ್ಯದಲ್ಲಿ ಕಾದಾಡಿದ್ದವು. ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 2 ವಿಕೆಟ್ ಜಯ ಗಳಿಸಿದೆ. ರಾಸ್ ಟೇಲರ್ ಅರ್ಧಶತಕದಾಟದಿಂದಾಗಿ ಬ್ಲ್ಯಾಕ್ ಕ್ಯಾಪ್ಸ್ ಗೆಲುವನ್ನಾಚರಿಸಿತು.
ಪಂದ್ಯದ ಸ್ಕೋರ್‌ಕಾರ್ಡ್ ಇಲ್ಲಿದೆ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾ ಅಂಥ ಬ್ಯಾಟಿಂಗ್ ತೋರಿಸಲಿಲ್ಲ. ಆದರೆ ಶಕೀಬ್ ಅಲ್ ಹಸನ್ 64, ತಮೀಮ್ ಇಕ್ಬಾಲ್ 24, ಸೌಮ್ಯ ಸರ್ಕಾರ್ 25, ಮೊಹಮ್ಮದ್ ಮಿಥುನ್ 26, ಮೊಹಮ್ಮದ್ ಸೌಫುದ್ದೀನ್ 29 ರನ್ ಕೊಡುಗೆ ತಂಡವನ್ನು ರನ್ ಕುಸಿತದಿಂದ ಪಾರು ಮಾಡಿತು.
ಬಾಂಗ್ಲಾ 49.2 ಓವರ್‌ಗೆ ಸರ್ವ ಪತನ ಕಂಡು 244 ರನ್ ಗಳಿಸಿತು. ಬಾಂಗ್ಲಾ ಇನ್ನಿಂಗ್ಸ್ ವೇಳೆ ಕಿವೀಸ್‌ನ ಮ್ಯಾಟ್ ಹೆನ್ರಿ 47 ರನ್‌ಗೆ 4, ಟ್ರೆಂಡ್ ಬೌಲ್ಟ್ 44 ರನ್‌ಗೆ 2, ಲಾಕಿ ಫರ್ಗುಸನ್, ಕಾಲಿನ್ ಡೆ ಗ್ರ್ಯಾಂಡ್‌ಹೋಮ್ ತಲಾ 1 ವಿಕೆಟ್ ಪಡೆದಿದ್ದೂ ತಂಡದ ಗೆಲುವಿಗೆ ನೆರವು ನೀಡಿತು.
245 ರನ್ ಗುರಿ ಬೆಂಬತ್ತಿದ ನ್ಯೂಜಿಲ್ಯಾಂಡ್‌ಗೆ ಮಾರ್ಟಿನ್ ಗಪ್ಟಿಲ್ 25, ಕಾಲಿನ್ ಮುನ್ರೋ 24, ನಾಯಕ ಕೇನ್ ವಿಲಿಯಮ್ಸನ್ 40, ರಾಸ್ ಟೇಲರ್ 82 (91), ಜೇಮ್ಸ್ ನೀಶಮ್ 25 ರನ್ ಸೇರಿಸಿದರು. 47.1 ಓವರ್‌ಗೆ ಕಿವೀಸ್ 8 ವಿಕೆಟ್ ಕಳೆದು 248 ರನ್ ಪೇರಿಸಿತು. ರಾಸ್ ಟೇಲರ್ ಪಂದ್ಯಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications