Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಡಿಐ ವಿಶ್ವಕಪ್‌ ಟೂರ್ನಿಯ ಉದ್ಘಾಟನಾ ಸಮಾರಂಭದ ವಿವರ ಇಲ್ಲಿದೆ

ICC World Cup 2019 Opening Ceremony: Celebrity performances and more

ಲಂಡನ್‌, ಮೇ 29: ಏಕದಿನ ಕ್ರಿಕೆಟ್‌ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಂದಹಾಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯು ಈ ಬಾರಿಯ ವಿಶ್ವಕಪ್‌ ಹಿಂದೆಂದು ಕಂಡರಿಯದ ಹಾಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ಈಗಾಗಲೇ ಡಂಗೂರ ಸಾರಿ ಆಗಿದೆ.

ಮೇ 30ರಂದು ಆರಂಭವಾಗಲಿರುವ ವಿಶ್ವಕಪ್‌ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆದರೆ, ಇದಕ್ಕೆ ಒಂದು ದಿನ ಮೊದಲೇ ಅದ್ಧೂರಿ ಉದ್ಘಟನಾ ಸಮಾರಂಭವನ್ನು ಇಲ್ಲಿನ ಜನಪ್ರಿಯ ಮಾಲ್‌ ಒಂದರಲ್ಲಿ ಐಸಿಸಿ ಆಯೋಜಿಸಿದೆ.

ಲೈವ್‌ ಮ್ಯೂಸಿಕ್‌, ಲೈವ್‌ ಸ್ಪೋರ್ಟ್‌ ಹಾಗೂ ಜನಪ್ರಿಯ ವ್ಯಕ್ತಿಗಳಿಂದ ಮನರಂಜನಾ ಕಾರ್ಯಕ್ರಮಗಳನ್ನು ಉದ್ಘಾಟನಾ ಸಮಾರಂಭದಲ್ಲಿ ಮಾಲ್ಕೊಳಗಳಲಿರುವ 4 ಸಾವಿರಕ್ಕೂ ಹೆಚ್ಚಿನ ಪ್ರೇಕ್ಷಕರ ಎದುರು ಪ್ರದರ್ಶಿಸುತ್ತಿರುವುದಾಗಿ ಐಸಿಸಿ ಹೇಳಿಕೊಂಡಿದೆ. ಬಕಿಂಗ್‌ಹ್ಯಾಮ್‌ ಪ್ಯಾಲೆಸ್‌ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿರುವ 10 ತಂಡಗಳ ಯಾವುದೇ ಆಟಗಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಡೇಲಿ ಮೇಲ್‌ ವರದಿ ಮಾಡಿದೆ.

ಆದರೆ, ಕ್ರೀಡೆಯನ್ನು ಹೆಚ್ಚು ಜನಪ್ರಿಯ ಗೊಳಿಸುವ ಉದ್ದೇಶದಿಂದ ಜಾಗತಿಕ ಕ್ರಿಕೆಟ್‌ನ ಮಾಜಿ ತಾರೆಗಳು ಮತ್ತು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಂದಹಾಗೆ ಮೇ 29ರಂದು ಭಾರತೀಯ ಕಾಲಮಾನ ರಾತ್ರಿ 9:30ಕ್ಕೆ ಆರಂಭವಾಗಲಿರುವ ಉದ್ಘಾಟನಾ ಸಮಾರಂಭದಲ್ಲಿ ಏನೆಲ್ಲಾ ನಡೆಯಲಿದೆ ಎಂಬುದರ ವಿವರ ಇಲ್ಲಿದೆ.

ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಸಂಪೂರ್ಣ ವಿವರ ಇಲ್ಲಿದೆ

* ರುಡಿಮೆಂಟಲ್‌ ಡ್ರಮ್‌ ಅಂಡ್‌ ಬಾಸ್‌ ತಂಡ ಪ್ರದರ್ಶನ ನೀಡುವ ಸಾಧ್ಯತೆ ಇದೆ. ಆದರೆ, ಈ ಬ್ಯಾಂಡ್‌ನ ಅರ್ಧದಷ್ಟು ಸದಸ್ಯರು ಮಾತ್ರವೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

* ಜನಪ್ರಿಯ ಹಾಸ್ಯ ಕಲಾವಿದ ಪ್ಯಾಡಿ ಮೆಕ್‌ಗ್ಯೂನೆಸ್‌ ಕ್ರಿಕೆಟ್‌ ಸಂಭ್ರಮಾಚರಣೆ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

* ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕ್ರಿಕೆಟ್‌ ಅಭಿಮಾನಿಗಳಿಗೆ 4 ಸಾವಿರ ಟಿಕೆಟ್‌ಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ.

* ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಂದು ತಂಡದ ಮಾಜಿ ದಿಗ್ಗಜ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಆತಿಥೇಯ ಇಂಗ್ಲೆಂಡ್‌ ತಂಡದ ಪರ ಮಾಜಿ ಆಟಗಾರ ಕೆವಿನ್‌ ಪೀಟರ್ಸನ್‌ ಹಾಜರಿರಲಿದ್ದಾರೆ.

* ಲಂಡನ್‌ನ ಕೇಂದ್ರಭಾಗದ ವೆಸ್ಟ್‌ಮಿನ್‌ಸ್ಟರ್‌ ಸಿಟಿಯ ಮಾಲ್‌ವೊಂದರಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

* ಭಾರತೀಯ ಕಾಲಮಾನ ರಾತ್ರಿ 9:30ಕ್ಕೆ ಉದ್ಘಾಟನಾ ಸಮಾರಂಭ ಆರಂಭವಾಗಲಿದೆ. ಸ್ಟಾರ್‌ ಸ್ಪೋರ್ಸ್ಟ್‌ ನೆಟ್‌ವರ್ಕ್‌ನಲ್ಲಿ ಉದ್ಘಾಟನಾ ಸಮಾರಂಭದ ನೇರ ಪ್ರಸಾರವಾಗಲಿದೆ.

Story first published: Wednesday, May 29, 2019, 17:58 [IST]
Other articles published on May 29, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+