Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ ಗೆಲ್ಲೋ ತಂಡ ಹೆಕ್ಕಿದ ಪಾಂಟಿಂಗ್, ಭಾರತದ ಬಗ್ಗೆಯೂ ಕಾಮೆಂಟ್!

ರಿಕಿ ಪಾಂಟಿಂಗ್ ಬಿಚ್ಚಿಟ್ರು ಅಚ್ಚರಿಯ ಸತ್ಯ..! | Oneindia Kannada
ICC World Cup 2019: Ricky Ponting picks his ‘clear favourites’

ಸಿಡ್ನಿ, ಮೇ 20: ಮೇ 30ರಿಂದ ಆರಂಭಗೊಳ್ಳಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ 2019ರಲ್ಲಿ ಟ್ರೋಫಿ ಗೆಲ್ಲುವ ಪಕ್ಕಾ ತಂಡವನ್ನು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಕ್ಕಿ ತೆಗೆದಿದ್ದಾರೆ. ಆತಿಥೇಯ ಇಂಗ್ಲೆಂಡ್ ಈ ಸಾರಿ ಕಪ್‌ ಗೆಲ್ಲೋ ನೆಚ್ಚಿನ ತಂಡ ಎಂದು ಪಾಂಟಿಂಗ್ ಹೇಳಿದ್ದಾರೆ.

ತವರು ನೆಲದಲ್ಲೇ ಟೂರ್ನಿ ನಡೆಯುತ್ತಿರುವುದರಿಂದ ಇಯಾನ್ ಮಾರ್ಗನ್ ಬಳಗಕ್ಕೆ ಟ್ರೋಫಿ ಗೆಲ್ಲೋದು ಸುಲಭವಾಗಲಿದೆ. ಅಲ್ಲದೆ ಸದ್ಯ ಇಂಗ್ಲೆಂಡ್‌ ತಂಡ ಭರ್ಜರಿ ಫಾರ್ಮ್‌ನಲ್ಲಿರೋದೂ ತಾನು ಇಂಗ್ಲೆಂಡ್ ತಂಡವನ್ನು ನೆಚ್ಚಿನ ತಂಡವಾಗಿ ಆರಿಸಲು ಕಾರಣ ಎಂದು ಎರಡು ಸಾರಿ ವಿಶ್ವಕಪ್ ವಿಜೇತ ತಂಡದ ನಾಯಕ ರಿಕಿ ಹೇಳಿಕೊಂಡಿದ್ದಾರೆ.

ವಿಶ್ವಕಪ್ ಬಗ್ಗೆ ಮಾತನಾಡುತ್ತ ಪಾಂಟಿಂಗ್, 'ಇಂಗ್ಲೆಂಡ್‌ ತಂಡ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಕಠಿಣ ಸ್ಪರ್ಧೆ ಎದುರಿಸಲಿದೆ. ಆದರೆ ಎರಡೂ ತಂಡಗಳ ಕಠಿಣ ಸ್ಪರ್ಧೆಯಲ್ಲಿ ಇಂಗ್ಲೆಂಡ್ ಮೇಲುಗೈ ಸಾದಿಸುವ ಸಾಧ್ಯತೆ ಹೆಚ್ಚಿದೆ' ಎಂದು ವಿವರಿಸಿದರು.

ಇಂಗ್ಲೆಂಡ್ ತಂಡವನ್ನು ಪಾಂಟಿಂಗ್ ಬಲಿಷ್ಠ ತಂವಾಗಿ ಬಿಂಬಿಸಲು ಕಾರಣವಿದೆ. ಇಂಗ್ಲೆಂಡ್ ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ನಂ.1 ಸ್ಥಾನದಲ್ಲಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪ್ರವಾಸಿ ಪಾಕಿಸ್ತಾನ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯ 4 ಪಂದ್ಯಗಳಲ್ಲಿ (ಒಂದು ಪಂದ್ಯ ಟೈ) 340+ ರನ್ ಬಾರಿಸಿತ್ತಲ್ಲದೆ ಎಲ್ಲಾ ಪಂದ್ಯಗಳಲ್ಲೂ ಗೆದ್ದಿತ್ತು!

Story first published: Monday, May 20, 2019, 16:07 [IST]
Other articles published on May 20, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+