ಟೀಮ್ ಇಂಡಿಯಾ ಗುಟ್ಟುಗಳ ರಟ್ಟು ಮಾಡಿದ ಹಿಟ್‌ಮ್ಯಾನ್: ವೈರಲ್ ವಿಡಿಯೋ

ಲಂಡನ್, ಮೇ 27: ಒಂದು ತಂಡ ಅಂದ್ರೆ ಅಲ್ಲಿ ಭಿನ್ನಭಿರುಚಿಗಳ ವ್ಯಕ್ತಿಗಳಿರುತ್ತಾರೆ. ನಮ್ಮ ಟೀಮಿನಲ್ಲಿ ಆತ ಹಂಗೆ ಅಂತ ನಾವು ಒಬ್ಬನತ್ತ ಬೊಟ್ಟು ಮಾಡಿ ಗಹಗಹಿಸುವ ಹೊತ್ತಿಗೆ ಇನ್ನೊಬ್ಬ ನಮ್ಮ ಬೆನ್ನ ಹಿಂದೆ ನಿಂತು ನಮ್ಮತ್ತಲೇ ಬೆರಳು ತೋರಿಸಿ ಹಲ್ಲು ಕಿಸಿಯುತ್ತಿರುತ್ತಾನೆ. ಟೀಮ್ ಇಂಡಿಯಾದಲ್ಲಿನ ಇಂಥ ಕುಹೂಹಲಕಾರಿ ಸೀಕ್ರೆಟ್‌ಗಳನ್ನು ಉಪ ನಾಯಕ ರೋಹಿತ್ ಶರ್ಮಾ ಬಿಚ್ಚಿಟ್ಟಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಮೇ 30ರಿಂದ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಆರಂಭಗೊಳ್ಳುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದರೆ, ತಂಡದ ಜವಾಬ್ದಾರಿಯ ಹೊರೆ ಉಪ ನಾಯಕ ರೋಹಿತ್ ಶರ್ಮಾ ಮೇಲೂ ಇದೆ. ಭಾರತ ತಂಡದಲ್ಲಿರುವ ಕೆಲ ವಿಶಿಷ್ಟ ಕ್ಯಾರೆಕ್ಟರ್‌ಗಳ ಬಗ್ಗೆ ಹಿಟ್ ಮ್ಯಾನ್ ರೋಹಿತ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತದ ತಂಡದಲ್ಲಿರುವ ಆಟಗಾರರ ಸೀಕ್ರೆಟ್‌ಗಳೆಂದರೆ ಇವು ನಿರುಪದ್ರವಿ ರಹಸ್ಯಗಳು. ಈ ಗುಟ್ಟು ರಟ್ಟಾದರೂ ಮುಖವನ್ನು ಹನುಮಂತನ ಹಾಗೆ ಯಾರೂ ಉಬ್ಬಿಸಿಕೊಳ್ಳೋ ಮಾತಿಲ್ಲ. ಅಂಥ ಗುಟ್ಟುಗಳಿವು. ಎಲ್ಲರೂ ಒಬ್ಬರ ಹಾಗಿರಲಾರರು. ಭಿನ್ನವಿದ್ದರೇನೇ ಚೆನ್ನವಂತೆ. ಭಾರತ ಕ್ರಿಕೆಟ್ ತಂಡದಲ್ಲಿರುವ ಭಿನ್ನರ ಬಗ್ಗೆ ಶರ್ಮಾ ಮಾತನಾಡಿರುವ ವಿಡಿಯೋವನ್ನು ಐಸಿಸಿ, ಟ್ವಿಟರ್‌ನಲ್ಲಿ ಹಾಕಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications