For Quick Alerts
ALLOW NOTIFICATIONS  
For Daily Alerts
 

ಮೈಖೇಲ್ ಎಕ್ಸ್‌ಕ್ಲೂಸಿವ್: ಶಮಿ 2.0; ಮತ್ತಷ್ಟು ವೇಗ, ಫಿಟ್, ಪರಿಣಾಮಕಾರಿ

By R Kaushik, London
ICC World Cup 2019 : ಇದು ಶಮಿ 2.0 ವರ್ಷನ್ ಯಾಕೆ ಗೊತ್ತಾ..? | Mohammed Shami | Oneindia Kannada
ICC World Cup 2019: Shami 2.0: Fitter, faster, meaner

ಮ್ಯಾಂಚೆಸ್ಟರ್, ಜೂನ್ 28: ನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ಗಳಲ್ಲಿ ಆಯೋಜಿಸಲಾಗಿದ್ದ ವಿಶ್ವ ಕಪ್ ಕ್ರಿಕೆಟ್ ಸಂದರ್ಭದಲ್ಲಿ ಶಮಿ ತಂಡದ ಪ್ರಮುಖ ಸದಸ್ಯರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದರು. ಉಮೇಶ್ ಯಾದವ ಹಾಗೂ ಮೋಹಿತ್ ಶರ್ಮಾ ಅವರೊಂದಿಗೆ ಭಾರತದ ವೇಗದ ಬೌಲಿಂಗ್ ಮುಂಚೂಣಿಯಲ್ಲಿದ್ದವರು ಶಮಿ. ಈ ಜೋಡಿಯ ಕರಾರುವಾಕ್ ಬೌಲಿಂಗ್‌ನಿಂದ ಆಗಿನ ವಿಶ್ವಕಪ್ ಲೀಗ್ ಹಂತದಲ್ಲಿ ಏಳು ಎದುರಾಳಿಗಳನ್ನು ಸೋಲಿಸಿ ಭಾರತ ಸೆಮಿ ಫೈನಲ್ ಪ್ರವೇಶಿಸಿತ್ತು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಪರ್ತ್‌ನಲ್ಲಿ ಭಾರತವು ಯುಎಇ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ಪಂದ್ಯದಲ್ಲಿ ಮಾತ್ರ ಬೆನ್ನುನೋವಿನ ಕಾರಣದಿಂದ ಆಡಿರಲಿಲ್ಲ. ಆದರೂ ಪಂದ್ಯಾವಳಿಯ 7 ಪಂದ್ಯಗಳಿಂದ ಒಟ್ಟು 17 ವಿಕೆಟ್ ಪಡೆದು ಉಮೇಶ್ ಯಾದವ್ (18 ವಿಕೆಟ್) ಅವರಿಗಿಂತ ಒಂದೇ ಸ್ಥಾನ ಹಿಂದಿದ್ದರು.

ಆದರೆ ವಿಶ್ವಕಪ್ ಮುನ್ನ ಮಧ್ಯಾಂತರದ ಅವಧಿಯಲ್ಲಿ ಇವರ ಅದೃಷ್ಟ ಅಷ್ಟೊಂದು ಚೆನ್ನಾಗಿರಲಿಲ್ಲ. ಗಾಯ ಹಾಗೂ ಫಿಟ್ನೆಸ್ ಸಮಸ್ಯೆಗಳು ವಿಶ್ವಕಪ್ ತಯಾರಿಗೆ ಸಾಕಷ್ಟು ಅಡ್ಡಿ ಉಂಟು ಮಾಡಿದವು. ಇದಕ್ಕೂ ಮುನ್ನ ಮೊಣಕಾಲು ಸರ್ಜರಿಯ ಕಾರಣದಿಂದ ಸುಮಾರು ಒಂದೂವರೆ ವರ್ಷ ಕ್ರಿಕೆಟ್‌ನಿಂದ ದೂರವಿರಬೇಕಾಯಿತು. ಕಳೆದ ವರ್ಷದ ಮಧ್ಯದಲ್ಲಿ ಇವರು ಯೋ ಯೋ ಪರೀಕ್ಷೆಯಲ್ಲಿ ವಿಫಲರಾದ ನಂತರ ಇವರನ್ನು ಆ ವರ್ಷದ ಜೂನ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಾವಳಿಯಿಂದ ಕೈಬಿಡಲಾಗಿತ್ತು.

ಈ ಒಂದು ಅವಧಿಯು ಶಮಿ ಪಾಲಿಗೆ ಮಾಡು ಇಲ್ಲವೆ ಮಡಿ ಎಂಬಂತಾಗಿತ್ತು. ತಂಡದಿಂದ ಕೈಬಿಟ್ಟ ಕಾರಣದಿಂದ ಹಳಹಳಿಸುತ್ತ ಕೂರುವುದು ಅಥವಾ ಮೈಕೊಡವಿ ಮೇಲೆದ್ದು ಫಿಟ್ನೆಸ್ ಹಾಗೂ ವಿಶ್ವಾಸ ವೃದ್ಧಿಗೆ ಮುಂದಾಗುವುದು ಈ ಎರಡು ಆಯ್ಕೆಗಳು ಅವರ ಮುಂದಿದ್ದವು. ಇದರಲ್ಲಿ ಅವರು ಆಯ್ದುಕೊಂಡದ್ದು ಕಠಿಣವಾದ ಎರಡನೆಯ ಆಯ್ಕೆಯನ್ನು. ಗಂಭೀರವಾಗಿ ತಮ್ಮನ್ನು ತಾವು ಸುಧಾರಿಸಿಕೊಳ್ಳುವತ್ತ ಗಮನಹರಿಸಿದ ಶಮಿ ಫಿಟ್ನೆಸ್ ಹೊಂದಿ ಸಾಕಷ್ಟು ತೆಳ್ಳಗೂ ಆದರು.

ಪ್ರಸಕ್ತ ವಿಶ್ವಕಪ್ ಪಂದ್ಯಾವಳಿಯಲ್ಲಿ ಜಸಪ್ರೀತ ಬುಮ್ರಾ ಹಾಗೂ ಭುವನೇಶ್ವರ ಕುಮಾರ ಅವರ ನಂತರ ಮೂರನೇ ಆಯ್ಕೆಯಾಗಿ ಶಮಿ ತಂಡ ಸೇರಿಕೊಂಡರು. ಜೂನ್ 16 ರಂದು ಓಲ್ಡ್ ಟ್ರಾಫರ್ಡ್‌ನಲ್ಲಿ ಪಾಕ್ ವಿರುದ್ಧದ ಪಂದ್ಯದ ವೇಳೆ ಸ್ನಾಯು ನೋವಿನ ಕಾರಣದಿಂದ ಭುವನೇಶ್ವರ ಕುಮಾರ ತಂಡದಿಂದ ಹೊರಹೋಗಬೇಕಾಯಿತು. ಈ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳಲು ಶಮಿ ಸಿದ್ಧವಾಗಿಯೇ ಕುಳಿತಿದ್ದರು ಎನಿಸುತ್ತದೆ. ಅಂದು ಪಾಕ್ ವಿರುದ್ಧದ ಆಟದಲ್ಲಿ ಕೆಲ ಅಪೂರ್ವ ದಾಖಲೆಗಳನ್ನು ಶಮಿ ತನ್ನ ಹೆಸರಿಗೆ ಬರೆಸಿಕೊಂಡಿದ್ದು ಇತಿಹಾಸ.

ಕಳೆದ ಶನಿವಾರ ಸೌಥಾಂಪ್ಟನ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಹ್ಯಾಟ್ರಿಕ್ ಮಾಡಿದ್ದು ಐತಿಹಾಸಿಕ ಸಾಧನೆಯಾಗಿದೆ. ಪಂದ್ಯದಲ್ಲಿ 40 ರನ್ ನೀಡಿ 4 ವಿಕೆಟ್ ಪಡೆದಿದ್ದು ಸಾಕಷ್ಟಿತ್ತು. ಆದರೆ 28 ವರ್ಷದ ಯುವಕ ಶಮಿಗೆ ಇಷ್ಟು ಸಾಕಾಗಲಿಲ್ಲ. ಹ್ಯಾಟ್ರಿಕ್ ಸಾಧನೆಯನ್ನು ಮಾಡಿಯೇ ಬಿಟ್ಟ. ಚೇತನ ಶರ್ಮಾ ನಂತರ ವಿಶ್ವಕಪ್‌ನಲ್ಲಿ ವಿಕೆಟ್ ಹ್ಯಾಟ್ರಿಕ್ ಮಾಡಿದ ಏಕೈಕ ಭಾರತೀಯ ಶಮಿ.

ಶಮಿ ಅವರ ಬೆಂಕಿಯ ಆಟ ನಿನ್ನೆಯ ಗುರುವಾರವೂ ಮುಂದುವರೆದಿತ್ತು. ಓಲ್ಡ್ ಟ್ರಾಫರ್ಡ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅವರ ಬೌಲಿಂಗ್ ನಿಖರತೆ ಎಂಥವರನ್ನೂ ದಂಗುಬಡಿಸುವಂತಿತ್ತು. ಬೌಲ್‌ನ ಸೀಮ್ ಹಿಡಿಯುವ ಶೈಲಿ, ಸ್ವಿಂಗ್ ಕೈಚಳಕಗಳು ಅದ್ವಿತೀಯವಾಗಿದ್ದವು. ಈ ಪಂದ್ಯದಲ್ಲಿ 6.2 ಓವರಗಳಲ್ಲಿ 16 ರನ್ ನೀಡಿ 4 ವಿಕೆಟ್ ಕಬಳಿಸಿದ್ದು ಶಮಿ ಅವರ ಸೂಪರ್ ಫಾರ್ಮಗೆ ಸಾಕ್ಷಿಯಾಗಿದೆ.

ವೆಸ್ಟ್ ಇಂಡೀಸ್ ಆಟಗಾರ ಶಾಯ್ ಹೋಪ್ ಅವರು ಶಮಿ ಅವರ ಬಾಲೊಂದನ್ನು ಪಾಯಿಂಟ್ ಮೇಲೆ ಎತ್ತಿ ರಾಕೆಟ್ ವೇಗದಲ್ಲಿ ಬಾರಿಸಿದರು. ಆದರೆ ಜಸ್ಟ್ ಮುಂದಿನ ಎಸೆತದಲ್ಲಿಯೇ ಶಮಿ ಕೈಯಿಂದ ಬಿರುಗಾಳಿಯಂತೆ ಬಂದ ಬಾಲ್ ಬ್ಯಾಟ್ ಹಾಗೂ ಪ್ಯಾಡ್ ಮಧ್ಯದಿಂದ ನುಸುಳಿ ವಿಕೆಟ್ ಹಾರಿಸಿತು. ಈ ಹಂತದಲ್ಲಿ ಶಮಿ ಅವರ ಖುಷಿ ಮೇರೆ ಮೀರಿತ್ತು.

ಭಾರತ ತಂಡ ಸಾಮರ್ಥ್ಯ ಹಾಗೂ ಕಂಡಿಶನಿಂಗ್ ಕೋಚ್ ಶಂಕರ ಬಾಸು ಅವರು ಶಮಿ ಅವರ ಹೊಸ ಅವತಾರವನ್ನು ಶಮಿ-2 ವರ್ಷನ್ ಎಂದು ಕರೆದಿದ್ದಾರೆ. ನಿಜವಾಗಿಯೂ ಶಮಿ ತಮ್ಮೆಲ್ಲ ಸಾಧನೆಗಳಿಗೆ ಅಭಿನಂದನೀಯರಾಗಿದ್ದಾರೆ.

ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದೆ. ನನ್ನ ಫಿಟ್ನೆಸ್ ಹಾಗೂ ಕೌಟುಂಬಿಕ ಸಮಸ್ಯೆಗಳ ವಿರುದ್ಧ ಹೋರಾಡಿ ಜಯಿಸುವ ಧೈರ್ಯ ನೀಡಿದ ದೇವರಿಗೆ ನಾನು ಕೃತಜ್ಞನಾಗಿರುವೆ. ನನ್ನ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಇದೆ. ಎನ್ನುತ್ತಾರೆ ಶಮಿ.

(ಸುಮಾರು 20 ವರ್ಷಗಳಿಂದಲೂ ಕ್ರಿಕೆಟ್ ಬರವಣಿಗಾಗಿ ಗುರುತಿಸಿಕೊಂಡಿರುವ ಆರ್ ಕೌಶಿಕ್ ಅವರು ಲಂಡನ್‌ನಲ್ಲಿದ್ದು, ಇದು 7ನೇ ಬಾರಿಗೆ ವಿಶ್ವಕಪ್ ಟೂರ್ನಿ ಕವರ್ ಮಾಡುತ್ತಿದ್ದಾರೆ, ಮೈಖೇಲ್‌ಗಾಗಿ ವಿಶೇಷ ಲೇಖನಗಳನ್ನು ಬರೆಯುತ್ತಿದ್ದಾರೆ)

Story first published: Friday, June 28, 2019, 16:21 [IST]
Other articles published on Jun 28, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+