ವಿಶ್ವಕಪ್: ಏಕದಿನ ಕ್ರಿಕೆಟ್‌ಗೆ ಭಾವನಾತ್ಮಕ ವಿದಾಯ ಹೇಳಲಿದ್ದಾರೆ ತಾಹಿರ್

ಲಂಡನ್, ಜುಲೈ 5: ವಿಕೆಟ್ ಸಿಕ್ಕಾಗ ಮೈದಾನದ ತುಂಬೆಲ್ಲಾ ಓಡಾಡಿ ಗಮನ ಸೆಳೆಯುತ್ತಿದ್ದ ದಕ್ಷಿಣ ಆಫ್ರಿಕಾ ತಂಡದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಭಾವನಾತ್ಮಕ ವಿದಾಯ ಹೇಳಲಿದ್ದಾರೆ. ಶನಿವಾರ (ಜುಲೈ 6) ನಡೆಯುವ ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ವಿಶ್ವಕಪ್ ಪಂದ್ಯ ತಾಹಿತ್ ಅವರ ಕೊನೆಯ ಏಕದಿನ ಪಂದ್ಯವಾಗಲಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ವಿಶ್ವಕಪ್ 45ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕಾದಾಡಲಿವೆ. ಇದು ತಾಹಿರ್ ಅವರ 107ನೇ ಏಕದಿನ ಪಂದ್ಯ ಮತ್ತು ಕೊನೆಯ ಪಂದ್ಯವೂ ಹೌದು. ಈ ಪಂದ್ಯದೊಂದಿಗೆ ತಾಹಿರ್‌ಗೆ ಗೆಲುವಿನ ವಿದಾಯ ನೀಡಲು ಆಫ್ರಿಕಾ ಯೋಚಿಸಿದೆ.
ಪಾಕಿಸ್ತಾನದಲ್ಲಿ ಜನಿಸಿದ ತಾಹಿರ್ ದಕ್ಷಿಣ ಆಫ್ರಿಕಾದವರನ್ನು ವರಿಸಿದ್ದರು. 32ನೇ ಜನ್ಮದಿನಕ್ಕೆ ಒಂದು ತಿಂಗಳು ಬಾಕಿಯಿರುವಾಗಲೇ ಅಂದರೆ 2011 ಫೆಬ್ರವರಿಯಲ್ಲಿ ತಾಹಿರ್ ಅಂತಾರಾಷ್ಟ್ರೀಯ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದರು. ತಾಹಿರ್‌ಗೀಗ 40ರ ಹರೆಯ. ಆದರೆ ಇಮ್ರಾನ್ ಹೆಸರಿನಲ್ಲಿ 172 ಏಕದಿನ ವಿಕೆಟ್‌ಗಳಿವೆ.
'ಒಂದು ತಂಡವಾಗಿ ನಾವು ಈ ಪಂದ್ಯವನ್ನು ಗೆಲುವಿನೊಂದಿಗೆ ಕೊನೆಗೊಳಿಸಬೇಕು. ಆದರೆ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೇಳುತ್ತಿರುವುದರ ನನಗೀ ಪಂದ್ಯ ಅತ್ಯಂತ ಬೇಸರದ ಮತ್ತು ಭಾವನಾತ್ಮಕ ಪಂದ್ಯವಾಗಲಿದೆ' ಎಂದು ಇಮ್ರಾನ್ ತಾಹಿರ್ ಹೇಳಿಕೊಂಡಿದ್ದಾರೆ. ಅಂದ್ಹಾಗೆ 2019ರ ವಿಶ್ವಕಪ್‌ನ 8 ಇನ್ನಿಂಗ್ಸ್‌ಗಳಲ್ಲಿ ತಾಹಿರ್ ಒಟ್ಟು 10 ವಿಕೆಟ್ ಪಡೆದಿದ್ದಾರೆ.
ಈ ವಿಶ್ವಕಪ್‌ನಲ್ಲಿ ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ಗೆಲುವು ದಾಖಲಿಸಿರುವ ಫಾ ಡು ಪ್ಲೆಸಿಸ್ ಬಳಗ ಕೇವಲ 5 ಪಾಯಿಂಟ್‌ಗಳೊಂದಿಗೆ ಅಂಕಟಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಈ ಬಾರಿಯ ವಿಶ್ವಕಪ್ ಪ್ರೋಟಿಯಾಸ್ ಪಾಲಿಗಂತೂ ಸಾಕಷ್ಟು ನಿರಾಶೆ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications