ವಿಶ್ವಕಪ್‌ಗೂ ಮೊದಲು ನಿವೃತ್ತಿ ಸುಳಿವು ನೀಡಿದ ಲಂಕಾ ವೇಗಿ ಮಾಲಿಂಗ

ಕೊಲಂಬೋ, ಏಪ್ರಿಲ್ 18: ವಿಶ್ವಕಪ್ ಸಮೀಪಿಸುತ್ತಿರುವಾಗಲೇ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಲಂಕಾ ಕ್ರಿಕೆಟ್ ತಂಡದ ನಾಯಕನಾಗಿ ದಿಮುತ್ ಕರುಣರತ್ನೆ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗಾಗಿ ಶ್ರೀಲಂಕಾ ತಂಡವೂ ಪ್ರಕಟಗೊಂಡಿದೆ. ಈ ನಡುವೆ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗಾ ಅವರ ನಿವೃತ್ತಿ ಸುಳಿವು ನೀಡಿರುವ ಸುದ್ದಿ ಓಡಾಡುತ್ತಿದೆ.
ಲಸಿತ್ ಮಾಲಿಂಗ ಬೇಸರಗೊಳ್ಳವುದಕ್ಕೆ, ನಿವೃತ್ತಿ ಸುಳಿವು ನೀಡುವುದಕ್ಕೆ ಕಾರಣವಿದೆ. ಶ್ರೀಲಂಕಾ ಏಕದಿನ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಕರುಣರತ್ನೆ ಆಯ್ಕೆಯಾಗುವುದಕ್ಕೂ ಮುನ್ನ ಮಾಲಿಂಗ ತಂಡವನ್ನು ಮುನ್ನಡೆಸುತ್ತಿದ್ದರು. ಆದರೆ ಬುಧವಾರ ಲಂಕಾ ತಂಡ, ದಿಮುತ್ ಕರುಣರತ್ನೆ ಅವರನ್ನು ನೂತನ ನಾಯಕರಾಗಿ ನೇಮಿಸಿತ್ತು.
ನಾಯಕ ಸ್ಥಾನದಿಂದ ಕೆಳಗಿಳಿಸಿರುವುದರಿಂದ ಬೇಸರಗೊಂಡು ಮಾಲಿಂಗ, ವಿಶ್ವಕಪ್‌ಗೂ ಮುನ್ನ ನಿವೃತ್ತಿ ಬಗ್ಗೆ ಯೋಚಿಸಿರುವುದಾಗಿ ಹೇಳಲಾಗುತ್ತಿದೆ.

ವಿಶ್ವಕಪ್ ತಂಡಕ್ಕೂ ದಿಮುತ್ ಸಾರಥ್ಯ
ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಗಾಗಿ ಶ್ರೀಲಂಕಾ, 15 ಜನ ಆಟಗಾರರಿರುವ ತಂಡವನ್ನು ಗುರುವಾರ (ಏಪ್ರಿಲ್ 18) ಪ್ರಕಟಿಸಿದೆ. ಬುಧವಾರ (ಏಪ್ರಿಲ್ 17) ಆರಂಭಿಕ ಆಟಗಾರ ದಿಮುತ್ ಕರುಣ ರತ್ನೆ ಅವರನ್ನು ಶ್ರೀಲಂಕಾ ಕ್ರಿಕೆಟ್, ತಂಡದ ನಾಯಕರನ್ನಾಗಿ ಆರಿಸಿತ್ತು. ವಿಶ್ವಕಪ್‌ನಲ್ಲೂ ಕರುಣರತ್ನೆ ಶ್ರೀಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ. ನಾಯಕತ್ವ ಬದಲಾವಣೆ ಮಾಲಿಂಗಗೆ ಸಹಜವಾಗೇ ಬೇಸರ ಮೂಡಿಸಿದೆ.

ಎಲ್ಲರನ್ನೂ ದೇವರು ಕಾಪಾಡಲಿ
ವರದಿಯೊಂದರ ಪ್ರಕಾರ ಬುಧವಾರ (ಏ.17) ಬೆಳಗ್ಗೆ (11.22 am) ಮಾಲಿಂಗಾ ಅವರು ಶ್ರೀಲಂಕಾ ಆಟಗಾರರಿರುವ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಮೆಸೇಜ್ ಕಳಿಸಿದ್ದರು. ಮೆಸೇಜ್‌ನಲ್ಲಿ 'ಮೈದಾನದಲ್ಲಿ ನಾವಿನ್ನು ಭೇಟಿಯಾಗೋದು ಸಾಧ್ಯವಿಲ್ಲ. ಬೆನ್ನಿಗಿದ್ದು ನನ್ನನ್ನು ಬೆಂಬಲಿಸಿದ ಎಲ್ಲರನ್ನೂ ದೇವರು ಕಾಪಾಡಲಿ' ಎಂದು ಬರೆಯಲಾಗಿತ್ತು.

ಲಂಕಾ ತಂಡದಲ್ಲಿ ಮಾಲಿಂಗಾ
ನಾಯಕತ್ವದಿಂದ ಕೆಳಗಿಳಿಸಿದರೂ ಶ್ರೀಲಂಕಾ ಪ್ರಕಟಿಸಿರುವ ತಂಡದಲ್ಲಿ ಮಾಲಿಂಗಾ ಕೂಡ ಇದ್ದಾರೆ. ಮೇ 30ರಿಂದ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 2019ರ ವಿಶ್ವಕಪ್ ಕ್ರಿಕೆಟ್ ಆರಂಭಗೊಳ್ಳಲಿದೆ. ಜೂನ್ 1ರಂದು ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್ ಮಧ್ಯೆ ವಿಶ್ವಕಪ್ ಮೊದಲ ಪಂದ್ಯ ನಡೆಯಲಿದೆ.

ನಿರಾಶೆಯ ಮೆಸೇಜ್
ಮಾಲಿಂಗ ಅವರು ನಿರಾಶೆಯ ಮೆಸೇಜ್ ಕಳುಹಿಸುವುದಕ್ಕೂ ಮುನ್ನ ಲಂಕಾ ಕ್ರಿಕೆಟ್ ಆಯ್ಕೆ ಸಮಿತಿಯ ಮುಖ್ಯಸ್ಥ ಅಸಂತ ಡಿ ಮೆಲ್ ಕರೆ ಮಾಡಿದ್ದರೆನ್ನಲಾಗಿದೆ. ಕರೆ ಮಾಡಿದ್ದ ಡಿ ಮೆಲ್, ನಾಯಕತ್ವದ ಭರವಸೆಯಿಲ್ಲದೆ ವಿಶ್ವಕಪ್‌ನಲ್ಲಿ ಲಭ್ಯರಿರುವ ಬಗ್ಗೆ ಮಾತನಾಡಿದ್ದರು. ಹೀಗಾಗಿ ಲಸಿತ್‌ಗೆ ನಾಯಕತ್ವ ಕೈತಪ್ಪುತ್ತಿರುವ ಬಗ್ಗೆ ಅರಿವಾಗಿತ್ತು. ಮಾಲಿಂಗ ಅವರ ನಿರಾಶೆಯ ಮೆಸೇಜ್‌ಗೆ ಇದೇ ಕಾರಣ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications