For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಸಿಡಿದ ಫಿಂಚ್, ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾಕ್ಕೆ ಗೆಲುವು

ICC World Cup 2019: Sri Lanka vs Australia, Match 20 - Live Score

ಲಂಡನ್, ಜೂನ್ 15: ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಶನಿವಾರ (ಜೂನ್ 15) ನಡೆದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಆಸೀಸ್ 87 ರನ್ ಗೆಲುವನ್ನಾಚರಿಸಿದೆ. ನಾಯಕ ಆ್ಯರನ್ ಫಿಂಚ್ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಕಾಂಗರೂ ಪಡೆ ಜಯ ದಾಖಲಿಸಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್, ಆ್ಯರನ್ ಫಿಂಚ್ ಉತ್ತಮ ಜೊತೆಯಾಟದ ಬೆಂಬಲ ದೊರೆಯಿತು. ಫಿಂಚ್ 132 ಎಸೆತಗಳಿಗೆ 153 ರನ್, ಸ್ಟೀವ್ ಸ್ಮಿತ್ 73 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 46 ರನ್ ಕೊಡುಗೆಯಿಂದ ಆಸ್ಟ್ರೇಲಿಯಾ 334 ಬೃಹತ್ ರನ್ ಕಲೆ ಹಾಕಿತು.

ಶ್ರೀಲಂಕಾ vs ಆಸ್ಟ್ರೇಲಿಯಾ, ಜೂನ್ 15, Live ಸ್ಕೋರ್‌ಕಾರ್ಡ್

1
43664

50 ಓವರ್‌ ಮುಕ್ತಾಯಕ್ಕೆ ಆಸೀಸ್ 7 ವಿಕೆಟ್ ನಷ್ಟದಲ್ಲಿ 334 ರನ್ ಪೇರಿಸಿತು. ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಬೌಲರ್‌ಗಳಾದ ಉಸುರು ಉದಾನ 2, ಧನಂಜಯ ಡಿ ಸಿಲ್ವಾ 2, ಲಸಿತ್ ಮಾಲಿಂಗ 1 ವಿಕೆಟ್ ಪಡೆದು ಗಮನ ಸೆಳೆದರು.

ಗುರಿ ಬೆನ್ನತ್ತಿದ್ದ ಶ್ರೀಲಂಕಾ, ಆರಂಭಿಕ ಬ್ಯಾಟ್ಸ್ಮನ್, ನಾಯಕ ದಿಮುತ್ ಕರುಣರತ್ನೆ (97 ರನ್) ಕುಸಾಲ್ ಪೆರೆರಾ (52 ರನ್) ಅರ್ಧಶತಕದ ನೆರವಿನಿಂದ ತಕ್ಕ ಮಟ್ಟಿನ ಹೋರಾಟ ನಡೆಸಿತಾದರೂ ಉಳಿದ ಬ್ಯಾಟ್ಸ್ಮನ್‌ಗಳ ಬೆಂಬಲವಿಲ್ಲದೆ ಸೊರಗಿತು. 45.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 247 ರನ್ ಬಾರಿಸಲಷ್ಟೇ ಲಂಕಾ ಶಕ್ತವಾಯಿತು. ಇದರೊಂದಿಗೆ ಲಂಕಾ ಸೆಮಿಫೈನಲ್ ಕನಸು ಬಹುತೇಕ ಕಮರಿದಂತಾಗಿದೆ.

ಆಸ್ಟ್ರೇಲಿಯಾ ತಂಡ: ಆ್ಯರನ್ ಫಿಂಚ್ (ಸಿ), ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಅಲೆಕ್ಸ್ ಕ್ಯಾರಿ (ಡಬ್ಲ್ಯು), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಜಾಸನ್ ಬೆಹೆರೆನ್ಡಾಫ್.

ಶ್ರೀಲಂಕಾ ತಂಡ: ದಿಮುತ್ ಕರುಣರತ್ನ (ಸಿ), ಕುಸಾಲ್ ಪೆರೆರಾ (ಪ), ಲಹಿರು ತಿರಿಮನ್ನೆ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ತಿಸೆರಾ ಪೆರೆರಾ, ಇಸುರು ಉದಾನ, ಮಿಲಿಂಡಾ ಸಿರಿವರ್ಧನ, ಲಸಿತ್ ಮಾಲಿಂಗ, ನುವಾನ್ ಪ್ರದೀಪ್.

{headtohead_cricket_7_1}

Story first published: Sunday, June 16, 2019, 0:35 [IST]
Other articles published on Jun 16, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+