For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾಕ್ಕೆ ಬಲ ತುಂಬಲು ಬಂದ ಬಿರುಸಿನ ವೇಗದ ಬೌಲರ್

ICC World Cup 2019 : ತಂಡಕ್ಕೆ ಎಂಟ್ರಿಕೊಟ್ಟ ಬೌಲರ್..! ಆದ್ರೆ ಬೌಲಿಂಗ್ ಮಾಡುವಂತಿಲ್ಲ..? | Oneindia Kannada
ICC World Cup 2019: Unfit Bhuvi prompts India to summon Saini as net bowler

ಬೆಂಗಳೂರು, ಜೂನ್ 24: ವಿಶ್ವಕಪ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾಕ್ಕೂ ಗಾಯಾಳುಗಳ ಸಮಸ್ಯೆ ಎದುರಾಗಿದ್ದು, ಪ್ರಮುಖ ಬ್ಯಾಟ್ಸ್ ಮನ್ ಹಾಗೂ ಬೌಲರ್ ಗಳನ್ನು ಕಳೆದುಕೊಂಡಿದೆ. ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಇನ್ನೂ ಚೇತರಿಸಿಕೊಂಡಿಲ್ಲ.

ಈಗಾಗಲೇ ಆರಂಭಿಕ ಆಟಗಾರ ಶಿಖರ್ ಧವನ್ ಅವರು ತಂಡವನ್ನು ತೊರೆದಿದ್ದಾರೆ. ಈಗ ಭುವನೇಶ್ವರ್ ಕುಮಾರ್ ಅವರು ಮುಂದಿನ ಪಂದ್ಯಕ್ಕೂ ಮುನ್ನ ಅವರ ಫಿಟ್ನೆಸ್ ಸಾಬೀತುಪಡಿಸಬೇಕಿದೆ. ಹೀಗಾಗಿ, ಜಸ್ ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ.

ನೆಟ್ ಅಭ್ಯಾಸದ ಬೌಲರ್ : ಭಾರತ 'ಎ' ತಂಡ ಪ್ರಮುಖ ಬೌಲರ್, ಆರ್ ಸಿಬಿ ಸ್ಟಾರ್ ವೇಗಿ ನವ್​ದೀಪ್ ಸೈನಿ ಅವರು ಟೀಂ ಇಂಡಿಯಾದ ನೆಟ್ ಬೌಲರ್ ಆಗಿ ತಂಡವನ್ನು ಸೇರಿಕೊಳ್ಳಲಿದ್ದು, ವಿಶ್ವಕಪ್ ಮುಗಿಯುವ ತನಕ ತಂಡದ ಜೊತೆಗಿರಲಿದ್ದಾರೆ. ಭಾರತ ತನ್ನ ಮುಂದಿನ ಪಂದ್ಯವನ್ನು ಜೂನ್ 27ರಂದು ವೆಸ್ಟ್​ ಇಂಡೀಸ್ ವಿರುದ್ಧ ಹಾಗೂ ಜೂನ್ 30ರಂದು ಇಂಗ್ಲೆಂಡ್ ವಿರುದ್ಧ ಆಡಲಿದೆ.

ಮ್ಯಾಂಚೆಸ್ಟರ್​ ತಲುಪಿರುವ ಸೈನಿ ಅವರು ಭಾರತೀಯ ಬ್ಯಾಟ್ಸ್​ಮನ್​​ಗಳಿಗೆ ನೆಟ್ ಬೌಲರ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ನೆಟ್​ ಬೌಲರ್ ಆಗಿ ಸೈನಿ ಒಬ್ಬರೇ ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ಹೇಳಿದೆ.

ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ತಿಳಿಸಿದ್ದು, 'ನವ್​ದೀಪ್ ಸೈನಿ ಮ್ಯಾಂಚೆಸ್ಟರ್​ಗೆ ಬಂದಿದ್ದಾರೆ. ಅವರು ಭಾರತೀಯ ಬ್ಯಾಟ್ಸ್​ಮನ್​​ಗಳಿಗೆ ನೆಟ್ ಬೌಲರ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ನೆಟ್​ ಬೌಲರ್ ಆಗಿ ಸೈನಿ ಒಬ್ಬರೇ ಆಯ್ಕೆಯಾಗಿದ್ದಾರೆ' ಎಂದು ಹೇಳಿದೆ. 15 ಮಂದಿ ತಂಡದ ಪ್ರಕಟಿಸಿದಾಗ ಬದಲಿ ಆಟಗಾರರ ಪಟ್ಟಿಯಲ್ಲಿ ಸೈನಿ ಕೂಡಾ ಇದ್ದರು. ಆದರೆ, ಅನಾರೋಗ್ಯದ ಕಾರಣ ಈ ಮುಂಚೆ ತಂಡವನ್ನು ಸೇರಲಾಗಿರಲಿಲ್ಲ.

ಇದಕ್ಕೂ ಮುನ್ನ ಖಲೀಲ್ ಅಹ್ಮದ್ ಅವರು ನೆಟ್ ಬೌಲರ್ ಆಗಿದ್ದರು. ಆದರೆ, ವೆಸ್ಟ್ ಇಂಡೀಸ್ ಎ ತಂಡದ ವಿರುದ್ಧ ಆಡಲು ಆಯ್ಕೆಯಾಗಿರುವುದರಿಂದ ನ್ಯಾಟಿಂಗ್ ಹ್ಯಾಮ್ ನಿಂದ ತೆರಳಿದ್ದಾರೆ. ದೀಪಕ್ ಚಾಹರ್ ಮತ್ತೊಬ್ಬ ನೆಟ್ ಬೌಲರ್ ಆಗಿದ್ದಾರೆ.

Story first published: Monday, June 24, 2019, 22:24 [IST]
Other articles published on Jun 24, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+