Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಕ್ರಿಕೆಟ್ ವಿಶ್ವಕಪ್‌ 2019: ಲಂಡನ್ ತಲುಪಿದ ವಿರಾಟ್ ಕೊಹ್ಲಿ ಬಳಗ

ICC World Cup 2019: Virat Kohli and Co touchdown in London

ಲಂಡನ್, ಮೇ 23: ಐಸಿಸಿ ಕ್ರಿಕೆಟ್ ವಿಶ್ವಕಪ್‌ 2019ರ ಹಣಾಹಣಿಗಾಗಿ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್‌ನ ಲಂಡನ್‌ಗೆ ತಲುಪಿದೆ. ಬುಧವಾರ (ಮೇ 22) ಸಂಜೆ ವಿರಾಟ್ ಕೊಹ್ಲಿ ಬಳಗ ಆಂಗ್ಲ ನೆಲ ಸ್ಪರ್ಷಿಸಿದೆ. ತಂಡ ಇಂಗ್ಲೆಂಡ್ ತಲುಪಿರುವ ಚಿತ್ರವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಟ್ವಿಟರ್‌ನಲ್ಲಿ ಹಾಕಿಕೊಂಡಿದೆ.

ಸದ್ಯ ಏಕದಿನ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತ, ಮೇ 30ರಿಂದ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಆರಂಭಗೊಳ್ಳಲಿರುವ ಅದ್ದೂರಿ ಕ್ರಿಕೆಟ್ ಟೂರ್ನಿಯಲ್ಲಿ 3ನೇ ರ್ಯಾಂಕಿಂಗ್ ನಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಕ ಪಂದ್ಯವನ್ನಾಡಲಿದೆ.

ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ತಲುಪಿರುವ ಚಿತ್ರವನ್ನು ಕೊಹ್ಲಿ, ಯುಜುವೇಂದ್ರ ಚಾಹಲ್, ಕೇದಾರ್ ಜಾಧವ್ ಮೊದಲಾದವರು ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 5ರಂದು ಮೊದಲು ಸವಾಲು ಸ್ವೀಕರಿಸುವುದಕ್ಕೂ ಮುನ್ನ ಭಾರತ, ನ್ಯೂಜಿಲ್ಯಾಂಡ್ ವಿರುದ್ಧ ಮೇ 25ರಂದು ವಾರ್ಮ್‌ ಅಪ್ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ.

15 ಜನರನ್ನೊಳಗೊಂಡ ಭಾರತ ವಿಶ್ವಕಪ್ ತಂಡ: ವಿರಾಟ್ ಕೊಹ್ಲಿ (ಸಿ), ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ವಿಜಯ್ ಶಂಕರ್, ಎಂಎಸ್ ಧೋನಿ, ಕೇದಾರ್‌ ಜಾಧವ್, ದಿನೇಶ್ ಕಾರ್ತಿಕ್, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ ಕುಮಾರ್, ಜಸ್‌ಪ್ರೀತ್‌ ಬೂಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ.

Story first published: Thursday, May 23, 2019, 10:07 [IST]
Other articles published on May 23, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+