ವಿಶ್ವಕಪ್ 2019: ಬ್ಯಾಟ್ ಬಿಟ್ಟು ಬಾಲ್ ಎತ್ತಿಕೊಂಡ ವಿರಾಟ್ ಕೊಹ್ಲಿ!-ವಿಡಿಯೋ

ಸೌತಾಂಪ್ಟನ್, ಮೇ 30: ಈ ಬಾರಿಯ ವಿಶ್ವಕಪ್ ಟೂರ್ನಿ ಅತ್ಯಂತ ಜಿದ್ದಾಜಿದ್ದಿಯ ಟೂರ್ನಿ ಅನ್ನಿಸಲಿದೆ ಎಂದು ಸ್ವತಃ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದರು. ಅದಕ್ಕಾಗೇ ಕೊಹ್ಲಿ ಈ ಬಾರಿ ಬೌಲಿಂಗ್ ಎಸೆಯೋ ಯೋಜನೆಯಲ್ಲಿದ್ದಾರಾ? ಗೊತ್ತಿಲ್ಲ. ಅಂತೂ ಕೊಹ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ವಿಶ್ವಕಪ್: ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, ಮೇ 30, Live ಸ್ಕೋರ್‌ಕಾರ್ಡ್
ಬ್ಯಾಟಿಂಗ್‌ಗಾಗಿ ಸದಾ ಗಮನ ಸೆಳೆಯೋರು ಬೌಲಿಂಗ್ ಮಾಡೋಲ್ಲ ಅಂತೇನಿಲ್ಲ. ಬೌಲರ್‌ಗಳೂ ಕೆಲವೊಮ್ಮೆ ಬ್ಯಾಟ್ ಬೀಸಿ ಕ್ರಿಕೆಟ್ ಅಭಿಮಾನಿಗಳನ್ನು ನಿಬ್ಬೆರಗಾಗಿಸಿದ್ದ ಉದಾಹರಣೆಗಳೂ ಇವೆ. ಭಾರತದವರನ್ನೇ ತೆಗೆದುಕೊಳ್ಳೋದಾದ್ರೆ ಸಚಿನ್ ತೆಂಡೂಲ್ಕರ್ ಮತ್ತು ಇತ್ತೀಚೆಗೆ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರನ್ನು ನೀವು ಗಮನಿಸಿರಬಹುದು.
ವಿಶ್ವಕಪ್‌ನಲ್ಲಿ ಆರಂಭಿಕ ಪಂದ್ಯವಾಗಿ ಭಾರತ ತಂಡ ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೈದಾನಕ್ಕಿಳಿಯಲಿದೆ. ಈ ಪಂದ್ಯ ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಸದ್ಯ ಸೌತಾಂಪ್ಟನ್‌ನಲ್ಲಿರುವ ಟೀಮ್ ಇಂಡಿಯಾ ಗುರುವಾರ (ಮೇ 30) ಅಭ್ಯಾಸ ನಡೆಸಿತ್ತು. ಈ ವೇಳೆ ಕೊಹ್ಲಿ ಬೌಲಿಂಗ್ ಮಾಡಿದ್ದರು.
ಏಕದಿನ ಕ್ರಿಕೆಟ್‌ನಲ್ಲಿ ನಂ.1 ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಇದಕ್ಕೆ ಕ್ರಿಕೆಟ್ ಅಭಿಮಾನಿಗಳ ಪ್ರತಿಕ್ರಿಯೆಯೂ ಬಂದಿದ್ದು, ಕೊಹ್ಲಿ ಭಾರತಕ್ಕೆ 6ನೇ ಬೌಲಿಂಗ್ ಆಯ್ಕೆ ಎಂದು ಹಲವಾರು ಮಂದಿ ಟ್ವೀಟ್ ಮಾಡಿದ್ದಾರೆ.
{headtohead_cricket_3_6}
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications