For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್, ಎಕ್ಸ್‌ಕ್ಲೂಸಿವ್: ತನ್ನ ಸ್ವಂತ ಪರಂಪರೆಯ ಹುಡುಕಾಟದಲ್ಲಿ ಕೊಹ್ಲಿ

By R Kaushik
ICC World Cup 2019: Virat Kohli, in search of his own legacy

ಸೌತಾಂಪ್ಟನ್, ಜೂನ್ 5: ಮೂಗಿನ ಮೇಲೊಂದು ಕನ್ನಡಕ, ಚೆಂದವಾಗಿ ಟ್ರಿಮ್ ಮಾಡಿರುವ ಗಡ್ಡ, ನೀಟಾಗಿ ಜೋಡಿಸಿದಂತಿರುವ ಕೂದಲು, ಯಾವಾಗಲೂ ಲವಲವಿಕೆಯಿಂದಿರೋ ವ್ಯಕ್ತಿತ್ವ, ಏನೇ ಆದರೂ ಉದ್ವೇಗಕ್ಕೊಳಗಾಗದ ಮನಸ್ಸು, ಶಾಂತತೆಯ ಒಳಗಣ್ಣು ತೆರೆದಿರುವ ವ್ಯಕ್ತಿ. ಇವಿಷ್ಟು ಹೇಳಿದರೆ ನಿಮಗೆ ವಿರಾಟ್ ಕೊಹ್ಲಿ ನೆನಪಾಗಬಹುದು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

50 ಓವರ್‌ಗಳ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಪಾಲ್ಗೊಳ್ಳುತ್ತಿರುವುದು ಇದು 3ನೇ ಸಾರಿ. ಬುಧವಾರ (ಜೂನ್ 5) ಬೆಳಗ್ಗೆ ಏಜಸ್ ಬೌಲ್‌ನಲ್ಲಿ ಟಾಸ್‌ಗಾಗಿ ತೆರಳುವಾಗ ಅವರು ಚೊಚ್ಚಲ ಬಾರಿಗೆ ವಿಶ್ವಕಪ್‌ ನಲ್ಲಿ ಟೀಮ್ ಇಂಡಿಯಾದ ಕ್ಯಾಪ್ಟನ್ ಜವಾಬ್ದಾರಿಯಲ್ಲಿದ್ದರು.

1
43651

ಭಾರತದ ನಾಯಕರ ಪಾಲಿಗೆ ತಮ್ಮದೇ ಪರಂಪರೆ ಬರೆಯಲು ವಿಶ್ವಕಪ್ ಒಂದು ಅಪರೂಪದ ಅವಕಾಶ. 1983ರಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿ ದೇಶಕ್ಕೆ ಮೊದಲ ವಿಶ್ವಕಪ್ ಟ್ರೋಫಿ ಗೆದ್ದುಕೊಟ್ಟ ಕೀರ್ತಿ ಕಪಿಲ್ ದೇವ್ ಪಾಲಾಗಿದೆ. ಅನಂತರ ಅದೇ ಸಾಧನೆ ಮೆರೆದ ಎಂಎಸ್ ಧೋನಿ 28 ವರ್ಷಗಳ ಬಳಿಕ ಅಂದರೆ 2011ರಲ್ಲಿ ಮುಂಬೈನಲ್ಲಿ ಮತ್ತದೇ ವಿಶ್ವಕಪ್ ಸಂಭ್ರಮಕ್ಕೆ ಕಾರಣರಾಗಿದ್ದರು. ಈ ಬಾರಿ ದೇಶಕ್ಕೆ ವಿಶ್ವಕಪ್ ಗೆಲುವಿನ ಸಂಭ್ರಮ ತರುವ ಹೊಣೆಗಾರಿಕೆ ಕೊಹ್ಲಿ ಮೇಲಿದೆ.

{headtohead_cricket_3_6}

ಕೆರೆಬಿಯನ್ (2006) ಮತ್ತು ಇಂಗ್ಲೆಂಡ್ (2007) ನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡ ರಾಹುಲ್ ದ್ರಾವಿಡ್, ದುರದೃಷ್ಟವಶಾತ್, 2007ರ ವಿಶ್ವಕಪ್‌ನಲ್ಲಿ ಗ್ರೂಪ್ ಹಂತದ ಸ್ಪರ್ಧೆಯಲ್ಲೇ ತಂಡ ಹೊರ ಬಿದ್ದಾಗ ಕೆಟ್ಟ ನಾಯಕತ್ವಕ್ಕಾಗಿ ಬಿಂಬಿತರಾದರು. ಆದರೆ ಕೊಹ್ಲಿ ನಾಯಕತ್ವದ ಬಗ್ಗೆ ದೇಸಿಗರಿಗೆ ಹೆಚ್ಚಿನ ಭರವಸೆಯಿದೆ. ತಂಡವೂ ಈ ಸಾರಿ ಟ್ರೋಫಿ ಗೆಲ್ಲುವ ವಿಶ್ವಾಸ ಮೂಡಿಸಿದೆ.

ಈ ಬಾರಿಯ ವಿಶ್ವಕಪ್ ಗೆದ್ದುಕೊಡುವ ವಿಶ್ವಾಸವನ್ನು ಕೊಹ್ಲಿ ಮೂಡಿಸಿದ್ದಾರೆ ನಿಜ. ಹಾಗಂತ ಟ್ರೋಫಿ ಗೆಲ್ಲದಿದ್ದರೆ ಕೊಹ್ಲಿ ಕೂಡ ಕೆಟ್ಟ ಇತಿಹಾಸಕ್ಕೆ ನೆಪವಾಗಬಲ್ಲರು. ಟೆಸ್ಟ್ ಮತ್ತು ಏಕದಿನ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿಯ ನಾಯಕತ್ವದ ಮೇಲೆ ಸಹಜವಾಗೇ ನಿರೀಕ್ಷೆ ಹೆಚ್ಚಿದೆ. ಅಲ್ಲದೆ ಆಸ್ಟ್ರೇಲಿಯಾದದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಕೊಹ್ಲಿ ಬಳಗ ಇತಿಹಾಸ ನಿರ್ಮಿಸಿದ್ದೂ ಈ ಬಾರಿಯ ವಿಶ್ವಕಪ್‌ನಲ್ಲಿ ತಂಡದ ಬಗೆಗಿನ ನಿರೀಕ್ಷೆ ಹೆಚ್ಚಲು ಮತ್ತೊಂದು ಕಾರಣ.

ಈ ಮೊದಲು ವಿಶ್ವಕಪ್‌ನಲ್ಲಿ ಕೇವಲ 5 ಮಂದಿ ನಾಯಕರು ಮುನ್ನಡೆಸಿದ್ದ ಭಾರತದ ತಂಡಕ್ಕೆ ಕೊಹ್ಲಿ 6ನೇ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಈ ಬಗ್ಗೆ ಮಂಗಳವಾರ (ಜೂನ್ 4) ಮಾತನಾಡಿದ ಕೊಹ್ಲಿ, '2015ರ ವಿಶ್ವಕಪ್‌ನಲ್ಲಿ ನಾನು ಆಡುವಾಗ ಇಂಥದ್ದೊಂದು ಅವಕಾಶ ನನ್ನ ಪಾಲಿಗೆ ಬರುವುದನ್ನು ಭಾವಿಸಿರಲಿಲ್ಲ. ಈ ದಿನವಿದೆಯಲ್ಲ? ಇದು ಕೊನೆವರೆಗೂ ನೆನಪಿನಲ್ಲಿ ಉಳಿಯುವ ದಿನವಾಗಲಿದೆ, ಖುಷಿಯ ಕ್ಷಣವಾಗಲಿದೆ' ಎಂದರು.

ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಬಳಗ ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟೂರ್ನಿಯ ಆರಂಭಿಕ ಪಂದ್ಯವನ್ನಾಡುತ್ತಿದೆ. ಮೊದಲ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿದ್ದರಿಂದ ದಕ್ಷಿಣ ಆಫ್ರಿಕಾ ಒತ್ತಡದಲ್ಲಿದೆ. ಹೀಗಾಗಿ ಆಫ್ರಿಕಾಕ್ಕೆ ಭಾರತ ವಿರುದ್ಧದ ಪಂದ್ಯವನ್ನು ಗೆದ್ದುಕೊಳ್ಳಲೇಬೇಕು.

ಇತ್ತ ಕೊಹ್ಲಿ ಬಳಗಕ್ಕೆ ವಿಶ್ವಕಪ್ ಆರಂಭಿಕ ಪಂದ್ಯವಾಗಿದ್ದರಿಂದ ಫಾ ಡು ಪ್ಲೆಸಿಸ್ ಪಡೆಯ ವಿರುದ್ಧ ಜೂನ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಅರಂಭ ಅನಿವಾರ್ಯವಾಗಿದೆ. ಯಾಕೆಂದರೆ ತನ್ನದೇ ಪರಂಪರೆಯ ಹುಡುಕಾಟದಲ್ಲಿರುವ ಕೊಹ್ಲಿ ಈ ಗೆಲುವು, ಪರಂಪರೆ ನಿರ್ಮಾಣ ಹಾದಿಯ ಮೊದಲ ಹೆಜ್ಜೆಯಾಗಲಿದೆ.

(ಸುಮಾರು 20 ವರ್ಷಗಳಿಂದಲೂ ಕ್ರಿಕೆಟ್ ಬರವಣಿಗಾಗಿ ಗುರುತಿಸಿಕೊಂಡಿರುವ ಆರ್ ಕೌಶಿಕ್ ಅವರು ಲಂಡನ್‌ನಲ್ಲಿದ್ದು, ಇದು 7ನೇ ಬಾರಿಗೆ ವಿಶ್ವಕಪ್ ಟೂರ್ನಿ ಕವರ್ ಮಾಡುತ್ತಿದ್ದಾರೆ, ಮೈಖೇಲ್‌ಗಾಗಿ ವಿಶೇಷ ಲೇಖನಗಳನ್ನು ಬರೆಯುತ್ತಿದ್ದಾರೆ)

Story first published: Wednesday, June 5, 2019, 9:38 [IST]
Other articles published on Jun 5, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+