Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC World cup 2023: ಈ 12 ತಾಣಗಳಲ್ಲಿ ವಿಶ್ವಕಪ್; ಎರಡು ಪ್ರಮುಖ ತಾಣಗಳಿಗಿಲ್ಲ ಆತಿಥ್ಯದ ಅವಕಾಶ!

ಈ ವರ್ಷ ಏಕದಿನ ವಿಶ್ವಕಪ್ ಆಯೋಜನೆಗೆ ಭಾರತ ಸಿದ್ಧವಾಗುತ್ತಿದ್ದು ಅಕ್ಟೋಬರ್ 5ರಿಂದ ಪ್ರತಿಷ್ಠಿತ ಟೂರ್ನಿ ಆರಂಭವಾಗುವ ಸಾಧ್ಯತೆಯಿದೆ. ಎರಡು ತಿಂಗಳ ಕಾಲ ನಡೆಯಲಿರುವ ಈ ಮಹತ್ವದ ಟೂರ್ನಿಯಲ್ಲಿ 10 ತಂಡಗಳು ಭಾಗಿಯಾಗಲಿದ್ದು ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿದೆ. ಇದೀಗ ಈ ಟೂರ್ನಿ ನಡೆಯುವ ತಾಣಗಳ ಮಾಹಿತಿ ಬಹಿರಂಗವಾಗಿದ್ದು 12 ತಾಣಗಳಲ್ಲಿ ವಿಶ್ವಕಪ್ ಟೂರ್ನಿಯ ಪಂದ್ಯಗಳು ನಡೆಯಲಿದೆ.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು ಅಹ್ಮದಾಬಾದ್‌ನಲ್ಲಿ ಈ ಪಂದ್ಯ ಆಯೋಜನಯಾಗಲಿದೆ. ನವೆಂಬರ್ 19ರಂದು ಟೂರ್ನಿಯ ಫೈನಲ್ ಪಂದ್ಯ ನಡೆಯಲಿದ್ದು ಈ ಪಂದ್ಯಕ್ಕೂ ಅಹ್ಮದಾಬಾದ್‌ನ ನರೇಂದ್ರ ಮೊದಿ ಕ್ರೀಡಾಂಗಣ ಆತಿಥ್ಯವಹಿಸುವ ಸಾಧ್ಯತೆಯಿದೆ. ಕ್ರಿಕ್ ಬಜ್ ವರದಿಯ ಪ್ರಕಾರ ವಿಶ್ವಕಪ್ ಟೂರ್ನಿಗೆ ಈಗಾಗಲೇ ತಾಣಗಳು ಅಂತಿಮವಾಗಿದೆ. ಆದರೆ ಬಿಸಿಸಿಐ ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

ICC World Cup 2023: 12 cities will host world cup matches: Two Major cities not in the list!

ವಿಶ್ವಕಪ್ ಟೂರ್ನಿ ನಡೆಯುವ ತಾಣಗಳು

ವರದಿಯ ಪ್ರಕಾರ ಈ ಬಾರಿಯ ಏಕದಿನ ವಿಶ್ವಕಪ್ ಭಾರತದ 12 ತಾಣಗಳಲ್ಲಿ ಆಯೋಜನೆಯಾಗಲಿದೆ. ಅವುಗಳೆಂದರೆ ಅಹ್ಮದಾಬಾದ್, ಕೊಲ್ಕತ್ತಾ, ಹೈದರಾಬಾದ್, ಚೆನ್ನೈ, ಬೆಂಗಳೂರು, ಇಂದೋರ್, ಧರ್ಮಶಾಲಾ, ಗುವಾಹಟಿ, ರಾಯ್‌ಪುರ್ ಹಾಗೂ ರಾಜ್‌ಕೋಟ್‌ನಲ್ಲಿ ಈ ಪಂದ್ಯಗಳು ಆಯೋಜನೆಯಾಗಲಿದೆ. ಇವುಗಳ ಪೈಕಿ ಕೇವಲ 6 ತಾಣಗಳು (ಕೊಲ್ಕತ್ತಾ, ಅಹ್ಮದಾಬಾದ್,ಮುಂಬೈ, ದೆಹಲಿ, ಚೆನ್ನೈ ಮತ್ತು ಬೆಂಗಳೂರು) ಮಾತ್ರವೇ ಈ ಹಿಂದೆ 2011ರಲ್ಲಿ ಭಾರತದಲ್ಲಿ ವಿಶ್ವಕಪ್ ಟೂರ್ನಿ ನಡೆದಿದ್ದಾಗ ವಿಶ್ವಕಪ್ ಪಂದ್ಯಗಳ ಆತಿಥ್ಯ ವಹಿಸಿತ್ತು.

ವಿಶ್ವಕಪ್ ಟೂರ್ನಿ ನಡೆಯುವ ಸ್ಟೇಡಿಯಂಗಳು

ಈ ಬಾರಿಯ ವಿಶ್ವಕಪ್‌ ಆಯೋಜನೆಯಾಗುವ ಕ್ರೀಡಾಂಗಣಗಳ ಮಾಹಿತಿ:
ವಾಂಖೆಡೆ ಸ್ಟೇಡಿಯಂ (ಮುಂಬೈ), ಈಡನ್ ಗಾರ್ಡನ್ಸ್ (ಕೋಲ್ಕತ್ತಾ), ಅರುಣ್ ಜೇಟ್ಲಿ ಕ್ರೀಡಾಂಗಣ (ದೆಹಲಿ), ಎಂಎ ಚಿದಂಬರಂ ಕ್ರೀಡಾಂಗಣ (ಚೆನ್ನೈ), ಎಂ ಚಿನ್ನಸ್ವಾಮಿ ಕ್ರೀಡಾಂಗಣ (ಬೆಂಗಳೂರು), ನರೇಂದ್ರ ಮೋದಿ ಕ್ರೀಡಾಂಗಣ (ಅಹ್ಮದಾಬಾದ್), ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ (ಹೈದರಾಬಾದ್), ಬರ್ಸಾಪರಾ ಕ್ರೀಡಾಂಗಣ (ಗುವಾಹಟಿ), ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣ (ರಾಯಪುರ), ಹೋಲ್ಕರ್ ಕ್ರೀಡಾಂಗಣ (ಇಂಧೋರ್), SPCA ಕ್ರೀಡಾಂಗಣ (ಧರ್ಮಶಾಲಾ) ಮತ್ತು SCA ಕ್ರೀಡಾಂಗಣ (ರಾಜ್‌ಕೋಟ್).

ಮೊಹಾಲಿ, ನಾಗ್ಪುರಕ್ಕಿಲ್ಲ ವಿಶ್ವಕಪ್ ಆತಿಥ್ಯ

ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಎರಡು ಪ್ರಮುಖ ನಗರಗಳು ವಿಶ್ವಕಪ್ ಆತಿಥ್ಯವಹಿಸುವ ತಾಣಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅವುಗಳೆಂದರೆ ಮೊಹಾಲಿ ಹಾಗೂ ನಾಗ್ಪುರ. 2011ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಆಯೋಜನೆಯಾಗಿದ್ದಾಗ ಈ ಎರಡು ಕ್ರೀಡಾಂಗಣಗಳು ಆತಿಥ್ಯವಹಿಸಿಕೊಂಡಿದ್ದವು. ಆದರೆ ಈ ಬಾರಿ ಆ ಅವಕಾಶದಿಂದ ವಂಚಿತವಾಗಿದೆ.
ಇನ್ನು ಗ್ರೂಪ್ ಹಂತದಲ್ಲಿ ಭಾರತ 9 ಪಂದ್ಯಗಳನ್ನು ಆಡಲಿದ್ದು 12 ಕ್ರೀಡಾಂಗಣಗಳ ಪೈಕಿ ಬಹುತೇಕ ಎಲ್ಲಾ ಕ್ರೀಡಾಂಗಣದಲ್ಲಿಯೂ ಒಂದೊಂದು ಪಂದ್ಯಗಳು ಆಯೋಜನೆಯಾಗುವ ನಿರೀಕ್ಷೆಯಿದೆ.

4 ತಾಣಗಳಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು

ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಯಾವೆಲ್ಲಾ ಕ್ರೀಡಾಂಗಣದಲ್ಲಿ ಆಡಲಿದೆ ಎಂಬುದು ಕೂಡ ಕುತೂಹಲಕಾರಿ ಅಂಶ. ಬಿಸಿಸಿಐ ಪಾಕಿಸ್ತಾನ ತಂಡದ ಪಂದ್ಯಗಳನ್ನು ನಾಲ್ಕು ತಾಣಗಳಲ್ಲಿ ಆಯೋಜನೆ ಮಾಡಲು ಸಿದ್ಧತೆ ನಡೆಸಿದೆ. ಅಹ್ಮದಾಬಾದ್, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಪಾಕಿಸ್ತಾನದ ಗ್ರೂಪ್ ಹಂತದ ಪಂದ್ಯಗಳು ನಡೆಯಲಿದೆ.

Story first published: Wednesday, May 10, 2023, 16:19 [IST]
Other articles published on May 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+