ICC World Cup 2023: ಇವರೇ, ವಿಶ್ವಕಪ್ ನಲ್ಲಿ ಎಲ್ಲರ ಚಿತ್ತ ಕದ್ದ ಸ್ಪಿನ್ ಮಾಂತ್ರಿಕರು
ವಿಶ್ವಕಪ್ ರಂಗು ವಿಶ್ವವ್ಯಾಪಿ ಪಸರಿಸಿದೆ, ಭಾರತದಲ್ಲಿ ಈ ಬಾರಿ ಏಕದಿನ ವಿಶ್ವಕಪ್ ನಡೆಯುತ್ತಿದ್ದು, ಹಲವರ ಮೇಲೆ ಕಣ್ಣು ನೆಟ್ಟಿದೆ. ಸಹಜವಾಗಿ ಭಾರತದಲ್ಲಿ ಬ್ಯಾಟರ್ ಗಳ ಅಬ್ಬರ ಜೋರಾಗಿಯೇ ಇರುತ್ತದೆ. ಅಂತೆಯೇ ಸ್ಪಿನ್ ಬೌಲರ್ಸ್‌ಗಳು ತಮ್ಮ ಪಿರ್ಕಿ ಕಮಾಲ್ ತೋರಿಸಲು ಸಜ್ಜಾಗಿದ್ದಾರೆ. ಈ ಬಾರಿಯ ವಿಶ್ವಕಪ್ ನಲ್ಲಿ ತಮ್ಮ ಛಾಪು ಮೂಡಿಸಲು ಕಾತುರರಾಗಿರುವ ಬೌಲರ್ಸ್ ಗಳ ಪರಿಚಯ ಇಲ್ಲಿದೆ.
ODI ವರ್ಲ್ಡ್ ಕಪ್ 2023 ರಲ್ಲಿ ಸ್ಪಿನ್ ಬೌಲರ್‌ಗಳ ಮೇಲೆ ಪ್ರತಿಯೊಬ್ಬರೂ ವಿಶೇಷ ಕಣ್ಣು ನೆಟ್ಟಿದ್ದಾರೆ. ಭಾರತದ ಪಿಚ್‌ಗಳು ಯಾವಾಗಲೂ ಸ್ಪಿನ್ನರ್‌ಗಳಿಗೆ ಸಹಾಯಕ. ಈ ಬಾರಿಯೂ ಭಾರತದ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳು ಅಬ್ಬರಿಸುವ ಸಾಧ್ಯತೆ ಹೆಚ್ಚಿದೆ.

ಈ ವಿಶ್ವಕಪ್‌ನಲ್ಲಿ ಅನೇಕ ಬ್ಯಾಟರ್ ಗಳಿಗೆ ಕಾಟ ನೀಡಲು ಇವರು ತಾಲೀಮು ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಕಾಣಿಸಿಕೊಳ್ಳುವ ಸ್ಪಿನ್ ಬೌಲರ್ ಗಳಲ್ಲಿ ಭಾರತದವರಿಗೂ ಸ್ಥಾನ ಇದೆ.
1: ಕುಲದೀಪ್ ಯಾದವ್
ವಿಶ್ವಕಪ್‌ಗೂ ಮುನ್ನ ಕುಲದೀಪ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗಷ್ಟೇ ನಡೆದ ಏಷ್ಯಾಕಪ್‌ನಲ್ಲಿ ಕುಲದೀಪ್ ತಮ್ಮ ಸ್ಪಿನ್ ಮೋಡಿಯಿಂದ ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ತೊಂದರೆ ನೀಡಿದ್ದರು.
ಹೀಗಾಗಿ ಭಾರತದಂತಹ ಪಿಚ್ ಗಳಲ್ಲಿ ಕುಲದೀಪ್ ತಮ್ಮ ವಿಶಿಷ್ಠ ಶೈಲಿಯ ಬೌಲಿಂಗ್ ಮೂಲಕ ಬ್ಯಾಟರ್ ಗಳನ್ನು ರಣತಂತ್ರ ಹೆಣೆದುಕೊಂಡಿದ್ದಾರೆ. ಅನ್ ಅರ್ಥಡಾಕ್ಸ್ ಶೈಲಿಯ ಕುಲ್ದೀಪ್ ಬೌಲಿಂಗ್ ನಿಜಕ್ಕೂ ಸ್ಟಾರ್ ಬ್ಯಾಟರ್ ಗಳಿಗೆ ಕಬ್ಬಿಣದ ಕಡಲೆಯ ರೀತಿ ಪರಿಣಮಿಸಿದೆ.
2: ರವಿಚಂದ್ರನ್ ಅಶ್ವಿನ್
ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತದ ಪಿಚ್‌ಗಳ ಮೇಲೆ ಪ್ರಭಾವ ಬೀರುವ ಬೌಲರ್. ಒಂದೊಮ್ಮೆ ಚೆಂಡು ಅಶ್ವಿನ್ ಕೈ ಸೇರಿದರೆ ಸಾಕು, ಬೌಲ್ ಅಶ್ವಿನ್ ಹೇಳಿದ ರೀತಿ ಮಾತು ಕೇಳಲು ಆರಂಭಿಸುತ್ತದೆ.
ಬುಗರಿಯಂತೆ ಆಫ್ ಸ್ಪಿನ್ ನಲ್ಲಿ ಚೆಂಡನ್ನು ತಿರುಗಿಸುವ ಅಶ್ವಿನ್, ಎದುರಾಳಿ ಬ್ಯಾಟರ್ ಗಳಿಗೆ ಸಿಂಹ ಸ್ವಪ್ನ. ಉತ್ತಮ ಸ್ಪಿನ್ ಹೊರತಾಗಿ, ಅಶ್ವಿನ್ ಸ್ಪಿನ್ ನಲ್ಲಿ ಸಾಕಷ್ಟು ವೈವಿಧ್ಯತೆಯನ್ನು ಹೊಂದಿದ್ದಾರೆ. ತವರಿನ ಪಿಚ್ ಗಳಲ್ಲಿ, ಅವರು ಬ್ಯಾಟ್ಸ್‌ಮನ್‌ಗಳಿಗೆ ಅನೇಕ ಸಮಸ್ಯೆಗಳನ್ನು ಸೃಷ್ಟಿಸಬಹುದು.
3: ಆಡಮ್ ಜಂಪಾ
ಆಸ್ಟ್ರೇಲಿಯದ ಲೆಗ್ ಸ್ಪಿನ್ನರ್ ಆಡಮ್ ಜಂಪಾ ವಿಶ್ವಕಪ್‌ನಲ್ಲಿ ಮಿಂಚಬಹುದು. ಜಂಪಾ ವಿಶೇಷವಾಗಿ ಭಾರತಕ್ಕೆ ಸಮಸ್ಯೆಯನ್ನು ತಂದು ಒಡ್ಡಬಹುದು. ವಿರಾಟ್ ಕೊಹ್ಲಿ ವಿರುದ್ಧ ಜಂಪಾ ಅವರ ದಾಖಲೆಯು ಅತ್ಯುತ್ತಮವಾಗಿದೆ. ಭಾರತದ ಪಿಚ್‌ಗಳಲ್ಲಿ ಜಂಪಾ ಅವರನ್ನು ಆಡುವುದು ಸುಲಭವಲ್ಲ.
4: ಆದಿಲ್ ರಶೀದ್
ಇಂಗ್ಲೆಂಡ್ ನ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಭಿನ್ನ ಎಸೆತಗಳಿಗೆ ಹೆಸರುವಾಸಿ. ಆಂಗ್ಲರ ಸ್ಪಿನ್ನರ್‌ಗೆ ಭಾರತದ ಪರಿಸ್ಥಿತಿಗಳಲ್ಲಿ ಆಡುವುದು ಸುಲಭ. ರಶೀದ್ ಐಪಿಎಲ್ ನಲ್ಲಿ ಆಡಿರುವುದರಿಂದ ಇಲ್ಲಿನ ಪಿಚ್ ಗಳ ಮರ್ಮ ತಿಳಿದಿದೆ.
5: ದುನಿತ್ ವೆಲ್ಲಲಾಗೆ
ಶ್ರೀಲಂಕಾದ ಯುವ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದಂತಹ ಬಲಿಷ್ಠ ತಂಡಗಳ ಸ್ಟಾರ್ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ಸ್ಪಿನ್ ಮೂಲಕ ಕಟ್ಟಿ ಹಾಕಿದ್ದರು. ಬಹುತೇಕ ಎಲ್ಲಾ ಬ್ಯಾಟ್ಸ್‌ಮನ್‌ಗಳು ವೆಲ್ಲಲಾಗೆ ಎದುರು ಏಷ್ಯಾ ಕಪ್ ನಲ್ಲಿ ವಿಫಲರಾಗಿದ್ದರು. ಅವರನ್ನು ಭಾರತದ ಪಿಚ್‌ಗಳಲ್ಲಿ ಆಡುವುದು ಇನ್ನಷ್ಟು ಕಷ್ಟಕರವಾಗಬಹುದು.
6: ಮಿಚೆಲ್ ಸ್ಯಾಂಟ್ನರ್
ನ್ಯೂಜಿಲೆಂಡ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಭಾರತದಲ್ಲಿ ಮಿಂಚಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ನ್ಯೂಜಿಲೆಂಡ್ ಪರ ಎಲ್ಲಾ ಮೂರು ಸ್ವರೂಪಗಳನ್ನು ಆಡಿದ ಸ್ಪಿನ್ನರ್‌ಗಳಲ್ಲಿ ಸ್ಯಾಂಟ್ನರ್ ಕೂಡ ಒಬ್ಬರು. 2023 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ನ ಪ್ರಮುಖ ಅಸ್ತ್ರ ಎಂದು ಅವರು ಬಿಂಬಿತರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications