For Quick Alerts
ALLOW NOTIFICATIONS  
For Daily Alerts
 

World Cup 2023: ಸ್ಕಾಟ್ ಎಡ್ವರ್ಡ್ಸ್ ನಾಯಕನ ಆಟ; ಬಾಂಗ್ಲಾದೇಶ ತಂಡಕ್ಕೆ ಸಾಧಾರಣ ಗುರಿ ನೀಡಿದ ನೆದರ್ಲ್ಯಾಂಡ್ಸ್

ಶನಿವಾರ, ಅಕ್ಟೋಬರ್ 28ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 28ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ನೆದರ್ಲ್ಯಾಂಡ್ಸ್ ಸಾಧಾರಣ ಮೊತ್ತ ಕಲೆಹಾಕಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ಸ್ ತಂಡ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರ ನಿರ್ಣಾಯಕ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 229 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಬಾಂಗ್ಲಾದೇಶ ತಂಡಕ್ಕೆ 230 ರನ್‌ಗಳ ಸುಲಭ ಗುರಿ ನೀಡಿದೆ.

icc-world-cup-2023

ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ವಿಕ್ರಮಜಿತ್ ಸಿಂಗ್ ಮತ್ತು ಮ್ಯಾಕ್ಸ್ ಓ'ಡೌಡ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ತಂಡದ ಮೊತ್ತ 4 ರನ್‌ಗಳಾಗಿದ್ದಾಗ ಇಬ್ಬರು ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.

ಈ ವೇಳೆ ಕ್ರೀಸ್‌ಗೆ ಬಂದ ವೆಸ್ಲಿ ಬ್ಯಾರೆಸಿ ಮತ್ತು ಕಾಲಿನ್ ಅಕರ್ಮನ್ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. 33 ಎಸೆತಗಳಲ್ಲಿ 15 ರನ್ ಗಳಿಸಿದ್ದ ಕಾಲಿನ್ ಅಕರ್ಮನ್ ಔಟಾಗಿ ಹೊರನಡೆದರು. ಇನ್ನು ವೆಸ್ಲಿ ಬ್ಯಾರೆಸಿ 41 ಎಸೆತಗಳನ್ನು ಎದುರಿಸಿ 8 ಬೌಂಡರಿಗಳ ಸಮೇತ 41 ರನ್ ಗಳಿಸಿದರು.

ನೆದರ್ಲ್ಯಾಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಕುಸಿದಿದ್ದ ತಂಡಕ್ಕೆ ಆಸರೆಯಾದರು ಮತ್ತು 89 ಎಸೆತಗಳಿಂದ 6 ಬೌಂಡರಿ ಮೂಲಕ 68 ರನ್ ಬಾರಿಸಿದರು. ಇನ್ನು ಬಾಸ್ ಡಿ ಲೀಡೆ 32 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ 17 ರನ್ ಗಳಿಸಿದರು.

icc-world-cup-2023

ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್ ನಿಧಾನಗತಿ ಆಟಕ್ಕೆ ಹೋದರು ಮತ್ತು 61 ಎಸೆತಗಳಲ್ಲಿ 3 ಬೌಂಡರಿ ಸಮೇತ 35 ರನ್ ದಾಖಲಿಸಿದರು. ಕೊನೆಯಲ್ಲಿ ಲೋಗನ್ ವ್ಯಾನ್ ಬೀಕ್ ಅಜೇಯ 23 ರನ್, ಶರೀಜ್ ಅಹ್ಮದ್ 6 ರನ್, ಆರ್ಯನ್ ದತ್ 9 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ತಂಡದ ಪರ ಮುಸ್ತಾಫಿಜುರ್ ರೆಹಮಾನ್ 10 ಓವರ್‌ಗಳಲ್ಲಿ 36 ರನ್ ನೀಡಿ 2 ವಿಕೆಟ್ ಪಡೆದರೆ, ಶೋರಿಫುಲ್ ಇಸ್ಲಾಂ 10 ಓವರ್‌ಗಳಲ್ಲಿ 51 ರನ್ ನೀಡಿ 2 ವಿಕೆಟ್ ಕಬಳಿಸಿದರು. ತಸ್ಕಿನ್ ಅಹ್ಮದ್ 9 ಓವರ್‌ಗಳಲ್ಲಿ 43 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ಶಕೀಬ್ ಅಲ್ ಹಸನ್ 10 ಓವರ್‌ಗಳಲ್ಲಿ 37 ರನ್ ನೀಡಿ 1 ವಿಕೆಟ್ ಮತ್ತು ಮಹೇದಿ ಹಸನ್ 7 ಓವರ್‌ಗಳಲ್ಲಿ 40 ರನ್ ನೀಡಿ 2 ವಿಕೆಟ್ ಪಡೆದರು.

Story first published: Saturday, October 28, 2023, 17:56 [IST]
Other articles published on Oct 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+