World Cup 2023: ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ ತಂಡಕ್ಕೆ ನೆದರ್ಲ್ಯಾಂಡ್ಸ್ ಸವಾಲು; ಟಾಸ್ ವರದಿ, ಆಡುವ 11ರ ಬಳಗ
ಶನಿವಾರ, ಅಕ್ಟೋಬರ್ 28ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 28ನೇ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ತಮ್ಮ ನಿರ್ಣಾಯಕ ಗೆಲುವಿಗಾಗಿ ಸೆಣಸಾಡುತ್ತಿವೆ.
ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾಗಿ ಶಕೀಬ್ ಅಲ್ ಹಸನ್ ನಾಯಕತ್ವದ ಬಾಂಗ್ಲಾದೇಶ ತಂಡ ಮೊದಲು ಬೌಲಿಂಗ್ ಮಾಡಲಿದೆ.

ಅದೃಷ್ಟದ ಗೆಲುವನ್ನು ಬಯಸುತ್ತಿರುವ ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ತಮ್ಮ ಅನಿರೀಕ್ಷಿತ ಸೆಮಿಫೈನಲ್ ಅರ್ಹತೆಯ ಭರವಸೆಯನ್ನು ಜೀವಂತವಾಗಿಡಲು ಕೊನೆಯ ಅವಕಾಶವನ್ನು ಹೊಂದಿವೆ.
ಉಭಯ ತಂಡಗಳು ಆಡಿದ ಐದು ಪಂದ್ಯಗಳಿಂದ ತಲಾ ಒಂದು ಗೆಲುವು ಮಾತ್ರ ಸಾಧಿಸಿವೆ. ಇದು ಆ ತಂಡಗಳ ದುರದೃಷ್ಟವೆಂದೇ ಕರೆಯಬೇಕು. ಬಾಂಗ್ಲಾದೇಶ ತಂಡದ ಅಭಿಯಾನವು ಅಫ್ಘಾನಿಸ್ತಾನ ವಿರುದ್ಧ ಸಮಗ್ರ ಗೆಲುವಿನೊಂದಿಗೆ ಅತ್ಯುತ್ತಮವಾಗಿ ಪ್ರಾರಂಭಿಸಿದ ನಂತರ, ಮುಂದಿನ ಪಂದ್ಯಗಳಲ್ಲಿ ಶೋಚನೀಯವಾಗಿ ಕುಸಿತ ಕಂಡಿದೆ.
ಬಾಂಗ್ಲಾದೇಶ vs ನೆದರ್ಲ್ಯಾಂಡ್ಸ್ ತಂಡಗಳ ಆಡುವ 11ರ ಬಳಗ
ಬಾಂಗ್ಲಾದೇಶ ತಂಡ: ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್(ನಾಯಕ), ಮುಶ್ಫಿಕರ್ ರಹೀಮ್(ವಿಕೆಟ್ ಕೀಪರ್), ಮಹಮ್ಮದುಲ್ಲಾ, ಮೆಹಿದಿ ಹಸನ್ ಮಿರಾಜ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ.
ನೆದರ್ಲ್ಯಾಂಡ್ಸ್ ತಂಡ: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓ'ಡೌಡ್, ವೆಸ್ಲಿ ಬ್ಯಾರೆಸಿ, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್(ನಾಯಕ/ವಿಕೆಟ್ ಕೀಪರ್), ಬಾಸ್ ಡಿ ಲೀಡೆ, ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications