Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಾಖಲೆಯ ವೀಕ್ಷಕರಿಂದ 2023ರ ವಿಶ್ವಕಪ್ ಫೈನಲ್‌ ಪಂದ್ಯ ವೀಕ್ಷಣೆ; ಡಿಜಿಟಲ್‌ ಮಾಧ್ಯಮದಲ್ಲೂ ಹೊಸ ಅಧ್ಯಾಯ!

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇತ್ತಿಚಿಗೆ ಮುಕ್ತಾಯಗೊಂಡ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ತಂಡ ನಿರಾಸೆ ಅನುಭವಿಸಿತು. 2011ರ ಬಳಿಕ ಐಸಿಸಿ ವಿಶ್ವಕಪ್ ಟ್ರೋಫಿ ಎತ್ತುವ ಕನಸು ಮತ್ತೊಮ್ಮೆ ಮುರಿದುಬಿತ್ತು.

ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ರೋಹಿತ್ ಶರ್ಮಾ ಬಾಯ್ಸ್ ಆಸ್ಟ್ರೇಲಿಯಾದ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ವಿಫಲವಾಯಿತು. ಪರಿಣಾಮ ಆಸೀಸ್ ಆರನೇ ಬಾರಿಗೆ ಏಕದಿನ ವಿಶ್ವಕಪ್‌ ತನ್ನ ಮಡಿಲಿಗೆ ಹಾಕಿಕೊಂಡಿತು. ಭಾರತ ಫೈನಲ್‌ ತಲುಪಿದೆ ಎಂದ ಮೇಲೆ ಕೇಳಬೇಕೆ, ಮೈದಾನದಿಂದ ಹಿಡಿದು, ಡಿಜಿಟಲ್‌ ಫ್ಲಾಟ್‌ಫಾರ್ಮ್‌ಗಳಲ್ಲೂ ಭಾರೀ ಸದ್ದು ಮಾಡಿದೆ.

ICC World Cup 2023 Final Match Sets Record Viewership on TV and OTT Platforms

ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯವು ಭಾರತೀಯ ಟಿವಿ ಇತಿಹಾಸದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಪಂದ್ಯ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ. ಈ ಹೈ-ವೋಲ್ಟೇಜ್ ಫೈನಲ್ ಪಂದ್ಯವನ್ನು 30 ಕೋಟಿ ಅಭಿಮಾನಿಗಳು ಟಿವಿಯಲ್ಲಿ ವೀಕ್ಷಿಸಿದ್ದಾರೆ.

ಈ ಬಗ್ಗೆ ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಹಿತಿ ನೀಡಿದ್ದಾರೆ. ಫೈನಲ್ ಪಂದ್ಯವನ್ನು ಟಿವಿಯಲ್ಲಿ ಏಕಕಾಲಕ್ಕೆ 13 ಕೋಟಿ ಜನರು ವೀಕ್ಷಿಸಿದ್ದಾರೆ. ಇದು ಕೂಡ ಹೊಸ ದಾಖಲೆಯಾಗಿದೆ.

ಇನ್ನು ಫೈನಲ್ ಪಂದ್ಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲೂ ದಾಖಲೆ ಸೃಷ್ಟಿಸಿದೆ. ಡಿಸ್ನಿ-ಹಾಟ್‌ಸ್ಟಾರ್‌ನಲ್ಲಿ 5.9 ಕೋಟಿ ಜನರು ಏಕಕಾಲದಲ್ಲಿ ಪಂದ್ಯವನ್ನು ನೋಡಿದ್ದಾರೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಫೈನಲ್ ವೀಕ್ಷಿಸಿದ ಒಟ್ಟು ವೀಕ್ಷಕರ ಸಂಖ್ಯೆ ಇನ್ನೂ ಬಹಿರಂಗಗೊಂಡಿಲ್ಲ.

ICC World Cup 2023 Final Match Sets Record Viewership on TV and OTT Platforms

ಈ ಟೂರ್ನಿಯ ವೀಕ್ಷಿಸಿದ ಒಟ್ಟಾರೆ ವೀಕ್ಷಕರ ಸಂಖ್ಯೆ 52 ಕೋಟಿ ಆಗಿದೆ. ಪಂದ್ಯಾವಳಿಯ ಬಳಕೆ (ಸಮಯ) 422 ಶತಕೋಟಿ ನಿಮಿಷ ಪಂದ್ಯವನ್ನು ಅಭಿಮಾನಿಗಳು ನೋಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಯಾವುದೇ ವಿಶ್ವಕಪ್‌ನಲ್ಲಿ ಬಳಕೆದಾರರ ಬಳಕೆಯಲ್ಲಿ ಅತಿ ದೊಡ್ಡ ಅಂಕಿ ಅಂಶವಾಗಿದೆ.

ಭಾರತೀಯ ದೂರದರ್ಶನದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್ 50 ಕೋಟಿಗೂ ಹೆಚ್ಚು ವೀಕ್ಷಕರನ್ನು ಸೆಳೆದಿದೆ. ಒಟ್ಟು 518 ಮಿಲಿಯನ್ (51.8 ಕೋಟಿ) ಜನ ಈ ಪಂದ್ಯ ವೀಕ್ಷಿಸಿದ್ದಾರೆ. 12 ವರ್ಷಗಳ ನಂತರ ಭಾರತ ವಿಶ್ವಕಪ್‌ಗೆ ಆತಿಥ್ಯ ವಹಿಸಿತ್ತು.

ಇನ್ನು ಲೀಗ್‌ ಹಂತದ ಅಂಕಿ ಅಂಶ ನೋಡಿದರೆ, ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯವನ್ನು 7.5 ಕೋಟಿ ಜನರು ಏಕಕಾಲಕ್ಕೆ ವೀಕ್ಷಿಸಿದ್ದಾರೆ. ಫೈನಲ್‌ನಲ್ಲಿ ವೀಕ್ಷಕರ ಒಂದೇ ಬಾರಿಗೆ ನೋಡಿದ ಸಂಖ್ಯೆಯಲ್ಲೂ ಏರಿಕೆ ಆಗಿದೆ. ಒಂದು ಬಾರಿ ಅತಿ ಹೆಚ್ಚು ಅಂದರೆ 5.9 ಕೋಟಿ ಜನ ವೀಕ್ಷಿಸಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಜನ ಮೈದಾನಕ್ಕೆ ಬಂದು ವೀಕ್ಷಿಸಿದ ಹಿರಿಮೆಯೂ ಭಾರತದಲ್ಲಿ ನಡೆದ 2023ರ ವಿಶ್ವಕಪ್ ಪಂದ್ಯಾವಳಿಗೆ ಸಂದಿದೆ. ಪ್ರಸಕ್ತ ವಿಶ್ವಕಪ್‌ ಟೂರ್ನಿಯನ್ನು 12,50,307 ಜನ ಮೈದಾನದಲ್ಲಿ ವೀಕ್ಷಿಸಿದ್ದಾರೆ. ಉಳಿದಂತೆ 2015ರಲ್ಲಿ 10,16,420 ಪ್ರೇಕ್ಷಕರು ವೀಕ್ಷಿಸಿದ್ದರೆ, 2019ರ ವಿಶ್ವಕಪ್‌ ಅನ್ನು 7,50,000 ಜನ ಮೈದಾನಗಳಿಗೆ ಬಂದು ವೀಕ್ಷಿಸಿದ್ದರು.

Story first published: Friday, November 24, 2023, 16:54 [IST]
Other articles published on Nov 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+