For Quick Alerts
ALLOW NOTIFICATIONS  
For Daily Alerts
 

CWC 2023: ಕಳಪೆ ಪ್ರದರ್ಶನದಿಂದ ತಮ್ಮ ತಂಡಕ್ಕೆ ಭಾರವಾಗುತ್ತಿರುವ ಐವರು ಸ್ಟಾರ್ ಆಟಗಾರರು ಇವರೇ..

By ನಾಗೇಶ್

ಭಾರತದಲ್ಲಿ ವಿಶ್ವಕಪ್ ಕ್ರೀಡಾಕೂಟ ಸಾಗುತ್ತಿದೆ, ಹಲವು ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ. ಆದರೆ ಕೆಲವು ಆಟಗಾರರು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಹುಸಿಯಾಗಿಸಿದ್ದಾರೆ. ಈ ಮೂಲಕ ಮೈದಾನದಲ್ಲಿ ಭರ್ಜರಿ ಆಟವನ್ನು ಆಡದೆ ತಂಡಕ್ಕೆ ಭಾರವಾದಂತೆ ಕಾಣಿಸಿ ಕೊಳ್ಳುತ್ತಿದ್ದಾರೆ.

ಈ ಸ್ಟಾರ್ ಆಟಗಾರರು ಮೈದಾನಕ್ಕೆ ಇಳಿದರೆ ಎದುರಾಳಿಗಳಿಗೆ ನಡುಕ ಆಗುತ್ತಿತ್ತು. ಆದರೆ ಈಗ ಈ ಆಟಗಾರರು ತಮ್ಮದೇ ತಂಡಕ್ಕೆ ಮುಳುವಾದಂತೆ ಕಾಣಿಸುಕೊಳ್ಳುತ್ತಿದ್ದಾರೆ. ಈ ಸ್ಟಾರ್ ಆಟಗಾರರ ಆಟ ಭಾರತದಲ್ಲಿ ನಡೆಯುತ್ತಿಲ್ಲ ಎಂಬುದೇ ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸಿದೆ. ಈ ಪಟ್ಟಿಯಲ್ಲಿ ಬಲಾಢ್ಯ ತಂಡದ ಆಟಗಾರರು ಇದ್ದಾರೆ.

ICC World Cup 2023: Five Star Players Performance Not Upto The Mark In The Tournament

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮೊದಲ ಹೆಸರು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್.. ಪಾಕ್ ತಂಡ ವಿಶ್ವಕಪ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಇದರ ಹಿಂದಿನ ಬಹು ಮುಖ್ಯ ಕಾರಣ ಬಾಬರ್..

ಮೊದಲ ಸ್ಥಾನ ಹೊಂದಿರುವ ಬಾಬರ್ ಅಜಂ

ಐಸಿಸಿ ಏಕದಿನ ಬ್ಯಾಟರ್ ಗಳ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಹೊಂದಿರುವ ಬಾಬರ್ ರನ್ ಕಲೆ ಹಾಕಲು ಪರದಾಟ ನಡೆಸಿದ್ದಾರೆ. ಈ ಮೂಲಕ ತಮ್ಮದೇ ತಂಡಕ್ಕೆ ಹೊರೆಯಾಗಿದ್ದಾರೆ. ವಿಶ್ವಕಪ್ ನಲ್ಲಿ ಇವರ ಬ್ಯಾಟ್ ಮೌನಕ್ಕೆ ಶರಣಾಗಿರೋದು ತಂಡದ ಚಿಂತೆ ಹೆಚ್ಚಿಸಿದೆ. ವಿಶ್ವಕಪ್ ನಲ್ಲಿ ಬಾಬರ್ ಆಡಿದ 3 ಪಂದ್ಯಗಳಲ್ಲಿ 65 ರನ್ ಕಲೆ ಹಾಕಿದ್ದಾರೆ.

1
1-2023

ಪಾಕ್ ನ ಇಮಾಮ್ ಉಲ್ ಹಕ್

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮತ್ತೊಂದು ಹೆಸರು ಪಾಕ್ ನ ಇಮಾಮ್ ಉಲ್ ಹಕ್.. ಆರಂಭಿಕ ಆಟಗಾರ ಇಮಾಮ್ ರನ್ ಬರ ಅನುಭವಿಸುತ್ತಿದ್ದಾರೆ. ಇವರು ಆಡಿದ 3 ಪಂದ್ಯಗಳಲ್ಲಿ 61 ರನ್ ಕಲೆ ಹಾಕಿದ್ದು ತಂಡದ ಚಿಂತೆಯನ್ನು ಹೆಚ್ಚಿಸಿದ್ದಾರೆ. ಉತ್ತಮ ಓಪನಿಂಗ್ ಸಿಗದೇ ಇರುವುದು ತಂಡಕ್ಕೆ ದೊಡ್ದ ಚಿಂತೆಯಾಗಿದೆ.

ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್

ರನ್ ಕಲೆ ಹಾಕದ ಆಟಗಾರರಲ್ಲಿ ಎದ್ದು ಕಾಣುವ ಇನ್ನೊಂದು ಹೆಸರು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್.. ವಿಶ್ವದ ಸ್ಟಾರ್ ಆಟಗಾರರಲ್ಲಿ ಪರಿಗಣಿಸಲ್ಪಡುವ ಸ್ಮಿತ್ ಭಾರತದಲ್ಲಿ ಮಕಾಡೆ ಮಲಗಿದ್ದಾರೆ. ತಂಡದ ಅನುಭವಿ ಆಟಗಾರನ ಪ್ರದರ್ಶನ ಕಾಂಗರೋ ಪಡೆಯ ಚಿಂತೆಯನ್ನು ದ್ವಿಗುಣಗೊಳಿಸಿದೆ. ವಿಶ್ವಕಪ್ ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 21ರ ಸರಾಸರಿಯಲ್ಲಿ 61 ರನ್ ಗಳಿಸಿದ್ದಾರೆ. ಅವರ ಈ ಪ್ರದರ್ಶನ ನಿಜಕ್ಕೂ ಆಸೀಸ್ ಗೆ ನುಂಗಲಾಗದ ತುತ್ತಾಗಿದೆ.

ಅಟ್ಯಾಕ್ ಕಿಂಗ್ ಬ್ಯಾಟ್ಸಮನ್ ಇಂಗ್ಲೆಂಡ್ ನ ಲಿವಿಂಗ್ ಸ್ಟೋನ್

ವಿಶ್ವ ಕಪ್ ಗೆಲ್ಲುವ ನೆಚ್ಚಿನ ತಂಡ ಎಂದೇ ಪರಿಗಣಿಸಲ್ಪಡುವ ಇಂಗ್ಲೆಂಡ್, ತಂಡಕ್ಕೂ ಆಟಗಾರರ ಫಾರ್ಮ್ ತಲೆ ನೋವು ತಂದಿದೆ. ಕ್ರಿಕೆಟ್ ಹಾಗೂ ಟಿ-20 ಕ್ರಿಕೆಟ್ ನಲ್ಲಿ ಅಟ್ಯಾಕ್ ಕಿಂಗ್ ಬ್ಯಾಟ್ಸಮನ್ ಎಂದೆ ಕರೆಸಿಕೊಳ್ಳುವ ಇಂಗ್ಲೆಂಡ್ ನ ಲಿವಿಂಗ್ ಸ್ಟೋನ್, ಪ್ರಸಕ್ತ ವಿಶ್ವಕಪ್ ನಲ್ಲಿ ರನ್ ಬರವನ್ನು ಅನುಭವಿಸುತ್ತಿದ್ದಾರೆ. ಇವರು ಆಡಿದ ಮೂರು ಪಂದ್ಯಗಳಲ್ಲಿ 30 ರನ್ ಕಲೆ ಹಾಕಿ ನಿರಾಸೆ ಅನುಭವಿಸಿದ್ದಾರೆ.

ಪಾಕ್ ನ ವೇಗಿ ಶಾಹಿನ್ ಶಾ ಆಫ್ರಿದಿ

ಕಳಪೆ ಆಟಗಾರರ ಪಟ್ಟಿಯಲ್ಲಿ ಎದ್ದು ಕಾಣುವ ಇನ್ನೊಬ್ಬ ಆಟಗಾರ ಪಾಕ್ ನ ವೇಗಿ ಶಾಹಿನ್ ಶಾ ಆಫ್ರಿದಿ.. ತಮ್ಮ ಬಿಗುವಿನ ದಾಳಿಯಿಂದಲೇ ಹೆಸರುವಾಸಿ ಆಗಿರುವ ಇವರು, ವಿಕೆಟ್ ಬೇಟೆಯಲ್ಲಿ ಹಿಂದೆ ಬಿದ್ದಿದ್ದಾರೆ. ಶಾಹಿನ್ ಏಷ್ಯಾ ಕಪ್ ನಲ್ಲೂ ಸ್ಥಿರ ಪ್ರದರ್ಶನವನ್ನು ನೀಡಲು ವಿಫಲರಾಗಿದ್ದರು. ಈಗ ಅದೇ ಕಳಪೆ ಫಾರಂ ಅನ್ನು ಭಾರತದಲ್ಲಿ ಮುಂದುವರಿಸಿದ್ದಾರೆ. ಆಡಿದ ಮೂರು ಪಂಡಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿರುವ ಶಾಹಿನ್, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Story first published: Thursday, October 19, 2023, 8:40 [IST]
Other articles published on Oct 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+