For Quick Alerts
ALLOW NOTIFICATIONS  
For Daily Alerts
 

'ಈ ಬಾರಿ ತಪ್ಪಿಸಿಕೊಂಡರೆ...'; ಸೆಮಿಫೈನಲ್‌ಗೂ ಮುನ್ನ ಭಾರತ ತಂಡಕ್ಕೆ ರವಿಶಾಸ್ತ್ರಿ ಎಚ್ಚರಿಕೆ!

2023ರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ತಂಡವು ಅತ್ಯದ್ಭುತ ಫಾರ್ಮ್‌ನಲ್ಲಿದೆ. ಈವೆರೆಗೆ ಆಡಿದ ಎಂಟು ಪಂದ್ಯಗಳ ನಂತರ ಪಂದ್ಯಾವಳಿಯಲ್ಲಿ ಅಜೇಯವಾಗಿ ಮುನ್ನಗ್ಗುತ್ತಿದೆ.

ಭಾನುವಾರ, ನವೆಂಬರ್ 12ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ 45ನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಎದುರಿಸುತ್ತಿದೆ.

ICC World Cup 2023: Former Cricketer Ravi Shastri Warns the Indian Team Before the Semifinals

ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಎಲ್ಲಾ ಅಂದುಕೊಂಡಂತೆ ನಡೆದರೆ, ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಲು ಕೋಟ್ಯಂತರ ಅಭಿಮಾನಿಗಳ ದಶಕದ ನಿರೀಕ್ಷೆ ಸಾಕಾರಗೊಳ್ಳಲಿದೆ.

ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಹಂತಕ್ಕೂ ಮುಂಚಿತವಾಗಿ, ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಪಂದ್ಯಾವಳಿಯಲ್ಲಿ ಭಾರತ ತಂಡದ ಟ್ರೋಫಿ ಗೆಲ್ಲುವ ಅವಕಾಶಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

2023ರಲ್ಲಿ ವಿಶ್ವಕಪ್ ಗೆಲ್ಲದಿದ್ದರೆ, ನಾಲ್ಕನೇ ವಿಶ್ವಕಪ್‌ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸುವ ಮೊದಲು, ಭಾರತ ಮತ್ತೆ ಮೂರು ವಿಶ್ವಕಪ್ ಕಾಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ICC World Cup 2023: Former Cricketer Ravi Shastri Warns the Indian Team Before the Semifinals

"ಭಾರತ ದೇಶದ ಅಭಿಮಾನಿಗಳ ದೊಡ್ಡ ನಿರೀಕ್ಷೆಯಲ್ಲಿದ್ದಾರೆ. 12 ವರ್ಷಗಳ ಹಿಂದೆ ಭಾರತ ತಂಡ ಕೊನೆಯ ಬಾರಿಗೆ ವಿಶ್ವಕಪ್ ಗೆದ್ದಿದ್ದರು, ತಂಡಕ್ಕೆ ಮತ್ತೊಮ್ಮೆ ಅದನ್ನು ಮಾಡಲು ಅವಕಾಶವಿದೆ. ಭಾರತ ಆಡುತ್ತಿರುವ ರೀತಿಯಲ್ಲಿ ಆಡಿದರೆ, ಇದು ಬಹುಶಃ ಅವರ ಅತ್ಯುತ್ತಮ ಅವಕಾಶವಾಗಿದೆ. ಅವರು ಈ ಬಾರಿ ತಪ್ಪಿಸಿಕೊಂಡರೆ, ಮತ್ತೆ ಟ್ರೋಫಿ ಗೆಲ್ಲಲು ಪ್ರಯತ್ನಿಸುವ ಮೊದಲು ಇನ್ನೂ ಮೂರು ವಿಶ್ವಕಪ್‌ಗಳನ್ನು ಕಾಯಬೇಕಾಗುತ್ತದೆ. ಸದ್ಯ 7-8 ಆಟಗಾರರು ಉತ್ತುಂಗದಲ್ಲಿದ್ದಾರೆ," ಎಂದು ಕ್ಲಬ್ ಪ್ರೈರೀ ಫೈರ್ ಪಾಡ್‌ಕ್ಯಾಸ್ಟ್‌ನಲ್ಲಿ ರವಿಶಾಸ್ತ್ರಿ ಹೇಳಿದರು.

ಕೆಲವು ಆಟಗಾರರಿಗೆ ಕೊನೆಯ ವಿಶ್ವಕಪ್ ಆಗಿರಬಹುದು: ರವಿಶಾಸ್ತ್ರಿ

ಇದಲ್ಲದೆ, ಈ ಬಾರಿಯ ವಿಶ್ವಕಪ್ ಕೆಲವು ಆಟಗಾರರಿಗೆ ಹೆಚ್ಚು ನಿರ್ಣಾಯಕವಾಗಿದೆ ಎಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಹೇಳಿದ್ದಾರೆ. ಏಕೆಂದರೆ ಕೆಲವರು ನಿವೃತ್ತಿಯಾಗುವ ಮೊದಲು ಇದು ಅವರ ಕೊನೆಯದ್ದಾಗಿರಬಹುದು.

ಭಾರತ ತಂಡವು ವಿಶ್ವಕಪ್ ಗೆಲ್ಲುವಂತಹ ಆಟಗಾರರನ್ನು ಹೊಂದಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದು, ನಾಕೌಟ್ ಹಂತಗಳಲ್ಲಿ ಟೀಮ್ ಇಂಡಿಯಾ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ ಎಂದರು.

ICC World Cup 2023: Former Cricketer Ravi Shastri Warns the Indian Team Before the Semifinals

"ಇದು ಹಿರಿಯ ಆಟಗಾರರ ಕೊನೆಯ ವಿಶ್ವಕಪ್ ಆಗಿರಬಹುದು. ಅವರು ಆಡುತ್ತಿರುವ ರೀತಿ, ಪರಿಸ್ಥಿತಿಗಳನ್ನು ಗಮನಿಸಿದರೆ, ಅವರು ಕಪ್ ಗೆಲ್ಲಲು ತಂಡವನ್ನು ಪಡೆದಿದ್ದಾರೆ," ಎಂದು ರವಿಶಾಸ್ತ್ರಿ ಹೇಳಿದರು.

ಟೀಮ್ ಇಂಡಿಯಾದ ಬೌಲಿಂಗ್ ದಾಳಿಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಈ ತ್ರಿವಳಿ ವೇಗಿಗಳು ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ಸಂಪೂರ್ಣವಾಗಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದರು.

"ಬೌಲಿಂಗ್ ವಿಭಾಗವು ಅಸಾಧಾರಣವಾಗಿದೆ ಮತ್ತು ಇದು ಸಮಯ ತೆಗೆದುಕೊಂಡಿದೆ, ಇದು ರಾತ್ರೋರಾತ್ರಿ ಸಂಭವಿಸಿಲ್ಲ. ಅವರು ನಾಲ್ಕೈದು ವರ್ಷಗಳಿಂದ ಪ್ರತಿಯೊಬ್ಬರ ಜೊತೆ ಆಟವಾಡುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಮೂರು ವರ್ಷಗಳ ಹಿಂದೆ ತಂಡಕ್ಕೆ ಸೇರಿದರು. ಅವರಿಗೆ ಯಾವ ರೀತಿಯ ಬೌಲ್ ಮಾಡಬೇಕೆಂದು ತಿಳಿದಿದೆ," ಎಂದರು.

"ನೀವು ಬೌಲ್ ಮಾಡುವಾಗ ಮಿನುಗುವಂತೆ ಕಾಣುವುದು ಮುಖ್ಯವಲ್ಲ ಎಂದು ಅವರಿಗೆ ತಿಳಿದಿದೆ. ಇದು ಸ್ಥಿರತೆ ಮತ್ತು ಸರಿಯಾದ ಪ್ರದೇಶಗಳಲ್ಲಿ ಚೆಂಡನ್ನು ಹಾಕುವುದರ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ," ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ತಿಳಿಸಿದರು.

Story first published: Sunday, November 12, 2023, 13:36 [IST]
Other articles published on Nov 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+