ICC World Cup 2023 Schedule: ಕೆಲವೇ ಕ್ಷಣಗಳಲ್ಲಿ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಅಂತಿಮ ವೇಳಾಪಟ್ಟಿ ಪ್ರಕಟ
ಬಹು ನಿರೀಕ್ಷಿತ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಅಂತಿಮ ವೇಳಾಪಟ್ಟಿ ಮಂಗಳವಾರ, ಜೂನ್ 27ರಂದು ಮುಂಬೈನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. 2023ರ ವಿಶ್ವಕಪ್ ಅಧಿಕೃತವಾಗಿ ಅಕ್ಟೋಬರ್ 5ರಂದು ಪ್ರಾರಂಭವಾಗಲಿದ್ದು, ಪಂದ್ಯಾವಳಿಯ ಆರಂಭಕ್ಕೆ ಕೇವಲ 100 ದಿನಗಳು ಮಾತ್ರ ಬಾಕಿ ಉಳಿದಿವೆ.
ಆದರೆ, ಅಂತಿಮ ವೇಳಾಪಟ್ಟಿ ಘೋಷಣೆಗೆ ಕೆಲವೇ ದಿನಗಳ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದ ಕರಡು ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಕ್ರಿಕ್‌ಬಜ್ ವರದಿಯ ಪ್ರಕಾರ, ವಿಶ್ವಕಪ್ 2023ರ ಒಂದು ಸೆಮಿಫೈನಲ್ ಪಂದ್ಯವನ್ನು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದ ಬದಲಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಕಾರಣವೆನೆಂದರೆ, ಅಕ್ಟೋಬರ್-ನವೆಂಬರ್‌ನಲ್ಲಿ ತಮಿಳುನಾಡಿನಲ್ಲಿನ ಹವಾಮಾನ ಪರಿಸ್ಥಿತಿಗಳು. ಆ ಸಮಯದಲ್ಲಿ ಚೆನ್ನೈನಲ್ಲಿ ಈಶಾನ್ಯ ಮಾನ್ಸೂನ್ ಅಪ್ಪಳಿಸುತ್ತವೆ.
ಇದಕ್ಕೂ ಮೊದಲು ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ) ಕೆಲವು ವಿಶ್ವಕಪ್ ಲೀಗ್ ಪಂದ್ಯಗಳನ್ನು ಆಯೋಜಿಸಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂ ಮತ್ತೊಂದು ಸೆಮಿಫೈನಲ್‌ಗೆ ಆತಿಥ್ಯ ವಹಿಸಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಅಕ್ಟೋಬರ್ 5ರ ಉದ್ಘಾಟನಾ ಪಂದ್ಯ ಮತ್ತು ನವೆಂಬರ್ 19ರ ಫೈನಲ್ ಪಂದ್ಯ ಆಯೋಜಿಸಲಿದೆ.
"ಸೋಮವಾರ, ಜೂನ್ 26ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧಿಕಾರಿಗಳೊಂದಿಗೆ ಆತಿಥೇಯ ನಗರಗಳ ರಾಜ್ಯ ಅಸೋಸಿಯೇಷನ್‌ಗಳ ಸಭೆಯಲ್ಲಿ 12 ಅಸೋಸಿಯೇಷನ್‌ಗಳು ಭಾಗವಹಿಸಿದ್ದವು," ಎಂದು ಕ್ರಿಕ್‌ಬಜ್ ವರದಿ ಮಾಡಿದೆ.
2023ರ ವಿಶ್ವಕಪ್ ಪಂದ್ಯಾವಳಿಯಲ್ಲಿ 12 ಸ್ಥಳಗಳು ಅತಿಥ್ಯ ವಹಿಸಲಿವೆ. ಉತ್ತರ ವಲಯದಲ್ಲಿ ನವದೆಹಲಿ ಮತ್ತು ಧರ್ಮಶಾಲಾ ಇದ್ದರೆ, ಮಧ್ಯ ವಲಯದಲ್ಲಿ ಲಕ್ನೋ, ಮುಂಬೈ, ಅಹಮದಾಬಾದ್ ಸ್ಥಳಗಳಿವೆ. ಪಶ್ಚಿಮದಲ್ಲಿ ಪುಣೆ, ಪೂರ್ವದಲ್ಲಿ ಕೋಲ್ಕತ್ತಾ ಮತ್ತು ಗುವಾಹಟಿ ಮತ್ತು ದಕ್ಷಿಣದಲ್ಲಿ ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ತಿರುವನಂತಪುರಂ ಎಂದು ನಿರೀಕ್ಷಿಸಲಾಗಿದೆ.
ಗುವಾಹಟಿ ಮತ್ತು ತಿರುವನಂತಪುರಂ ಕೇವಲ ಅಭ್ಯಾಸ ಪಂದ್ಯಗಳನ್ನು ಆಯೋಜಿಸುತ್ತದೆ. ಆದರೆ ಇತರ 10 ಸ್ಥಳಗಳು ಮೂರು ನಾಕೌಟ್ ಪಂದ್ಯಗಳನ್ನು ಸೇರಿದಂತೆ 48 ಅಧಿಕೃತ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುತ್ತವೆ.
ಇನ್ನು ತಮ್ಮ ಪಂದ್ಯಗಳ ಸ್ಥಳಗಳನ್ನು ಬದಲಾಯಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬೇಡಿಕೆಗಳನ್ನು ಬಿಸಿಸಿಐ ಮತ್ತು ಐಸಿಸಿ ತಿರಸ್ಕರಿಸಿದೆ. ಭಾರತ ಮತ್ತು ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯವು ಅಹಮದಾಬಾದ್‌ನಲ್ಲಿ ನಡೆಯಲಿದೆ. ಇನ್ನು ಚೆನ್ನೈ ಮತ್ತು ಬೆಂಗಳೂರು ಮೈದಾನಗಳು ಕ್ರಮವಾಗಿ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ತಂಡಕ್ಕೆ ಆತಿಥ್ಯ ವಹಿಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications