ಭಾನುವಾರ, ಅಕ್ಟೋಬರ್ 22ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 21ನೇ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಆತಿಥೇಯ ಭಾರತ ತಂಡದ ವಿರುದ್ಧ ಸವಾಲಿನ ಮೊತ್ತ ಕಲೆಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಡೇರಿಲ್ ಮಿಚೆಲ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 273 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತಕ್ಕೆ ಗೆಲ್ಲಲು 274 ರನ್‌ಗಳ ಗುರಿ ನೀಡಿದೆ.
ನ್ಯೂಜಿಲೆಂಡ್‌ನ ಇನ್ನಿಂಗ್ಸ್ ಆರಂಭಿಸಿದ ಡೆವೊನ್ ಕಾನ್ವೇ (0) ಮತ್ತು ವಿಲ್ ಯಂಗ್ (17) ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ತಂಡದ ಮೊತ್ತ 19 ರನ್‌ಗಳಾಗುಷ್ಟರಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ನಂತರ ಜೊತೆಯಾದ ರಚಿನ್ ರವೀಂದ್ರ ಮತ್ತು ಡೇರಿಲ್ ಮಿಚೆಲ್ 3ನೇ ವಿಕೆಟ್‌ಗೆ 159 ರನ್‌ಗಳ ಜೊತೆಯಾಟ ನಿರ್ಮಿಸಿದರು. ಆರಂಭದಲ್ಲಿ ರವೀಂದ್ರ ಜಡೇಜಾ ಅವರು ರಚಿನ್ ರವೀಂದ್ರ ಅವರಿಗೆ ದೊಡ್ಡ ಜೀವದಾನ ನೀಡಿದರು. ಇದಕ್ಕೆ ಭಾರತ ಬೆಲೆ ತೆರಬೇಕಾಯಿತು.
ನಂತರ ಜೊತೆಯಾದ ರಚಿನ್ ರವೀಂದ್ರ ಮತ್ತು ಡೇರಿಲ್ ಮಿಚೆಲ್ 3ನೇ ವಿಕೆಟ್‌ಗೆ 159 ರನ್‌ಗಳ ಜೊತೆಯಾಟ ನಿರ್ಮಿಸಿದರು. ಆರಂಭದಲ್ಲಿ ರವೀಂದ್ರ ಜಡೇಜಾ ಅವರು ರಚಿನ್ ರವೀಂದ್ರ ಅವರಿಗೆ ದೊಡ್ಡ ಜೀವದಾನ ನೀಡಿದರು. ಇದಕ್ಕೆ ಭಾರತ ಬೆಲೆ ತೆರಬೇಕಾಯಿತು.

ರಚಿನ್ ರವೀಂದ್ರ 87 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 1 ಬೌಂಡರಿ ಸಮೇತ 75 ರನ್ ಗಳಿಸಿ ಔಟಾದರೆ, ನಾಯಕ ಟಾಮ್ ಲ್ಯಾಥಮ್ ಕೇವಲ 5 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಗ್ಲೆನ್ ಫಿಲಿಪ್ಸ್ 26 ಎಸೆತಗಳಲ್ಲಿ 1 ಸಿಕ್ಸರ್ ಮೂಲಕ 23 ರನ್ ಗಳಿಸಿದರು.
ಆ ಬಳಿಕ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಡೇರಿಲ್ ಮಿಚೆಲ್ 127 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ ಸಮೇತ 130 ರನ್‌ಗಳ ಶತಕ ಬಾರಿಸಿದರು. ಇದು ಸುಮಾರು 4 ದಶಕಗಳ ಬಳಿಕ ಭಾರತ ವಿರುದ್ಧ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಬ್ಯಾಟರ್‌ನ ಮೊದಲ ಶತಕವಾಗಿದೆ.
ಕೊನೆಯಲ್ಲಿ ನ್ಯೂಜಿಲೆಂಡ್‌ನ ಬ್ಯಾಟರ್‌ಗಳಾದ ಮಾರ್ಕ್ ಚಾಪ್‌ಮನ್ 6 ರನ್, ಮಿಚೆಲ್ ಸ್ಯಾಂಟ್ನರ್ 1 ರನ್, ಲಾಕಿ ಫರ್ಗ್ಯುಸನ್ 1 ರನ್ ಮಾತ್ರ ಗಳಿಸಿದರು.

ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ 10 ಓವರ್‌ಗಳಲ್ಲಿ 54 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಗಮನಾರ್ಹವಾಗಿ, ಇದು ಈ ವಿಶ್ವಕಪ್‌ನಲ್ಲಿ ಮೊದಲ ಪಂದ್ಯವಾಗಿದೆ. ಶಾರ್ದೂಲ್ ಠಾಕೂರ್ ಅವರ ಬದಲಿಗೆ ಅವಕಾಶ ಪಡೆದಿದ್ದಾರೆ.
ಇನ್ನು ಕುಲದೀಪ್ ಯಾದವ್ 10 ಓವರ್‌ಗಳಲ್ಲಿ 73 ರನ್ ನೀಡಿ 2 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ 10 ಓವರ್‌ಗಳಲ್ಲಿ 45 ರನ್ ನೀಡಿ 1 ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ 10 ಓವರ್‌ಗಳಲ್ಲಿ 45 ರನ್ ನೀಡಿ 1 ವಿಕೆಟ್ ಕಬಳಿಸಿದರು.