Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC World Cup 2023: ವಿಶ್ವಕಪ್ ಪಂದ್ಯಾವಳಿ ಆಡುವ 10 ಸ್ಟೇಡಿಯಂ, ಮೈದಾನದ ಸಾಮರ್ಥ್ಯ

ವಿಶ್ವ ಕ್ರಿಕೆಟ್ ಜಗತ್ತಿನ ಮಹಾಸಮರ ಎಂದೇ ಕರೆಯಲ್ಪಡುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಅಕ್ಟೋಬರ್ ಐದರಂದು ಚಾಲನೆ ಸಿಕ್ಕಿದೆ. ಜಗತ್ತಿನ ಅತಿಹೆಚ್ಚು ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಗುಜರಾತಿನ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಮುಕ್ತಾಯಗೊಂಡಿದೆ.

ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯು ಒಟ್ಟು ಭಾರತದ ವಿವಿಧ ಹತ್ತು ನಗರಗಳ ಕ್ರೀಡಾಂಗಣದಲ್ಲಿ ನಡೆಯಲಿದೆ. 46 ದಿನಗಳ ಕಾಲ 48 ಪಂದ್ಯಗಳು ಈ ಅವಧಿಯಲ್ಲಿ ನಡೆಯಲಿದೆ.

icc-world-cup-2023

ತವರಿನಲ್ಲಿ ಪಂದ್ಯಾವಳಿಯು ನಡೆಯುತ್ತಿರುವುದರಿಂದ ಭಾರತ ಕಪ್ ಗೆಲ್ಲುವ ಫೇವರೇಟ್ ಎಂದೇ ಬಿಂಬಿತವಾಗಿದೆ. ವಿಜೇತ ತಂಡಕ್ಕೆ 33.18 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಎರಡು ಬಾರಿಯ ವಿಶ್ವಕಪ್ ವಿಜೇತ ತಂಡವಾದ ವೆಸ್ಟ್ ಇಂಡೀಸ್ ಲೀಗ್ ಹಂತಕ್ಕೆ ತಲುಪುವಲ್ಲಿ ಎಡವಿತ್ತು.

ಕಳೆದ ಮೂರು ಬಾರಿಯ ವಿಶ್ವಕಪ್ ಇತಿಹಾಸವನ್ನು ನೋಡಿದರೆ, ಅತಿಥೇಯರೇ ಟ್ರೋಫಿ ಗೆಲ್ಲುತ್ತಿದ್ದಾರೆ. ಹಾಗಾಗಿ, ಟೀಮ್ ಇಂಡಿಯಾ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ವಿನ್ನರ್ ಆಗಿ ಹೊರಹೊಮ್ಮುತ್ತಾ ಎನ್ನುವ ಕುತೂಹಲ ಭಾರತೀಯರಲ್ಲಿ ಮನೆ ಮಾಡಿದೆ.

ಕ್ರಮ ಸಂಖ್ಯೆ ಸ್ಟೇಡಿಯಂ ಹೆಸರು ನಗರ ರಾಜ್ಯ ಸಾಮರ್ಥ್ಯ
1 ನರೇಂದ್ರ ಮೋದಿ ಸ್ಟೇಡಿಯಂ ಅಹಮದಾಬಾದ್ ಗುಜರಾತ್ 1,32,000
2 ಎಂ. ಚಿನ್ನಸ್ವಾಮಿ ಸ್ಟೇಡಿಯಂ ಬೆಂಗಳೂರು ಕರ್ನಾಟಕ 34,000
3 ಎಂ.ಎ.ಚಿದಂಬರಂ ಸ್ಟೇಡಿಯಂ ಚೆನ್ನೈ ತಮಿಳುನಾಡು 38,000
4 ಅರುಣ್ ಜೇಟ್ಲಿ ಸ್ಟೇಡಿಯಂ ನವದೆಹಲಿ ದೆಹಲಿ 55,000
5 ಎಚ್.ಪಿ.ಸಿ.ಎ ಸ್ಟೇಡಿಯಂ ಧರ್ಮಶಾಲಾ ಹಿಮಾಚಲ ಪ್ರದೇಶ 23,000
6 ಈಡನ್ ಗಾರ್ಡನ್ಸ್ ಸ್ಟೇಡಿಯಂ ಕೋಲ್ಕತ ಪಶ್ಚಿಮ ಬಂಗಾಳ 65,000
7 ಏಕನಾ ಸ್ಟೇಡಿಯಂ ಲಕ್ನೋ ಉತ್ತರ ಪ್ರದೇಶ 50,000
8 ವಾಂಖೇಡೆ ಸ್ಟೇಡಿಯಂ ಮುಂಬೈ ಮಹಾರಾಷ್ಟ್ರ 37,000
9 ಎಂ.ಸಿ.ಎ ಸ್ಟೇಡಿಯಂ ಪುಣೆ ಮಹಾರಾಷ್ಟ್ರ 37,000
10 ರಾಜೀವ್ ಗಾಂಧಿ ಸ್ಟೇಡಿಯಂ ಹೈದರಾಬಾದ್ ತೆಲಂಗಾಣ 55,000

Story first published: Friday, October 6, 2023, 20:24 [IST]
Other articles published on Oct 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+