For Quick Alerts
ALLOW NOTIFICATIONS  
For Daily Alerts
 

World Cup 2023: ಮೀಕೆರೆನ್ ಮಾರಕ ಬೌಲಿಂಗ್; ಬಾಂಗ್ಲಾದೇಶ ವಿರುದ್ಧ ನೆದರ್ಲ್ಯಾಂಡ್ಸ್‌ಗೆ ಭರ್ಜರಿ ಗೆಲುವು

ಶನಿವಾರ, ಅಕ್ಟೋಬರ್ 28ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ2023ರ ಐಸಿಸಿ ಏಕದಿನ ವಿಶ್ವಕಪ್‌ನ 28ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ನೆದರ್ಲ್ಯಾಂಡ್ಸ್ ತಂಡ ಭರ್ಜರಿ ಗೆಲುವು ಸಾಧಿಸಿತು.

ಈ ಮೂಲಕ ಪಂದ್ಯಾವಳಿಯಲ್ಲಿ ಆಡಿದ 6 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿ 4 ಅಂಕಗಳಿಂದ ಅಂಕಪಟ್ಟಿಯಲ್ಲಿ 8ನೇ ಸ್ಥಾನ ಪಡೆದರೆ, ಅಷ್ಟೇ ಪಂದ್ಯಗಳಿಂದ 1 ಗೆಲುವು ಸಾಧಿಸಿ 2 ಅಂಕಗಳಿಂದ ಬಾಂಗ್ಲಾದೇಶ 9ನೇ ಸ್ಥಾನಕ್ಕೆ ಕುಸಿಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ಸ್ ತಂಡ ತಮ್ಮ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 229 ರನ್‌ಗಳಿಗೆ ಆಲೌಟ್ ಆಯಿತು.

ICC World Cup 2023: Netherlands Defeat Bangladesh By 87 Runs In 28th Match

230 ರನ್‌ಗಳ ಸುಲಭ ಗುರಿ ಪಡೆದ ಬಾಂಗ್ಲಾದೇಶ ತಂಡದ ಬ್ಯಾಟರ್‌ಗಳು ನೆದರ್ಲ್ಯಾಂಡ್ಸ್ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ 42.2 ಓವರ್‌ಗಳಲ್ಲಿ ಕೇವಲ 142 ರನ್‌ಗಳಿಗೆ ಸರ್ವಪತನ ಕಂಡಿತು ಮತ್ತು 87 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು.

230 ರನ್‌ಗಳ ಚೇಸಿಂಗ್‌ನಲ್ಲಿ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶದ ಆರಂಭಿಕರಾದ ತಂಝಿದ್ ಹಸನ್ (15) ಮತ್ತ ಲಿಟ್ಟನ್ ದಾಸ್ (3) ಉತ್ತಮ ಆರಂಭ ನೀಡಲು ವಿಫಲರಾದರು. ತಂಡದ ಮೊತ್ತ 19 ರನ್‌ಗಳಾಗಿದ್ದಾಗ ಇಬ್ಬರ ವಿಕೆಟ್‌ಗಳು ಉರುಳಿದವು.

ಆಗ ಕ್ರೀಸ್‌ಗೆ ಬಂದ ಮೆಹಿದಿ ಹಸನ್ ಮಿರಾಜ್ 40 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 35 ರನ್ ಗಳಿಸಿ ಉತ್ತಮ ಆಟವಾಡುತ್ತಿದ್ದಾಗ ವಿಕೆಟ್ ಒಪ್ಪಿಸಿದರೆ, ಇದಕ್ಕೂ ಮುನ್ನ ನಜ್ಮುಲ್ ಹೊಸೈನ್ ಶಾಂಟೊ 9 ರನ್, ನಾಯಕ ಶಕೀಬ್ ಅಲ್ ಹಸನ್ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ICC World Cup 2023: Netherlands Defeat Bangladesh By 87 Runs In 28th Match

ನಂತರ ಬಂದ ಮುಶ್ಫಿಕರ್ ರಹೀಮ್ ಕೇವಲ 1 ರನ್ ಗಳಿಸಿದರೆ, ಮಹಮುದುಲ್ಲಾ 20 ರನ್, ಮೆಹೆದಿ ಹಸನ್ 17 ರನ್, ತಸ್ಕಿನ್ ಅಹ್ಮದ್ 11 ರನ್, ಮುಸ್ತಾಫಿಜುರ್ ರೆಹಮಾನ್ 20 ರನ್ ಗಳಿಸಿದರು. ಆದರೆ ನಿಯಮಿತವಾಗಿ ವಿಕೆಟ್ ಬಿದ್ದಿದ್ದರಿಂದ ನಿಗದಿತ ಗುರಿ ತಲುಪಲು ವಿಫಲರಾದರು.

ಬೌಲಿಂಗ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡದ ಪರ ಪಾಲ್ ವ್ಯಾನ್ ಮೀಕೆರೆನ್ 7.2 ಓವರ್‌ಗಳಲ್ಲಿ 23 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು. ಬಾಸ್ ಡಿ ಲೀಡೆ 7 ಓವರ್‌ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ಲೋಗನ್ ವ್ಯಾನ್ ಬೀಕ್, ಕಾಲಿನ್ ಅಕರ್ಮನ್ ಮತ್ತು ಆರ್ಯನ್ ದತ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ನೆದರ್ಲ್ಯಾಂಡ್ಸ್ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ವಿಕ್ರಮಜಿತ್ ಸಿಂಗ್ ಮತ್ತು ಮ್ಯಾಕ್ಸ್ ಓ'ಡೌಡ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ತಂಡದ ಮೊತ್ತ 4 ರನ್‌ಗಳಾಗಿದ್ದಾಗ ಇಬ್ಬರು ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.

ICC World Cup 2023: Netherlands Defeat Bangladesh By 87 Runs In 28th Match

ಈ ವೇಳೆ ಕ್ರೀಸ್‌ಗೆ ಬಂದ ವೆಸ್ಲಿ ಬ್ಯಾರೆಸಿ ಮತ್ತು ಕಾಲಿನ್ ಅಕರ್ಮನ್ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. 33 ಎಸೆತಗಳಲ್ಲಿ 15 ರನ್ ಗಳಿಸಿದ್ದ ಕಾಲಿನ್ ಅಕರ್ಮನ್ ಔಟಾಗಿ ಹೊರನಡೆದರು. ಇನ್ನು ವೆಸ್ಲಿ ಬ್ಯಾರೆಸಿ 41 ಎಸೆತಗಳನ್ನು ಎದುರಿಸಿ 8 ಬೌಂಡರಿಗಳ ಸಮೇತ 41 ರನ್ ಗಳಿಸಿದರು.

ನೆದರ್ಲ್ಯಾಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಕುಸಿದಿದ್ದ ತಂಡಕ್ಕೆ ಆಸರೆಯಾದರು ಮತ್ತು 89 ಎಸೆತಗಳಿಂದ 6 ಬೌಂಡರಿ ಮೂಲಕ 68 ರನ್ ಬಾರಿಸಿದರು. ಇನ್ನು ಬಾಸ್ ಡಿ ಲೀಡೆ 32 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ 17 ರನ್ ಗಳಿಸಿದರು.

ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್ ನಿಧಾನಗತಿ ಆಟಕ್ಕೆ ಹೋದರು ಮತ್ತು 61 ಎಸೆತಗಳಲ್ಲಿ 3 ಬೌಂಡರಿ ಸಮೇತ 35 ರನ್ ದಾಖಲಿಸಿದರು. ಕೊನೆಯಲ್ಲಿ ಲೋಗನ್ ವ್ಯಾನ್ ಬೀಕ್ ಅಜೇಯ 23 ರನ್, ಶರೀಜ್ ಅಹ್ಮದ್ 6 ರನ್, ಆರ್ಯನ್ ದತ್ 9 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ತಂಡದ ಪರ ಮುಸ್ತಾಫಿಜುರ್ ರೆಹಮಾನ್ 10 ಓವರ್‌ಗಳಲ್ಲಿ 36 ರನ್ ನೀಡಿ 2 ವಿಕೆಟ್ ಪಡೆದರೆ, ಶೋರಿಫುಲ್ ಇಸ್ಲಾಂ 10 ಓವರ್‌ಗಳಲ್ಲಿ 51 ರನ್ ನೀಡಿ 2 ವಿಕೆಟ್ ಕಬಳಿಸಿದರು. ತಸ್ಕಿನ್ ಅಹ್ಮದ್ 9 ಓವರ್‌ಗಳಲ್ಲಿ 43 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ಶಕೀಬ್ ಅಲ್ ಹಸನ್ 10 ಓವರ್‌ಗಳಲ್ಲಿ 37 ರನ್ ನೀಡಿ 1 ವಿಕೆಟ್ ಮತ್ತು ಮಹೇದಿ ಹಸನ್ 7 ಓವರ್‌ಗಳಲ್ಲಿ 40 ರನ್ ನೀಡಿ 2 ವಿಕೆಟ್ ಪಡೆದರು.

Story first published: Saturday, October 28, 2023, 21:40 [IST]
Other articles published on Oct 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+