Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC World Cup 2023 Qualifiers: ಯುಎಇ ವಿರುದ್ಧ ಓಮನ್ ತಂಡಕ್ಕೆ ಭರ್ಜರಿ ಗೆಲುವು

ಬುಧವಾರ, ಜೂನ್ 21ರಂದು ಬುಲವಾಯೊದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡದ ವಿರುದ್ಧ ಓಮನ್ ತಂಡ 5 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 227 ರನ್‌ಗಳನ್ನು ಕಲೆಹಾಕಿತ್ತು. ಈ ಸಾಧಾರಣ ಗುರಿ ಬೆನ್ನಟ್ಟಿದ ಓಮನ್ ತಂಡ ಇನ್ನೂ 4 ಓವರ್‌ಗಳು ಬಾಕಿ ಇರುವಂತೆಯೇ 5 ವಿಕೆಟ್‌ಗಳನ್ನು ಕಳೆದುಕೊಂಡು 228 ರನ್ ಗಳಿಸಿ ಗೆಲುವು ಜಯಭೇರಿ ಬಾರಿಸಿತು.\

ICC World Cup 2023 Qualifiers: Oman Beat UAE By 5 Wickets

ಈ ಮೂಲಕ 2023ರ ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಎರಡು ಗೆಲುವು ಪಡೆದಿದ್ದು, ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಓಮನ್ ತನ್ನ ಹಿಂದಿನ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿತ್ತು.

ಯುಎಇ ತಂಡದ ಪರ ಬ್ಯಾಟಿಂಗ್‌ನಲ್ಲಿ ಅರವಿಂದ್ 84 ಎಸೆತಗಳಲ್ಲಿ 3 ಬೌಂಡರಿ ಸಮೇತ 49 ರನ್ ಗಳಿಸಿದರೆ, ಆಯಾನ್ ಖಾನ್ 52 ಎಸೆತಗಳಲ್ಲಿ 10 ಬೌಂಡರಿ ಸಹಾಯದಿಂದ 58 ರನ್ ಬಾರಿಸಿದರು. ಉಳಿದಂತೆ ರಮೀಜ್ ಶಹಜಾದ್ 51 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 38 ರನ್ ಗಳಿಸಿದರು. ಆಸೀಫ್ ಖಾನ್ 44 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 27 ರನ್ ಗಳಿಸಿದರು.

ಓಮನ್ ತಂಡದ ಪರ ಬೌಲಿಂಗ್‌ನಲ್ಲಿ ಜಯ್ ಒಡೆದ್ರಾ 7 ಓವರ್‌ಗಳಲ್ಲಿ 31 ರನ್ ನೀಡಿ 3 ವಿಕೆಟ್ ಪಡೆದರೆ, ಬಿಲಾಲ್ ಖಾನ್ 10 ಓವರ್‌ಗಳಲ್ಲಿ 46 ರನ್ ನೀಡಿ 2 ವಿಕೆಟ್ ಪಡೆದರು. ಫಯಾಜ್ ಬಟ್ 9 ಓವರ್‌ಗಳಲ್ಲಿ 49 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಆಯಾನ್ ಖಾನ್ 1 ವಿಕೆಟ್ ಪಡೆದರು.

ಯುಎಇ ತಂಡ ನೀಡಿದ್ದ 228 ರನ್‌ಗಳ ಗುರಿ ಬೆನ್ನಟ್ಟಿದ ಓಮನ್ ತಂಡದ ಪರ ಅಕಿಬ್ ಇಲ್ಯಾಸ್ 75 ಎಸೆತಗಳಲ್ಲಿ 3 ಬೌಂಡರಿ 1 ಸಿಕ್ಸರ್ ನೆರವಿನಿಂದ 53 ರನ್ ಬಾರಿಸಿದರು. ಶೋಯೆಬ್ ಖಾನ್ 70 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ಸಹಾಯದಿಂದ 52 ರನ್ ಗಳಿಸಿದರು. ಮೊಹಮ್ಮದ್ ನದೀಮ್ 57 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 50 ರನ್ ಗಳಿಸಿದರೆ, ಕೊನೆಯಲ್ಲಿ ಆಯಾನ್ ಖಾನ್ 36 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ 41 ರನ್ ಬಾರಿಸಿದರು.

ಯುಎಇ ತಂಡದ ಪರ ಬೌಲಿಂಗ್‌ನಲ್ಲಿ ಜುನೈದ್ ಸಿದ್ದಿಕಿ 9 ಓವರ್‌ಗಳಲ್ಲಿ 31 ರನ್ ನೀಡಿ 2 ವಿಕೆಟ್ ಪಡೆದರೆ, ರೋಹನ್ ಮುಸ್ತಾಫಾ 6 ಓವರ್‌ಗಳಲ್ಲಿ 31 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಆಯಾನ್ ಆಫ್ಜಲ್ ಖಾನ್ 1 ವಿಕೆಟ್ ಪಡೆದರು.

Story first published: Wednesday, June 21, 2023, 23:27 [IST]
Other articles published on Jun 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+