For Quick Alerts
ALLOW NOTIFICATIONS  
For Daily Alerts
 

ICC World Cup 2023 Qualifiers: ಎಡ್ವರ್ಡ್ಸ್ ಭರ್ಜರಿ ಬ್ಯಾಟಿಂಗ್; ಯುಎಸ್ಎ ವಿರುದ್ಧ ಗೆದ್ದು ಬೀಗಿದ ನೆದರ್ಲ್ಯಾಂಡ್ಸ್

ಗುರುವಾರ, ಜೂನ್ 22ರಂದು ಹರಾರೆಯ ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಐಸಿಸಿ 2023ರ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಯುಎಸ್ಎ ತಂಡದ ವಿರುದ್ಧ ನೆದರ್ಲ್ಯಾಂಡ್ಸ್ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ಎ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಡ್ ಕಳೆದುಕೊಂಡು 211 ರನ್ ಕಲೆಹಾಕಿತು. ಯುಎಸ್ಎ ಪರ ಶಯಾನ್ ಜಹಾಂಗೀರ್ 86 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 71 ರನ್ ಗಳಿಸಿದರು.

ICC World Cup 2023 Qualifiers: Scott Edwards Hits 67 Runs; Netherlands Beat USA By 5 Wickets

ಉಳಿದಂತೆ ಸ್ಟೀವನ್ ಟೇಲರ್ 10 ರನ್, ಸಾಯಿತೇಜ್ ಮುಕ್ಕಮಲ್ಲ 10 ರನ್, ಆರೋನ್ ಜೋನ್ಸ್ 8 ರನ್, ಗಜಾನಂದ್ ಸಿಂಗ್ 33 ರನ್, ಜೆಸ್ಸಿ ಸಿಂಗ್ 38 ರನ್, ನೋಸ್ತುಶ್ ಕೆಂಜಿಗೆ 19 ರನ್, ನೇತ್ರವಳ್ಕರ್ 14 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡದ ಪರ ರ್ಯಾನ್ ಕ್ಲೇನ್ 9 ಓವರ್‌ಗಳಲ್ಲಿ 31 ರನ್ ನೀಡಿ 2 ವಿಕೆಟ್ ಪಡೆದರೆ, ಬಾಸ್ ಡಿ ಲೀಡೆ 10 ಓವರ್‌ಗಳಲ್ಲಿ 37 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ವ್ಯಾನ್ ಬೀಕ್, ಆರ್ಯನ್ ದತ್, ಕ್ಲೇಯ್ತಾನ್ ಫ್ಲಾಯ್ಡ್ ಮತ್ತು ವಿಕ್ರಮ್‌ಜೀತ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.

ನಂತರ, 212 ರನ್‌ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ 43.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿ ಗೆಲುವಿನ ನಗೆ ಬೀರಿತು. ನಾಯಕ ಸ್ಕಾಟ್ ಎಡ್ವರ್ಡ್ಸ್ 60 ಎಸೆತಗಳಲ್ಲಿ 6 ಬೌಂಡರಿ ಸಮೇತ ಅಜೇಯ 67 ರನ್ ಗಳಿಸಿ ಮಿಂಚಿದರು.

ಇದಕ್ಕೂ ಮೊದಲು ತಂಡದ ಪರ ವಿಕ್ರಮ್‌ಜೀತ್ ಸಿಂಗ್ 8 ರನ್, ಮ್ಯಾಕ್ಸ್ ಓ'ಡೌಡ್ 28 ಎಸೆತಗಳಲ್ಲಿ 26 ರನ್, ಬರೆಸ್ಸಿ 29 ರನ್, ತೇಜ ನಿಡಮನೂರು 68 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 58 ರನ್ ಬಾರಿಸಿದರೆ, ವ್ಯಾನ್ ಬೀಕ್ 12 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಬೌಲಿಂಗ್‌ನಲ್ಲಿ ಯುಎಸ್ಎ ತಂಡದ ಪರ ಸೌರಭ್ ನೇತ್ರವಳ್ಕರ್ 10 ಓವರ್‌ಗಳಲ್ಲಿ 44 ರನ್ ನೀಡಿ 1 ವಿಕೆಟ್ ಪಡೆದರೆ, ಜಸ್‌ದೀಪ್ ಸಿಂಗ್ 8 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರು. ಅಲಿ ಖಾನ್, ನೋಸ್ತುಶ್ ಕೆಂಜಿಗೆ ತಲಾ ಒಂದೊಂದು ವಿಕೆಟ್ ಪಡೆದರು.

67 ರನ್ ಗಳಿಸಿ ನೆದರ್ಲ್ಯಾಂಡ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದ ನಾಯಕ ಸ್ಕಾಟ್ ಎಡ್ವರ್ಡ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Story first published: Thursday, June 22, 2023, 21:55 [IST]
Other articles published on Jun 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+