ICC World Cup 2023 Qualifiers: ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಜಿಂಬಾಬ್ವೆ
ಸೋಮವಾರ, ಜೂನ್ 26ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ 2023ರ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡ ಯುನೈಟೆಡ್ ಸ್ಟೇಟ್ಸ್ (ಯುಎಸ್ಎ) ತಂಡದ ವಿರುದ್ಧ ಬೃಹತ್ ಮೊತ್ತ ದಾಖಲಿಸಿ ಇತಿಹಾಸ ಬರೆದಿದೆ.
ಜಿಂಬಾಬ್ವೆ ಕ್ರಿಕೆಟ್ ತಂಡವು ಯುಎಸ್ಎ ವಿರುದ್ಧದ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ 400 ರನ್ ಗಳಿಸುವ ಮೂಲಕ ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿತು.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಯುಎಸ್ಎ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ಸೀನ್ ವಿಲಿಯಮ್ಸ್ ಅವರ ಅದ್ಭುತ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 408 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.
ಜಿಂಬಾಬ್ವೆ ಬ್ಯಾಟಿಂಗ್ ಆರಂಭಿಸಿದ ಜೆ ಗುಂಬಿ ಮತ್ತು ಇನ್ನೋಸೆಂಟ್ ಕೈಯಾ ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿದರು. ಆದರೆ 41 ಎಸೆತಗಳಲ್ಲಿ 32 ರನ್ ಗಳಿಸಿದ್ದ ಇನ್ನೋಸೆಂಟ್ ಕೈಯಾ ಅವರು ಜೆಸ್ಸಿ ಸಿಂಗ್ ಅವರಿಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಸೀನ್ ವಿಲಿಯಮ್ಸ್ ಕೇವಲ 101 ಎಸೆತಗಳಲ್ಲಿ 21 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 174 ರನ್ ಗಳಿಸುವ ಮೂಲಕ ಕ್ರಿಕೆಟ್ ವೃತ್ತಿಜೀವನದ ಅತ್ಯುತ್ತಮ ಶತಕಗಳಲ್ಲಿ ಒಂದನ್ನು ಬಾರಿಸಿದರು.

ಈ ವೇಳೆ 104 ಎಸೆತಗಳಲ್ಲಿ 78 ರನ್ ಗಳಿಸಿದ್ದ ಜೆ ಗುಂಬಿ ಅವರನ್ನು ನೊಸ್ತಷ್ ಕೆಂಜಿಗೆ ಔಟ್ ಮಾಡಿದರು. ಆದರೆ ಸೀನ್ ವಿಲಿಯಮ್ಸ್ ಇನ್ನೊಂದು ತುದಿಯಲ್ಲಿ ರನ್‌ಗಳ ಶಿಖರ ನಿರ್ಮಿಸಿದರು. ಸಿಕಂದರ್ ರಜಾ 27 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 48 ರನ್ ಗಳಿಸಿದರು.
ಇನ್ನು ಕೊನೆಯಲ್ಲಿ ರಿಯಾನ್ ಬರ್ಲ್ 16 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ 47 ರನ್ ಬಾರಿಸಿ ಜಿಂಬಾಬ್ವೆ ತಂಡವನ್ನು ಇತಿಹಾಸದಲ್ಲಿ ಮೊದಲ ಬಾರಿಗೆ 400 ರನ್ ಗಡಿ ದಾಟಿಸಲು ಸಹಾಯ ಮಾಡಿದರು.
ಯುಎಸ್ಎ ವಿರುದ್ಧದ ಜಿಂಬಾಬ್ವೆ ತಂಡದ ಬ್ಯಾಟಿಂಗ್ ಪ್ರದರ್ಶನವು ಅವರು ಪಂದ್ಯಾವಳಿಯಲ್ಲಿ ಸ್ಪರ್ಧಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಇತ್ತೀಚೆಗೆ ಜಿಂಬಾಬ್ವೆ ತಂಡ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಮೋಘ ಗೆಲುವು ದಾಖಲಿಸಿದ್ದರು.
ನೇಪಾಳ, ನೆದರ್ಲ್ಯಾಂಡ್ಸ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಹಿಂದಿನ ಮುಖಾಮುಖಿ ಪಂದ್ಯಗಳಲ್ಲಿ ಸತತ ಮೂರು ಜಯದೊಂದಿಗೆ ಜಿಂಬಾಬ್ವೆ ಸೂಪರ್ 6 ಹಂತದಲ್ಲಿ ಮತ್ತಷ್ಟು ಗೆಲುವು ಪಡೆಯಲು ಸಿದ್ಧವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications