For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2023: 5 ಪಂದ್ಯಗಳಿಗೆ ಬೆಂಗಳೂರು ಆತಿಥ್ಯ: ಚಿನ್ನಸ್ವಾಮಿಯಲ್ಲಿ ನಡೆಯುವ ಪಂದ್ಯಗಳು ಯಾವುದು?

ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು ಇಂದು ಬಹುನಿರೀಕ್ಷಿತ ವಿಶ್ವಕಪ್ ವೇಳಾಪಟ್ಟಿ ಕೂಡ ಬಿಡುಗಡೆಯಾಗಿದೆ. ಈ ಮೂಲಕ ಯಾವ್ಯಾವ ಪಂದ್ಯಗಳು ಎಲ್ಲೆಲ್ಲಿ ನಡೆಯಲಿದೆ ಎಂಬುದರ ಕುರಿತ ಅನುಮಾನ ಹಾಗೂ ಗೊಂದಲಗಳಿಗೂ ತೆರೆಬಿದ್ದಾಂತಾಗಿದೆ. ಈ ಬಾರಿಯ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು 8 ತಂಡಗಳು ಈಗಾಗಲೇ ಅರ್ಹತೆ ಪಡೆದುಕೊಂಡಿದೆ. ಉಳಿದ ಎರಡು ತಂಡಗಳು ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಅರ್ಹತಾ ಸುತ್ತಿನಲ್ಲಿ ಫೈನಲ್‌ಗೆ ಪ್ರವೇಶಿಸಿ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.

ಒಟ್ಟು 10 ತಾಣಗಳಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ ನಡೆಯಲಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಕೂಡ ವಿಶ್ವಕಪ್ ಆಯೋಜನೆ ಮಾಡುವ 10 ತಂಡಗಳ ಪೈಕಿ ಒಂದಾಗಿದೆ. ಎಲ್ಲಾ ಹತ್ತು ತಾಣಗಳ ಪೈಕಿ ಹೈದರಾಬಾದ್‌ನಲ್ಲಿ ಮೂರ ಪಂದ್ಯಗಳು ನಡೆಯಲಿದ್ದು ಉಳಿದ 9 ತಾಣಗಳು ಕೂಡ ತಲಾ ಐದು ಪಂದ್ಯಗಳಿಗೆ ಆತಿಥ್ಯವನ್ನು ವಹಿಸಲಿದೆ. ಹೀಗಾಗಿ ಬೆಂಗಳೂರಿನಲ್ಲಿಯೂ ಈ ಬಾರಿಯ ವಿಶ್ವಕಪ್‌ನ ಐದು ಪಂದ್ಯಗಳು ಆಯೋಜನೆಯಾಗಲಿದ್ದು ಭಾರತದ ಒಂದು ಪಂದ್ಯ ಕೂಡ ಇದೆ.

ICC World Cup 2023 Schedule: List of All Matches in Chinnaswamy Stadium

ಬೆಂಗಳೂರಿನಲ್ಲಿ ಐದು ಪಂದ್ಯಗಳು

ಅಕ್ಟೋಬರ್ 5ರಿಂದ ಏಕದಿನ ವಿಶ್ವಕಪ್ ಟೂರ್ನಿ ಆಂಭವಾಗಲಿದ್ದರೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯುವುದು ಅಕ್ಟೋಬರ್ 20ರಂದು. ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಅಕ್ಟೋಬರ್ 26ರಂದು ಎರಡನೇ ಪಂದ್ಯ ನಡೆಯಲಿದ್ದು ಇಂಗ್ಲೆಂಡ್ ಹಾಗೂ ಅರ್ಹತಾಸುತ್ತಿನಿಂದ ಬಂದ ತಂಡ ಮುಖಾಮುಖಿಯಾಗಲಿದೆ. ನಂತರ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನವೆಂಬರ್ 4ರಂದು ನಡೆಯಲಿದೆ. ನಂತರ ನವೆಂಬರ್ 9ರಂದು ನ್ಯೂಜಿಲೆಂಡ್ ಹಾಗೂ ಕ್ವಾಲಿಫಯರ್ 2 ತಂಡಗಳು ಮುಖಾಮುಯಖಿಯಾಗಲಿದೆ.

ಟೀಮ್ ಇಂಡಿಯಾದ ಏಕೈಕ ಪಂದ್ಯ

ಇನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತದ ಏಕೈಕ ಪಂದ್ಯ ನವೆಂಬರ್ 11ರಂದು ನಡೆಯಲಿದ್ದು ಕ್ವಾಲಿಫಯರ್ 1 ತಂಡವನ್ನು ಭಾರತ ಎದುರಿಸಲಿದೆ. ಇದು ಲೀಗ್ ಹಂತದಲ್ಲಿ ಭಾರತದ ಕೊನೆಯ ಪಂದ್ಯವಾಗಿರಲಿದೆ. ಹೈದರಾಬಾದ್ ಹೊರತುಪಡಿಸಿ ಉಳಿದ ಎಲ್ಲಾ ತಾಣಗಳಲ್ಲಿಯೂ ಟೀಮ್ ಇಂಡಿಯಾ ಲೀಗ್ ಪಂದ್ಯವನ್ನು ಆಡಲಿದ್ದು ಲೀಗ್ ಹಂಗತದ ಒಂದೊಂದು ಪಂದ್ಯಗಳು ಈ ಎಲ್ಲಾ ತಾಣಗಳಲ್ಲಿಯೂ ಆಯೋಜನೆಯಾಗಲಿದೆ.

ತಾಣಗಳ ಪ್ರಕಾರ ವಿಶ್ವಕಪ್ ಪಂದ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಹಮದಾಬಾದ್‌ನಲ್ಲಿ ನಡೆಯುವ ಎಲ್ಲಾ ಪಂದ್ಯಗಳು

ಅಕ್ಟೋಬರ್ 5 - ಇಂಗ್ಲೆಂಡ್ vs ನ್ಯೂಜಿಲೆಂಡ್
15 ಅಕ್ಟೋಬರ್ - ಭಾರತ vs ಪಾಕಿಸ್ತಾನ
4 ನವೆಂಬರ್ - ಇಂಗ್ಲೆಂಡ್ vs ಆಸ್ಟ್ರೇಲಿಯಾ
10 ನವೆಂಬರ್ - ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ
19 ನವೆಂಬರ್ - ಫೈನಲ್

ಹೈದರಾಬಾದ್

6 ಅಕ್ಟೋಬರ್ - ಪಾಕಿಸ್ತಾನ vs ಕ್ವಾಲಿಫೈಯರ್ 1
9 ಅಕ್ಟೋಬರ್ - ನ್ಯೂಜಿಲೆಂಡ್ vs ಕ್ವಾಲಿಫೈಯರ್ 1
12 ಅಕ್ಟೋಬರ್ - ಪಾಕಿಸ್ತಾನ vs ಕ್ವಾಲಿಫೈಯರ್ 2

ಧರ್ಮಶಾಲಾ

7 ಅಕ್ಟೋಬರ್ - ಬಾಂಗ್ಲಾದೇಶ vs ಅಫ್ಘಾನಿಸ್ತಾನ
ಅಕ್ಟೋಬರ್ 10 - ಇಂಗ್ಲೆಂಡ್ vs ಬಾಂಗ್ಲಾದೇಶ
16 ಅಕ್ಟೋಬರ್ - ದಕ್ಷಿಣ ಆಫ್ರಿಕಾ vs ಕ್ವಾಲಿಫೈಯರ್ 1
22 ಅಕ್ಟೋಬರ್ - ಭಾರತ vs ನ್ಯೂಜಿಲೆಂಡ್
29 ಅಕ್ಟೋಬರ್ - ಆಸ್ಟ್ರೇಲಿಯಾ vs ನ್ಯೂಜಿಲೆಂಡ್

ದೆಹಲಿ

7 ಅಕ್ಟೋಬರ್ - ದಕ್ಷಿಣ ಆಫ್ರಿಕಾ vs ಕ್ವಾಲಿಫೈಯರ್ 2
11 ಅಕ್ಟೋಬರ್ - ಭಾರತ vs ಅಫ್ಘಾನಿಸ್ತಾನ
ಅಕ್ಟೋಬರ್ 15 - ಇಂಗ್ಲೆಂಡ್ vs ಅಫ್ಘಾನಿಸ್ತಾನ
25 ಅಕ್ಟೋಬರ್ - ಆಸ್ಟ್ರೇಲಿಯಾ vs ಕ್ವಾಲಿಫೈಯರ್ 1
6 ನವೆಂಬರ್ - ಬಾಂಗ್ಲಾದೇಶ vs ಕ್ವಾಲಿಫೈಯರ್ 2

ಚೆನ್ನೈ

8 ಅಕ್ಟೋಬರ್ - ಭಾರತ vs ಆಸ್ಟ್ರೇಲಿಯಾ
14 ಅಕ್ಟೋಬರ್ - ನ್ಯೂಜಿಲೆಂಡ್ vs ಬಾಂಗ್ಲಾದೇಶ
18 ಅಕ್ಟೋಬರ್ - ನ್ಯೂಜಿಲೆಂಡ್ vs ಅಫ್ಘಾನಿಸ್ತಾನ
ಅಕ್ಟೋಬರ್ 23 - ಪಾಕಿಸ್ತಾನ vs ಅಫ್ಘಾನಿಸ್ತಾನ
ಅಕ್ಟೋಬರ್ 27 - ಪಾಕಿಸ್ತಾನ vs ದಕ್ಷಿಣ ಆಫ್ರಿಕಾ

ಲಕ್ನೋ

13 ಅಕ್ಟೋಬರ್ - ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ
17 ಅಕ್ಟೋಬರ್ - ಆಸ್ಟ್ರೇಲಿಯಾ vs ಕ್ವಾಲಿಫೈಯರ್ 2
21 ಅಕ್ಟೋಬರ್ - ಕ್ವಾಲಿಫೈಯರ್ 1 vs ಕ್ವಾಲಿಫೈಯರ್ 2
29 ಅಕ್ಟೋಬರ್ - ಭಾರತ vs ಇಂಗ್ಲೆಂಡ್
3 ನವೆಂಬರ್ - ಕ್ವಾಲಿಫೈಯರ್ 1 vs ಅಫ್ಘಾನಿಸ್ತಾನ

ಪುಣೆ

19 ಅಕ್ಟೋಬರ್ - ಭಾರತ vs ಬಾಂಗ್ಲಾದೇಶ
30 ಅಕ್ಟೋಬರ್ - ಅಫ್ಘಾನಿಸ್ತಾನ vs ಕ್ವಾಲಿಫೈಯರ್ 2
ನವೆಂಬರ್ 1 - ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ
8 ನವೆಂಬರ್ - ಇಂಗ್ಲೆಂಡ್ vs ಕ್ವಾಲಿಫೈಯರ್ 1
12 ನವೆಂಬರ್ - ಆಸ್ಟ್ರೇಲಿಯಾ vs ಬಾಂಗ್ಲಾದೇಶ

ಬೆಂಗಳೂರು

ಅಕ್ಟೋಬರ್ 20 - ಆಸ್ಟ್ರೇಲಿಯಾ vs ಪಾಕಿಸ್ತಾನ
26 ಅಕ್ಟೋಬರ್ - ಇಂಗ್ಲೆಂಡ್ vs ಕ್ವಾಲಿಫೈಯರ್ 2
4 ನವೆಂಬರ್ - ನ್ಯೂಜಿಲೆಂಡ್ vs ಪಾಕಿಸ್ತಾನ
9 ನವೆಂಬರ್ - ನ್ಯೂಜಿಲೆಂಡ್ vs ಕ್ವಾಲಿಫೈಯರ್ 2
11 ನವೆಂಬರ್ - ಭಾರತ vs ಕ್ವಾಲಿಫೈಯರ್ 1

ಮುಂಬೈ

ಅಕ್ಟೋಬರ್ 21 - ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ
ಅಕ್ಟೋಬರ್ 24 - ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ
2 ನವೆಂಬರ್ - ಭಾರತ vs ಕ್ವಾಲಿಫೈಯರ್ 2
ನವೆಂಬರ್ 7 - ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ
15 ನವೆಂಬರ್ - ಸೆಮಿಫೈನಲ್ 1

ಕೋಲ್ಕತ್ತಾ

28 ಅಕ್ಟೋಬರ್ - ಕ್ವಾಲಿಫೈಯರ್ 1 vs ಬಾಂಗ್ಲಾದೇಶ
31 ಅಕ್ಟೋಬರ್ - ಪಾಕಿಸ್ತಾನ vs ಬಾಂಗ್ಲಾದೇಶ
ನವೆಂಬರ್ 5 - ಭಾರತ vs ದಕ್ಷಿಣ ಆಫ್ರಿಕಾ
ನವೆಂಬರ್ 12 - ಇಂಗ್ಲೆಂಡ್ vs ಪಾಕಿಸ್ತಾನ
16 ನವೆಂಬರ್ - ಸೆಮಿಫೈನಲ್ 2

Story first published: Tuesday, June 27, 2023, 16:27 [IST]
Other articles published on Jun 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+