AUS vs SA: ತಿಣುಕಾಡಿ ಗೆದ್ದ ಆಸ್ಟ್ರೇಲಿಯಾ ಫೈನಲ್‌ಗೆ; ಚೋಕರ್ಸ್ ಹಣೆಪಟ್ಟಿ ಉಳಿಸಿಕೊಂಡ 'ಸೋತಾಫ್ರಿಕಾ' ಮನೆಗೆ!
ಗುರುವಾರ, ನವೆಂಬರ್ 16ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 2ನೇ ಸೆಮಿಫೈನಲ್‌ನ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ಗಳ ಪ್ರಯಾಸದ ಗೆಲುವು ಸಾಧಿಸಿದ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ದಾಖಲೆಯ 8ನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ.
ಇನ್ನು ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ, ಸೆಮಿಫೈನಲ್‌ನಲ್ಲಿ ಮತ್ತೊಮ್ಮೆ ಸೋಲು ಅನುಭವಿಸುವ ಮೂಲಕ ಚೋಕರ್ಸ್ ಎಂಬ ಕೆಟ್ಟ ಹಣೆಪಟ್ಟಿಯನ್ನು ದಕ್ಷಿಣ ಆಫ್ರಿಕಾ ತಂಡ ಹಾಗೇ ಉಳಿಸಿಕೊಂಡಿದೆ. ವಿಶ್ವಕಪ್ ಫೈನಲ್ ತಲುಪುವ ಹರಿಣಗಳ ದಶಕಗಳ ಕನಸು ಕನಸಾಗಿಯೇ ಉಳಿದಿದೆ.

2ನೇ ಸೆಮಿಫೈನಲ್‌ನಲ್ಲಿ ಗೆದ್ದ ಆಸ್ಟ್ರೇಲಿಯಾ ತಂಡವು ಭಾನುವಾರ, ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಗ್ರ್ಯಾಂಡ್ ಫೈನಲ್‌ನಲ್ಲಿ ಆತಿಥೇಯ ಭಾರತ ತಂಡವನ್ನು ಎದುರಿಸಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಡೇವಿಡ್ ಮಿಲ್ಲರ್ ಅಮೋಘ ಶತಕದ ಸಹಾಯದಿಂದ 49.4 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿಗೆ 213 ರನ್‌ಗಳ ಗುರಿ ನೀಡಲಾಗಿದೆ.
213 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಟ್ರಾವಿಸ್ ಹೆಡ್ ಅವರ ಅರ್ಧಶತಕದ ನೆರವಿನಿಂದ 47.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ತೂಗುಯ್ಯಾಲೆಯಂತೆ ಸಾಗಿದ ಈ ಸೆಮಿಫೈನಲ್ ಪಂದ್ಯವು ವಿಜಯಲಕ್ಷ್ಮಿ ಕೊನೆಯವರೆಗೂ ಉಭಯ ತಂಡಗಳಿಗೆ ಕಣ್ಮರೆಯಾಗಿದ್ದಳು. ಕೊನೆಯಲ್ಲಿ ತಾಳ್ಮೆಯ ಆಟಕ್ಕೆ ಮೊರೆ ಹೋದ ಆಸ್ಟ್ರೇಲಿಯನ್ನರಿಗೆ ಕೊನೆಗೂ ಗೆಲುವು ದಕ್ಕಿತು.
ಆಸ್ಟ್ರೇಲಿಯಾ ತಂಡದ ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 6.1 ಓವರ್‌ಗಳಲ್ಲಿ 60 ರನ್‌ಗಳ ಜೊತೆಯಾಟ ನೀಡಿತು.

ಈ ವೇಳೆ 18 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 29 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಔಟಾದರು. ನಂತರ ಬಂದ ಮಿಚೆಲ್ ಮಾರ್ಷ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು.
ಆ ಬಳಿಕ ಕ್ರೀಸ್‌ಗೆ ಬಂದ ಸ್ಟೀವನ್ ಸ್ಮಿತ್ ನಿಧಾಗತಿ ಆಟಕ್ಕೆ ಮೊರೆ ಹೋದರು ಮತ್ತು 62 ಎಸೆತಗಳಲ್ಲಿ 2 ಬೌಂಡರಿ ಮೂಲಕ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ 48 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 62 ರನ್ ಬಾರಿಸಿದರು.
ಇನ್ನು ಮಾರ್ನಸ್ ಲ್ಯಾಬುಸ್ಚಾಗ್ನೆ 18 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 1 ರನ್ ಗಳಿಸಿ ಔಟಾದರೆ, ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ 28 ರನ್ ಬಾರಿಸಿದರು. ಕೊನೆಯಲ್ಲಿ ಮಿಚೆಲ್ ಸ್ಟಾರ್ಕ್ ಅಜೇಯ 16 ರನ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ ಅಜೇಯ 14 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.

ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ತಬ್ರೇಜ್ ಶಮ್ಸಿ 10 ಓವರ್‌ಗಳಲ್ಲಿ 42 ರನ್ ನೀಡಿ 2 ವಿಕೆಟ್ ಪಡೆದರೆ, ಜೆರಾಲ್ಡ್ ಕೋಟ್ಜಿ 9 ಓವರ್‌ಗಳಲ್ಲಿ 47 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಕಗಿಸೊ ರಬಾಡ, ಏಡೆನ್ ಮಾರ್ಕ್ರಾಮ್ ಮತ್ತು ಕೇಶವ್ ಮಹಾರಾಜ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಡೇವಿಡ್ ಮಿಲ್ಲರ್ ಅವರ ಅಮೋಘ ಶತಕದ ನೆರವಿನಿಂದ 49.4 ಓವರ್‌ಗಳಲ್ಲಿ 212 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿಗೆ 213 ರನ್‌ಗಳ ಗುರಿ ನೀಡಲಾಗಿದೆ.
ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ಟೆಂಬಾ ಬವುಮಾ ಮತ್ತು ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಮೊದಲ ಓವರ್‌ನಲ್ಲೇ ನಾಯಕ ಟೆಂಬಾ ಬವುಮಾ ವಿಕೆಟ್ ಕಳೆದುಕೊಳ್ಳುವ ಮೂಲಕ ಪೆವಿಲಿಯನ್‌ಗೆ ಪರೇಡ್‌ಗೆ ಮುನ್ನುಡಿ ಬರೆಯಿತು.

ಅ ಬಳಿಕ ಕ್ವಿಂಟನ್ ಡಿ ಕಾಕ್ ಕೂಡ ಆಸ್ಟ್ರೇಲಿಯಾ ಬೌಲರ್‌ಗಳ ವಿರುದ್ಧ ಹೋರಾಡಿದರು. ಆದರೆ, ತಂಡದ ಮೊತ್ತ 5 ರನ್‌ಗಳಾಗಿದ್ದಾಗ 3 ರನ್ ಗಳಿಸಿ ಔಟಾದರು. ಇನ್ನು ರಾಸ್ಸೀ ವಾನ್ ಡೇರ್ ಡುಸ್ಸೆನ್ ಕೇವಲ 6 ರನ್‌ಗಳಿಗೆ ತಮ್ಮ ಆಟ ಮುಗಿಸಿದರು. ಏಡೆನ್ ಮಾರ್ಕ್ರಾಮ್ 10 ರನ್ ಗಳಿಸಿ ಸೆಮಿಫೈನಲ್ ಪಂದ್ಯದಲ್ಲಿ ನಿರಾಸೆ ಮೂಡಿಸಿದರು.
11.5 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ 24 ರನ್‌ಗಳಿಗೆ 4 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ 5ನೇ ವಿಕೆಟ್‌ಗೆ 95 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದರು.
ಈ ವೇಳೆ 48 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 47 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸದರು. ನಂತರದ ಎಸೆತದಲ್ಲಿ ಮಾರ್ಕೊ ಜಾನ್ಸನ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ನಂತರ ಜೊತೆಯಾದ ಗೆರಾಲ್ಡ್ ಕೋಟ್ಜಿ 39 ಎಸೆತಗಳಲ್ಲಿ 2 ಬೌಂಡರಿ ಸಮೇತ 19 ರನ್ ಗಳಿಸಿ ವಿಕೆಟ್ ನೀಡಿದರು.

ಇನ್ನು ಇನ್ನಿಂಗ್ಸ್‌ನುದ್ದಕ್ಕೂ ಏಕಾಂಗಿ ಹೋರಾಟ ನಡೆಸಿದ ಡೇವಿಡ್ ಮಿಲ್ಲರ್ 116 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 101 ರನ್ ಬಾರಿಸಿ ಕುಸಿದಿದ್ದ ತಂಡವನ್ನು ಮೇಲೆತ್ತಿದರು ಮತ್ತು ತಂಡದ ಮೊತ್ತ 200ರ ಗಡಿ ದಾಟಲು ಸಹಾಯಕವಾದರು. ಕೊನೆಯಲ್ಲಿ ಕೇಶವ್ ಮಹಾರಾಜ್ 4 ರನ್, ಕಗಿಸೊ ರಬಾಡ 10 ರನ್ ಮತ್ತು ತಬ್ರೇಜ್ ಶಮ್ಸಿ 1 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಮಿಚೆಲ್ ಸ್ಟಾರ್ಕ್ 10 ಓವರ್‌ಗಳಲ್ಲಿ 34 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಪ್ಯಾಟ್ ಕಮ್ಮಿನ್ಸ್ 9.4 ಓವರ್‌ಗಳಲ್ಲಿ 51 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಜೋಶ್ ಹ್ಯಾಜಲ್‌ವುಡ್ ಮತ್ತು ಟ್ರಾವಿಸ್ ಹೆಡ್ ತಲಾ ಎರಡು ವಿಕೆಟ್ ಕಿತ್ತು ದಕ್ಷಿಣ ಆಫ್ರಿಕಾ ತಂಡಕ್ಕೆ ಕಂಟಕವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications