For Quick Alerts
ALLOW NOTIFICATIONS  
For Daily Alerts
 

World Cup 2023: ಲೀಗ್‌ನಲ್ಲಿ ಅಬ್ಬರ, ನಾಕೌಟ್‌ನಲ್ಲಿ ತತ್ತರ; ಟೀಮ್ ಇಂಡಿಯಾದ ನಿದ್ದೆಗೆಡಿಸಿದೆ ಈ ಅಂಕಿ-ಅಂಶ

By ನಾಗೇಶ್

ಪ್ರಸಕ್ತ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನವನ್ನು ನೀಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಎಲ್ಲರಿಗಿಂತ ಮೊದಲು ಸೆಮಿಫೈನಲ್‌ಗೆ ಎಂಟ್ರಿ ಪಡೆಯಿತು.

ರೋಹಿತ್ ಶರ್ಮಾ ನೇತೃತ್ವದ ತಂಡ ಈ ಬಾರಿಯ ಏಕದಿನ ವಿಶ್ವಕಪ್ ಗೆಲ್ಲುವ ಹಾಟ್ ಫೆವರೀಟ್ ತಂಡ ಎಂದು ಕರೆಸಿಕೊಳ್ಳುತ್ತಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತಕ್ಕೆ ಈ ಒಂದು ಚಿಂತೆ ನಿಜಕ್ಕೂ ಕಾಡುತ್ತಿದೆ.

ಏಕೆಂದರೆ, ಈ ಅಂಕಿಅಂಶಗಳು ಭಾರತ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಕಳೆದ 10 ವರ್ಷಗಳಲ್ಲಿ ಭಾರತ ತಂಡ ಐಸಿಸಿ ಟೂರ್ನಿಯಲ್ಲಿ ನೀಡಿದ ಪ್ರದರ್ಶನವೇ ಈ ಆತಂಕಕ್ಕೆ ಕಾರಣವಾಗಿದೆ. ಐಸಿಸಿಯ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ಶೇಕಡಾ 86ರಷ್ಟು ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ನಾಕೌಟ್ ಹಂತದಲ್ಲಿ ಶೇಕಡಾ 89ರಷ್ಟು ನಿರಾಸೆ ಅನುಭವಿಸಿದೆ.

icc-world-cup-2023-semifinal

ಪ್ರಮುಖ ಪಂದ್ಯಗಳಲ್ಲಿ ಭಾರತ ತಂಡದ ವೈಫಲ್ಯದ ಭಯವನ್ನು ಅರ್ಥಮಾಡಿಕೊಳ್ಳಲು, ನಾವು ಐಸಿಸಿ ಪಂದ್ಯಾವಳಿಗಳಲ್ಲಿ ಟೀಮ್ ಇಂಡಿಯಾದ 48 ವರ್ಷಗಳ ಪ್ರಯಾಣವನ್ನು ನೋಡಬಹುದು.

1975ರಿಂದ 1983: ಭಾರತವು 1975 ಮತ್ತು 1979ರ ವಿಶ್ವಕಪ್‌ನಲ್ಲಿ ನಾಕೌಟ್‌ಗೆ ತಲುಪಲಿಲ್ಲ.

1983ರಲ್ಲಿ ಮೊದಲ ಬಾರಿಗೆ ನಾಕೌಟ್ ತಲುಪಿ ಚಾಂಪಿಯನ್ ಆಗಿತ್ತು

1984ರಿಂದ 2006: ಈ ವೇಳೆ ಭಾರತ 11 ಐಸಿಸಿ ಪಂದ್ಯಾವಳಿಗಳಲ್ಲಿ ಭಾಗವಹಿಸಿದೆ. ಈ ಪೈಕಿ 5ರಲ್ಲಿ ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಸೋಲು ಅನುಭವಿಸಿದೆ. 1 ಫೈನಲ್‌ ಪಂದ್ಯ ಮಳೆಯಿಂದಾಗಿ ಪೂರ್ಣಗೊಳ್ಳಲಿಲ್ಲ, ಇದರಲ್ಲಿ ಭಾರತ ಜಂಟಿ ವಿಜೇತವಾಗಿದೆ. 5 ಟೂರ್ನಿಗಳಲ್ಲಿ ಭಾರತ ನಾಕೌಟ್ ಸುತ್ತಿಗೆ ತಲುಪಲು ವಿಫಲವಾಗಿದೆ.

1983ರ ವಿಶ್ವಕಪ್‌ನಿಂದ 2007ರ ಏಕದಿನ ವಿಶ್ವಕಪ್‌ವರೆಗೆ ಭಾರತವು ಒಂದೇ ಒಂದು ಐಸಿಸಿ ಪಂದ್ಯಾವಳಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದು ಗಮನಾರ್ಹ.

2007ರಿಂದ 2013: ಭಾರತ ಕ್ರಿಕೆಟ್ ತಂಡ 2007ರ ಟಿ20 ವಿಶ್ವಕಪ್‌ನಿಂದ 2013ರ ಚಾಂಪಿಯನ್ಸ್ ಟ್ರೋಫಿವರೆಗೆ 7 ಐಸಿಸಿ ಪಂದ್ಯಾವಳಿಗಳಲ್ಲಿ ಭಾಗವಹಿಸಿದೆ. ಇದರಲ್ಲಿ ಟೀಮ್ ಇಂಡಿಯಾ 3 ಬಾರಿ ನಾಕೌಟ್ ಸುತ್ತು ತಲುಪಿ ಮೂರರಲ್ಲೂ ಪ್ರಶಸ್ತಿ ಗೆದ್ದುಕೊಂಡಿತ್ತು.

2014ರಿಂದ 2023: ಸದ್ಯ ನಡೆಯುತ್ತಿರುವ ವಿಶ್ವಕಪ್‌ಗೂ ಮುನ್ನ ಭಾರತ ಐಸಿಸಿ 9 ಪಂದ್ಯಾವಳಿಗಳಲ್ಲಿ 8ರಲ್ಲಿ ನಾಕೌಟ್ ತಲುಪಿದ್ದು, ಒಂದೇ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ಸೋಜಿಗ.

icc-world-cup-2023-semifinal

2013ರ ಬಳಿಕ ಐಸಿಸಿ ಟೂರ್ನಿಯಲ್ಲಿ ಭಾರತದ ಪ್ರದರ್ಶನ ಹೀಗಿದೆ

2014 - ಟಿ20 ವಿಶ್ವಕಪ್ - ಭಾರತ vs ಶ್ರೀಲಂಕಾ ಫೈನಲ್‍: ಶ್ರೀಲಂಕಾ ತಂಡ ಭಾರತವನ್ನು 6 ವಿಕೆಟ್‌ಗಳಿಂದ ಮಣಿಸಿತು. ಇದೇ ಟೂರ್ನಿಯಲ್ಲಿ ಭಾರತ ತಂಡ ಲೀಗ್ ಹಂತದ 5 ಪಂದ್ಯ ಗೆದ್ದಿತು.

2015 - ಏಕದಿನ ವಿಶ್ವಕಪ್ - ಭಾರತ vs ಆಸ್ಟ್ರೇಲಿಯಾ ಸೆಮಿಫೈನಲ್: ಆತಿಥೇಯ ಆಸ್ಟ್ರೇಲಿಯಾ ತಂಡ 95 ರನ್‌ಗಳಿಂದ ಭಾರತವನ್ನು ಸೋಲಿಸಿತ್ತು. ಈ ಲೀಗ್‌ನಲ್ಲೂ ಭಾರತ ಸತತ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.

2016 - ಟಿ20 ವಿಶ್ವಕಪ್ - ಭಾರತ vs ವೆಸ್ಟ್‍ ಇಂಡೀಸ್ ಸೆಮಿಫೈನಲ್: ಭಾರತ ತಂಡವನ್ನು ವೆಸ್ಟ್‍ ಇಂಡೀಸ್ 7 ವಿಕೆಟ್‌ಗಳಿಂದ ಸೋಲಿಸಿತ್ತು. ಈ ವಿಶ್ವಕಪ್‌ನಲ್ಲಿ ಭಾರತ ಲೀಗ್ ಹಂತದಲ್ಲಿ ಒಂದು ಪಂದ್ಯವನ್ನು ಮಾತ್ರ ಸೋಲು ಅನುಭವಿಸಿತ್ತು.

2017 - ಚಾಂಪಿಯನ್ಸ್ ಟ್ರೋಫಿ - ಭಾರತ vs ಪಾಕಿಸ್ತಾನ ಫೈನಲ್: ಪ್ರಶಸ್ತಿ ಹಂತದ ಪಂದ್ಯದಲ್ಲಿ ಭಾರತ ತಂಡಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ 180 ರನ್‌ಗಳ ಆಘಾತ ನೀಡಿತ್ತು. ಈ ಟೂರ್ನಿಯ ಲೀಗ್ ಹಂತದಲ್ಲೂ ಭಾರತ ಕೇವಲ 1 ಪಂದ್ಯದಲ್ಲಿ ಮಾತ್ರ ಸೋಲು ಕಂಡಿತ್ತು.

2019 - ಏಕದಿನ ವಿಶ್ವಕಪ್- ಭಾರತ vs ನ್ಯೂಜಿಲೆಂಡ್ ಸೆಮಿಫೈನಲ್: ಈ ಪಂದ್ಯದಲ್ಲಿ ಕಿವೀಸ್ ತಂಡ ಭಾರತ ವಿರುದ್ಧ 180 ರನ್‌ಗಳ ಜಯಭೇರಿ ಬಾರಿಸಿತು. ಈ ಏಕದಿನ ವಿಶ್ವಕಪ್‌ನಲ್ಲೂ ಭಾರತ ಲೀಗ್ ಹಂತದಲ್ಲಿ ಒಂದು ಸೋಲು ಕಂಡಿತ್ತು.

2021 - ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ - ಭಾರತ vs ನ್ಯೂಜಿಲೆಂಡ್: ಫೈನಲ್‌ ಪಂದ್ಯದಲ್ಲಿ ಭಾರತ ತಂಡಕ್ಕೆ ಮತ್ತೊಮ್ಮೆ ನಿರಾಸೆ ಕಾಡಿತು, ಕಿವೀಸ್‍ಗೆ 8 ವಿಕೆಟ್ ಗೆಲುವು ದಕ್ಕಿತು. ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿತ್ತು.

2022 - ಟಿ20 ವಿಶ್ವಕಪ್ ಸೆಮಿಫೈನಲ್ - ಭಾರತ vs ಇಂಗ್ಲೆಂಡ್; ಇಂಗ್ಲೆಂಡ್‍ 10 ವಿಕೆಟ್‌ಗಳಿಂದ ಗೆದ್ದು, ಫೈನಲ್ ತಲುಪಿತ್ತು. ಈ ಲೀಗ್‌ನಲ್ಲೂ ಭಾರತ 1 ಪಂದ್ಯದಲ್ಲಿ ಮಾತ್ರ ಸೋಲು ಕಂಡಿತ್ತು.

2023 - ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್- ಭಾರತ vs ಆಸ್ಟ್ರೇಲಿಯಾ: ಸತತ ಎರಡನೇ ಬಾರಿ ಸತತ ಫೈನಲ್ ಪ್ರವೇಶಿಸಿದ್ದ ಭಾರತ ತಂಡ ಟ್ರೋಫಿ ಗೆಲ್ಲುವಲ್ಲಿ ಎಡವಿತ್ತು. ಈ ಚಾಂಪಿಯನ್‌ಶಿಪ್‌ನಲ್ಲೂ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿತ್ತು.

Story first published: Tuesday, November 14, 2023, 11:35 [IST]
Other articles published on Nov 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+