Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ಭಾರತ ತಂಡದಿಂದ ಅಶ್ವಿನ್ ಔಟ್ ಬಹುತೇಕ ಖಚಿತ! ಕಾರಣ ಇಲ್ಲಿದೆ

ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ತನ್ನ ಎರಡನೇ ಪಂದ್ಯದನ್ನಾಡಲು ಸಜ್ಜಾಗಿದೆ. ಇಂದು ಬುಧವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದ್ದು ತೀವ್ರ ಕುತೂಹಲ ಮೂಡಿಸಿದೆ. ಬಲಿಷ್ಠ ಭಾರತ ತಂಡಕ್ಕೆ ಪ್ರತಿಭಾನ್ವಿತ ಆಟಗಾರರ ದೊಡ್ಡ ಪಡೆಯನ್ನೇ ಹೊಂದಿರುವ ಅಫ್ಘಾನಿಸ್ತಾನ ಸವಾಲು ಒಡ್ಡಲಿದ್ದು ಈ ಮುಖಾಮುಖಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಇನ್ನು ಈ ಪಂದ್ಯಕ್ಕೆ ಭಾರತ ಯಾವ ಆಡುವ ಬಳಗದೊಂದಿಗೆ ಕಣಕ್ಕಿಳಿಯಲಿದೆ ಎನ್ನುವುದು ಸತ್ಯದ ಕುತೂಹಲ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡುವ ತಂಡವೇ ಬಹುತೇಕ ಕಣಕ್ಕಿಳಿದರೂ ಒಂದು ಬದಲಾವಣೆ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಅರ್ಶವಿನ್ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ICC World cup 2023: senior player R Ashwin may out from playing XI against Afghanistan

ಸ್ಪಿನ್ನರ್‌ಗಳಿಗೆ ದೆಹಲಿಯಲ್ಲಿ ಇಲ್ಲ ನೆರವು?

ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ ಚೆನ್ನೈನಲ್ಲಿ ಎದುರಿಸಿದ್ದಾಗ ಭಾರತ ತಂಡದಲ್ಲಿ ಅನುಭವಿ ಆಟಗಾರ ಆರ್ ಆಶ್ವಿನ್ ಸ್ಥಾನವನ್ನು ಪಡೆದುಕೊಂಡಿದ್ದರು. ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿದ್ದ ಆ ಪಿಚ್‌ನಲ್ಲಿ ಭಾರತ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು. ಆದರೆ ಎರಡನೇ ಪಂದ್ಯ ದೆಹಲಿಯಲ್ಲಿ ನಡೆಯುತ್ತಿದ್ದು ಪ್ರಸ್ತುತ ವಿಶ್ವಕಪ್‌ಗೆ ಸಿದ್ಧಪಡಿಸಿರುವ ದೆಹಲಿಯ ಪಿಚ್ ಬ್ಯಾಟರ್‌ಗಳಿಗೆ ಪೂರಕವಾಗಿದ್ದು ಬೌಲರ್‌ಗಳಿಗೆ ನೆರವು ದೊರೆಯುವುದು ಕಡಿಮೆ. ಅದರಲ್ಲೂ ಸ್ಪಿನ್ನರ್‌ಗಳಿಗೆ ಇಲ್ಲಿ ಹೆಚ್ಚು ನೆರವು ದೊರೆಯುವುದಿಲ್ಲ. ಹಾಗಾಗಿ ಆಡುವ ಬಳಗದಲ್ಲಿ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದೆ.

ಅಶ್ವಿನ್‌ಗೆ ಕೊಕ್, ಶಮಿ ಇನ್

ದೆಹಲಿಯ ಪಿಚ್ ಗಮನದಲ್ಲಿಟ್ಟುಕೊಂಡು ಟೀಮ್ ಇಂಡಿಯಾ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಮೂರನೇ ಸ್ಪಿನ್ನರ್ ಆಗಿ ಕಣಕ್ಕಿಳಿದಿದ್ದ ಆರ್ ಅಶ್ವಿನ್ ಬದಲಿಗೆ ಭಾರತದ ಆಡುವ ಬಳಗಕ್ಕೆ ಮೊಹಮ್ಮದ್ ಶಮಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೀಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಆರ್ ಅಶ್ವಿನ್ ಆಡುವ ಸಾರ್ಧಯತೆ ಕಡಿಮೆಯಿದೆ.

ಬದಲಾವಣೆಯ ಸುಳಿವು ನೀಡಿದ್ದ ರೋಹಿತ್

ಇನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಬಳಿಕ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಬದಲಾವಣೆ ಮಾಡುವ ಬಗ್ಗೆ ನಾಯಕ ರೋಹಿತ್ ಶರ್ಮಾ ಸುಳಿವು ನೀಡಿದ್ದರು. ಬೇರೆ ಬೇರೆ ತಾಣಗಳಲ್ಲಿ ಭಾರತ ತಂಡ ಆಡುವ ಕಾರಣ ಆಯಾಯ ಪಿಚ್‌ನ ಆಧಾರದಲ್ಲಿ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು ರೋಹಿತ್ ಶರ್ಮಾ ಸುಳಿವು ನೀಡಿದ್ದರು. ಹೀಗಾಗಿ ಅಶ್ವಿನ್ ಆಡುವ ಬಳಗದಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

Story first published: Wednesday, October 11, 2023, 8:57 [IST]
Other articles published on Oct 11, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+