For Quick Alerts
ALLOW NOTIFICATIONS  
For Daily Alerts
 

World Cup 2023: ಮೊಹಮ್ಮದುಲ್ಲಾ ಶತಕದ ಹೋರಾಟ ವ್ಯರ್ಥ; ಬಾಂಗ್ಲಾದೇಶಕ್ಕೆ ಸೋಲುಣಿಸಿದ ದಕ್ಷಿಣ ಆಫ್ರಿಕಾ

ಸೋಮವಾರ, ಅಕ್ಟೋಬರ್ 24ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 23ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಬೃಹತ್ ರನ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ.

ಈ ಮೂಲಕ 2023ರ ವಿಶ್ವಕಪ್‌ನಲ್ಲಿ ಆಡಿದ ಐದು ಪಂದ್ಯಗಳಿಂದ ನಾಲ್ಕು ಪಂದ್ಯಗಳನ್ನು ಗೆದ್ದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿತು.

ICC World Cup 2023: South Africa Defeat Bangladesh By 149 Runs in 23rd Match

ದಕ್ಷಿಣ ಆಫ್ರಿಕಾ ನೀಡಿದ್ದ 383 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವಿಫಲರಾದ ಕಾರಣ, ಮೊಹಮ್ಮದುಲ್ಲಾ ಅವರ ಶತಕದ ನೆರವಿನಿಂದ 46.4 ಓವರ್‌ಗಳಲ್ಲಿ 233 ರನ್‌ಗಳಿಗೆ ಸರ್ವಪತನ ಕಂಡು 149 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು.

ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ತಂಝಿದ್ ಹಸನ್ ಮತ್ತು ಲಿಟ್ಟನ್ ದಾಸ್ ಉತ್ತಮ ಆರಂಭ ಒದಗಿಸಲು ವಿಫಲರಾದರು. ತಂಡದ ಮೊತ್ತ 30 ರನ್‌ಗಳಾಗಿದ್ದಾಗ ತಂಝಿದ್ ಹಸನ್ 12 ರನ್ ಗಳಿಸಿ ಔಟಾದರು. ಬಳಿಕ ಬಂದ ನಜ್ಮುಲ್ ಹೊಸೈನ್ ಶಾಂಟೊ ಎದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿದರು.

ಇನ್ನು ನಾಯಕ ಶಕೀಬ್ ಅಲ್ ಹಸನ್ ಕೂಡ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಗೆ ಉತ್ತರಿಸಲು ಸಾಧ್ಯವಾಗದೆ ವಿಕೆಟ್ ನೀಡಿ ಪೆವಿಲಿಯನ್ ಸೇರಿಕೊಂಡರು. ಅನುಭವಿ ಮುಷ್ಫಿಕರ್ ರಹೀಂ 8 ರನ್ ಮಾತ್ರ ಗಳಿಸಿದರು.

ICC World Cup 2023: South Africa Defeat Bangladesh By 149 Runs in 23rd Match

ಈ ವೇಳೆ ಕ್ರೀಸ್‌ಗೆ ಆಗಮಿಸಿದ ಮಹಮ್ಮದುಲ್ಲಾ ಒಂದು ಕಡೆ ತಾಳ್ಮೆಯ ಆಟವಾಡುತ್ತಿದ್ದರೆ, ಮತ್ತೊಂದು ಕಡೆ ವಿಕೆಟ್ ಮೇಲೆ ವಿಕೆಟ್ ಉರುಳುತ್ತಿದ್ದವು. ಆದರೂ 111 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 111 ರನ್ ಬಾರಿಸಿ ತಂಡದ ಪರ ಏಕೈಕ ಗರಿಷ್ಠ ಸ್ಕೋರರ್ ಎನಿಸಿದರು. ಆದರೆ, ಅವರ ಹೋರಾಟವು ವಿಫಲ ಯತ್ನವಾಗಿತ್ತು.

ಉಳಿದಂತೆ ಬಾಂಗ್ಲಾದೇಶದ ಕೆಳ ಕ್ರಮಾಂಕದ ಬ್ಯಾಟರ್‌ಗಳಾದ ಮೆಹಿದಿ ಹಸನ್ ಮಿರಾಜ್ 11 ರನ್, ನಸುಮ್ ಅಹ್ಮದ್ 19 ರನ್, ಹಸನ್ ಮಹಮ್ಮುದ್ 15 ರನ್ ಮುಸ್ತಾಫಿಜುರ್ ರಹಮಾನ್ 11 ರನ್ ಮತ್ತು ಶೋರಿಫುಲ್ ಇಸ್ಲಾಂ 6 ರನ್ ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ಜೆರಾಲ್ಡ್ ಕೋಟ್ಜಿ 10 ಓವರ್‌ಗಳಲ್ಲಿ 62 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಮಾರ್ಕೊ ಜಾನ್ಸೆನ್ 8 ಓವರ್‌ಗಳಲ್ಲಿ 39 ರನ್ ನೀಡಿ 2 ವಿಕೆಟ್ ಪಡೆದರು. ಕಗಿಸೊ ರಬಾಡ 10 ಓವರ್‌ಗಳಲ್ಲಿ 42 ರನ್ ನೀಡಿ 2 ವಿಕೆಟ್ ಪಡೆದರೆ, ಲಿಜಾಡ್ ವಿಲಿಯಮ್ಸ್ 8.4 ಓವರ್‌ಗಳಲ್ಲಿ 56 ರನ್ ನೀಡಿ 2 ವಿಕೆಟ್ ಕಿತ್ತರು. ಉಳಿದಂತೆ ಕೇಶವ್ ಮಹಾರಾಜ್ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್ ಡಿ ಕಾಕ್ ದಾಖಲೆಯ ಶತಕದ ನೆರವಿನೊಂದಿಗೆ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 382 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.

ICC World Cup 2023: South Africa Defeat Bangladesh By 149 Runs in 23rd Match

ದಕ್ಷಿಣ ಆಫ್ರಿಕಾ ತಂಡದ ಇನ್ನಿಂಗ್ಸ್ ಆರಂಭಿಸಿದ ಕ್ವಿಂಟನ್ ಡಿ ಕಾಕ್ ಮತ್ತು ರೀಜಾ ಹೆಂಡ್ರಿಕ್ಸ್ ದೊಡ್ಡ ಆರಂಭ ಒದಗಿಸಲು ವಿಫಲರಾದರು. ಏಕೆಂದರೆ, ರೀಜಾ ಹೆಂಡ್ರಿಕ್ಸ್ 12 ರನ್ ಗಳಿಸಿ ಶೋರಿಫುಲ್ ಇಸ್ಲಾಂ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಕೇವಲ 1 ರನ್‌ಗೆ ಔಟಾದರು.

ಈ ವೇಳೆ ಜೊತೆಯಾದ ನಾಯಕ ಏಡೆನ್ ಮಾರ್ಕ್ರಾಮ್ ಬಾಂಗ್ಲಾದೇಶ ವಿರುದ್ಧ ನಿಧಾನಗತಿಯ ಅರ್ಧಶತಕ ಬಾರಿಸಿದರು. ಆರಂಭಿಕ ಕ್ವಿಂಟನ್ ಡಿ ಕಾಕ್ ಜೊತೆಗೂಡಿ 3ನೇ ವಿಕೆಟ್‌ಗೆ 131 ರನ್‌ಗಳ ಜೊತೆಯಾಟ ನೀಡಿದರು.

ಇನ್ನು ಕ್ವಿಂಟನ್ ಡಿ ಕಾಕ್ ದಾಖಲೆಯ ಶತಕ ಸಿಡಿಸಿದರು. ಪ್ರಸಕ್ತ ವಿಶ್ವಕಪ್‌ನಲ್ಲಿ ತಮ್ಮ ಮೂರನೇ ಶತಕ ಬಾರಿಸಿದರು. ಇದು ಒಂದೇ ವಿಶ್ವಕಪ್‌ನಲ್ಲಿ ಮೂರು ಶತಕ ಗಳಿಸಿದ ದಕ್ಷಿಣ ಆಫ್ರಿಕಾ ಏಕೈಕ ಬ್ಯಾಟರ್ ಎನಿಸಿದರು. ಕ್ವಿಂಟನ್ ಡಿ ಕಾಕ್ ಔಟಾಗುವ ಮುನ್ನ 140 ಎಸೆತಗಳಲ್ಲಿ 15 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಮೂಲಕ 174 ರನ್ ಬಾರಿಸಿದರು.

ಇದಕ್ಕೂ ಮುನ್ನ ಕ್ವಿಂಟನ್ ಡಿ ಕಾಕ್ ಅವರು ಹೆನ್ರಿಚ್ ಕ್ಲಾಸೆನ್ ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ 15 ಓವರ್‌ಗಳಲ್ಲಿ 142 ರನ್‌ಗಳ ಜೊತೆಯಾಟ ನಿರ್ಮಿಸಿದರು.

ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್ ಅಬ್ಬರ್ ಬ್ಯಾಟಿಂಗ್ ಪ್ರದರ್ಶಿಸಿ 49 ಎಸೆತಗಳನ್ನು ಎದುರಿಸಿ 2 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್‌ಗಳ ಸಮೇತ 90 ರನ್ ಸಿಡಿಸಿದರು ಮತ್ತು ಡೇವಿಡ್ ಮಿಲ್ಲರ್ ಜೊತೆಗೂಡಿ 5ನೇ ವಿಕೆಟ್‌ಗೆ 65 ರನ್‌ಗಳ ಜೊತೆಯಾಟ ನೀಡಿದರು.

ಇನ್ನು ಡೇವಿಡ್ ಮಿಲ್ಲರ್ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿ 15 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 34 ರನ್ ಬಾರಿಸಿದರು. ಮಾರ್ಕೊ ಜಾನ್ಸೆನ್ 1 ರನ್ ಗಳಿಸಿದರು.

ಇನ್ನು ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ತಂಡದ ಪರ ಹಸನ್ ಮಹಮ್ಮುದ್ 6 ಓವರ್‌ಗಳಲ್ಲಿ 67 ರನ್ ನೀಡಿ 2 ವಿಕೆಟ್ ಪಡೆದರೆ, ಮೆಹಿದಿ ಹಸನ್ ಮಿರಾಜ್, ಶೋರಿಫುಲ್ ಇಸ್ಲಾಂ ಮತ್ತು ಶಕೀನ್ ಅಲ್ ಹಸನ್ ತಲಾ ಒಂದೊಂದು ವಿಕೆಟ್ ಪಡೆದರು. ಬಾಂಗ್ಲಾದೇಶ ಎಲ್ಲಾ ಬೌಲರ್‌ಗಳು ದುಬಾರಿಯಾದರು.

Story first published: Tuesday, October 24, 2023, 22:27 [IST]
Other articles published on Oct 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+