For Quick Alerts
ALLOW NOTIFICATIONS  
For Daily Alerts
 

ICC World Cup 2023: ವಿಶ್ವಕಪ್ ನಲ್ಲಿ ಎಲ್ಲರ ಮನಗೆದ್ದ 'ಈ ಇಬ್ಬರು' ದಾಂಡಿಗರು

By ನಾಗೇಶ್

ಭಾರತದಲ್ಲಿ ಏಕದಿನ ವಿಶ್ವಕಪ್‌ ಆರಂಭವಾಗಿದೆ. ಎಲ್ಲಾ ತಂಡಗಳು ಮೈದಾನದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿವೆ. ಅದರಲ್ಲೂ ಕೆಲವು ಆಟಗಾರರು, ತಮ್ಮ ಆಟದ ಮೂಲಕ ಅಭಿಮಾನಿಗಳ ಮನದಲ್ಲಿ ಸ್ಥಾನವನ್ನು ಪಡೆಯುತ್ತಿದ್ದಾರೆ.

ಈ ಸಾಲಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರರು ಎಂದರೆ, ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಕೆ.ಎಲ್ ರಾಹುಲ್‌ ಹಾಗೂ ನ್ಯೂಜಿಲ್ಯಾಂಡ್ ನ ರಚಿನ್ ರವೀಂದ್ರ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆಯುವಂತೆ ಮಾಡಿದೆ.

icc-world-cup-2023

ಟೀಮ್ ಇಂಡಿಯಾದ ಐದನೇ ಮನೆಗೆ ನ್ಯಾಯ ಒದಗಿಸಿದ ಆಟಗಾರ ಎಂದರೆ ಅದು ಕನ್ನಡಿಗ ಕೆ.ಎಲ್ ರಾಹುಲ್. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಆಡಿದ ರಾಹುಲ್‌, ಟೀಮ್ ಇಂಡಿಯಾದ ಪೋಸ್ಟರ್‌ ಬಾಯ್‌ ಎಂದೇ ಬಿಂಬಿತರಾಗುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ರಾಹುಲ್‌ ಯಾವುದೇ ಹಂತದಲ್ಲೂ ಕೆಟ್ಟ ಹೊಡೆತಕ್ಕೆ ಮುಂದಾಗಲೇ ಇಲ್ಲ. ಫುಟ್‌ ವರ್ಕ್‌, ಚಾಯ್ಸ್‌ ಆಫ್‌ ಶಾಟ್‌ ಅದ್ಭುತವಾಗಿತ್ತು.

ವಿರಾಟ್‌ ಕೊಹ್ಲಿ ಅವರಿಗೆ ಸಾಥ್‌ ನೀಡಿದ ರಾಹುಲ್‌, ಮ್ಯಾಚ್‌ ಫಿನಿಷ್‌ ಮಾಡಿಯೇ ಪ್ಯಾಡ್‌ ಬಿಚ್ಚಿಟ್ಟರು. ಈ ಮೂಲಕ ಇವರ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿ ಅಬ್ಬರಿಸಿದರು. ಈ ಮೂಲಕ ತಮ್ಮಲ್ಲಿನ ಬ್ಯಾಟಿಂಗ್ ಕ್ಷಮತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದರು. ಸ್ಪಿನ್‌ ಫ್ರೆಂಡ್ಲಿ ಪಿಚ್ ನಲ್ಲಿ ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿ ಅಬ್ಬರಿಸಿದರು.

ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ

ರಚಿನ್ ರವೀಂದ್ರ ನ್ಯೂಜಿಲೆಂಡ್ ಪರ ಆಡಿ ಏಕದಿನ ವಿಶ್ವಕಪ್‌ ನಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಚೊಚ್ಚಲ ವಿಶ್ವಕಪ್ ಆಡುತ್ತಿರುವ 23 ವರ್ಷದ ರಚಿನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ವಿಶ್ವಕಪ್‌ನ ಮೊದಲೆರಡು ಪಂದ್ಯಗಳಲ್ಲಿ 1 ಶತಕ ಮತ್ತು 1 ಅರ್ಧಶತಕ ಸಿಡಿಸಿದ್ದಾರೆ. ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಹೆಸರುಗಳನ್ನು ಹೊಂದಿರುವ ರಚಿನ್ ಭವಿಷ್ಯದ ತಾರೆ ಎಂಬ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ.

ಅಕ್ಟೋಬರ್ 5 ರಂದು ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯ

ನ್ಯೂಜಿಲೆಂಡ್ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 5 ರಂದು ಇಂಗ್ಲೆಂಡ್ ವಿರುದ್ಧ ಆಡಿತು. ಈ ಪಂದ್ಯದ ಮೂಲಕ ರಚಿನ್ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿದರು. ಮತ್ತು ಮೊದಲ ಪಂದ್ಯದಲ್ಲಿ ಅವರು 11 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳ ಸಹಾಯದಿಂದ ಅಜೇಯ 123 (96 ಎಸೆತ) ರನ್‌ಗಳನ್ನು ಗಳಿಸಿದರು.

283 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವೇಳೆ ಈ ಇನ್ನಿಂಗ್ಸ್ ಮೂಡಿ ಬಂದಿತು. ರಚಿನ್ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ 128.12 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರು. ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತನ್ನ ಎರಡನೇ ಪಂದ್ಯವನ್ನು ನೆದರ್‌ಲ್ಯಾಂಡ್ ವಿರುದ್ಧ ಹೈದರಾಬಾದ್‌ನಲ್ಲಿ ಆಡಿತು.

ಈ ಪಂದ್ಯದಲೂ ಟಾಸ್ ಗೆದ್ದ ಕಿವೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಚಿನ್ 51 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ಹೀಗಿರುವಾಗ ಮೂರನೇ ಪಂದ್ಯದಲ್ಲೂ ಅವರ ಮೇಲೆಯೇ ಕಣ್ಣು ನೆಟ್ಟಿದೆ.

Story first published: Tuesday, October 10, 2023, 12:08 [IST]
Other articles published on Oct 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+