ಭಾರತದಲ್ಲಿ ವಿಶ್ವಕಪ್ ಆರಂಭವಾಗಿದೆ, ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಾ ಇದ್ದಾರೆ. ಇನ್ನು ಹಲವು ಆಟಗಾರರು ತಮ್ಮ ಖದರ್ ಗೆ ತಕ್ಕಂತೆ ಆಟವನ್ನು ಆಡುತ್ತಿದ್ದಾರೆ. ಈ ವಿಶ್ವಕಪ್ ನಲ್ಲಿ ಸದ್ದು ಮಾಡಿರುವ ಹಲವು ಆಟಗಾರರಲ್ಲಿ ಪ್ರಮುಖರು, 2008ರ ಅಂಡರ್ 19 ವಿಶ್ವಕಪ್ ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರರು.
2008ರ ಅಂಡರ್ 19 ವಿಶ್ವಕಪ್ ನಲ್ಲಿ ಮಿಂಚಿದ ಆಗಿನ ಯುವ ಆಟಗಾರರು ಈಗ, ತಮ್ಮದೇ ದೇಶಕ್ಕೆ ಬಲ ತುಂಬಿದ್ದಾರೆ. ಈ ಸಾಲಿನಲ್ಲಿ ಎದ್ದು ಕಾಣುವ ಆಟಗಾರ, ಟೀಮ್ ಇಂಡಿಯಾ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ.. 2008ರ ಅಂಡರ್-19 ವಿಶ್ವಕಪ್ ನಲ್ಲಿ ಮಿಂಚಿದ ನಂತರವೇ ವಿರಾಟ್ ಕೊಹ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರು.

ಈ ಬಾರಿ ನಾಲ್ಕನೇ ವಿಶ್ವಕಪ್ ಆಡುತ್ತಿದ್ದಾರೆ. ಈ ವಿಶ್ವಕಪ್ ನ ಮೊದಲ ಎರಡು ಪಂದ್ಯಗಳಲ್ಲಿ ಅವರು ಎರಡು ಅರ್ಧಶತಕಗಳನ್ನು ಗಳಿಸಿ ತಮ್ಮ ಕ್ಷಮತೆಯನ್ನು ಸಾಬೀತು ಪಡೆಸಿದ್ದಾರೆ. ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮತ್ತೊಬ್ಬ ಆಟಗಾರ ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಜಡೇಜಾ ಕೂಡ ಅಂಡರ್-19 ವಿಶ್ವಕಪ್ 2008 ರಲ್ಲಿ ತಮ್ಮ ಕ್ಷಮತೆ ತೋರಿಸಿದವರೆ. ಅವರು 2023 ರ ವಿಶ್ವಕಪ್ ನಲ್ಲಿ ಇನ್ನೂ ಬ್ಯಾಟ್ ಮಾಡಿಲ್ಲ ಆದರೆ ಬೌಲಿಂಗ್ ನಲ್ಲಿ ಅವರು ತಮ್ಮ ಛಾಪು ಮೂಡಿಸುತ್ತಿದ್ದಾರೆ.
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 2008ರ ಅಂಡರ್-19 ವಿಶ್ವಕಪ್ ಕೂಡ ಆಡಿದ್ದರು. ಈ ಬಾರಿ ಅವರು ಮೂರನೇ ವಿಶ್ವಕಪ್ ಆಡುತ್ತಿದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್ ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ ಕೂಡ 2008 ರಲ್ಲಿ ಆಡಿದ ಆಟಗಾರ. ಮಾರ್ಕಸ್ ಸ್ಟೊಯಿನಿಸ್ ಅತ್ಯುತ್ತಮ ಫಿನಿಶರ್ ಎಂದು ಹೆಸರುವಾಸಿ.
ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಸೀಸ್ ನ ಮತ್ತೋರ್ವ ಆಟಗಾರ ಎಂದರೇ ಅದುವೇ ವೇಗದ ಬೌಲರ್ ಜೋಶ್ ಹ್ಯಾಜಲ್ವುಡ್. 2023 ರ ವಿಶ್ವಕಪ್ಪಿನ ಅಗ್ರ ವೇಗದ ಬೌಲರ್ ಗಳಲ್ಲಿ ಅವರನ್ನು ಪರಿಗಣಿಸಲಾಗಿದೆ. ಈ ಪಟ್ಟಿಯಲ್ಲಿ ನ್ಯೂಜಿಲೆಂಡಿನ ಕೇನ್ ವಿಲಿಯಮ್ಸನ್ ಸಹ ಇದ್ದಾರೆ. ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಅವರೊಂದಿಗೆ ಇವರನ್ನು ಸಹ ಶ್ರೇಷ್ಠ ಬ್ಯಾಟರ್ ಎಂದು ಪರಿಗಣಿಸಲಾಗುತ್ತದೆ.
ಇವರು ನ್ಯೂಜಿಲೆಂಡಿನ ವಿಶ್ವಕಪ್ ತಂಡದ ಭಾಗವಾಗಿದ್ದರೂ, ಗಾಯದ ಸಮಸ್ಯೆಯಿಂದ ಇನ್ನು ಕಣಕ್ಕೆ ಇಳಿದಿಲ್ಲ. ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ 2008 ರಲ್ಲಿ 19 ವರ್ಷದೊಳಗಿನವರ ತಂಡದಲ್ಲಿ ಅಬ್ಬರಿಸಿದ ಬಳಿಕವೇ, ಅವರಿಗೆ ರಾಷ್ಟ್ರೀಯ ತಂಡದಲ್ಲಿ ಲಭಿಸಿತು.
ಅವರು 2023 ರ ವಿಶ್ವಕಪ್ ನಲ್ಲಿ ನ್ಯೂಜಿಲೆಂಡಿನ ಪ್ರಮುಖ ಬೌಲರ್. ಟ್ರೆಂಟ್ ಬೌಲ್ಟ್ ಅವರ ಸಹ ವೇಗದ ಬೌಲರ್ ಟಿಮ್ ಸೌಥಿ ಕೂಡ ಈ ಪಟ್ಟಿಯ ಕಾಣಿಸಿಕೊಳ್ಳುತ್ತಾರೆ. ಆದರೆ, ಈ ವಿಶ್ವಕಪ್ ನಲ್ಲಿ ಸೌಥಿ ಇದುವರೆಗೆ ಪ್ಲೇಯಿಂಗ್-11ರಲ್ಲಿ ಆಡುವ ಅವಕಾಶ ಪಡೆದಿಲ್ಲ.
ಇಂಗ್ಲೆಂಡಿನ ವೇಗದ ಬೌಲರ್ ಕ್ರಿಸ್ ವೋಕ್ಸ್ 2008ರ ಅಂಡರ್-19 ವಿಶ್ವಕ ಪ್ ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದರು. ಅಲ್ಲದೆ 2019ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದಕ್ಷಿಣ ಆಫ್ರಿಕಾದ ರೀಜಾ ಹೆಂಡ್ರಿಕ್ಸ್ ಅಂಡರ್-19 ವಿಶ್ವಕಪ್ 2008 ಅನ್ನು ಸಹ ಆಡಿದ್ದರು. ಹೆಂಡ್ರಿಕ್ಸ್ ಕೂಡ ಈ ವಿಶ್ವಕಪ್ನ ಪ್ಲೇಯಿಂಗ್-11 ರಲ್ಲಿ ಅವಕಾಶ ಪಡೆಯಲು ಕಾಯುತ್ತಿದ್ದಾರೆ.