For Quick Alerts
ALLOW NOTIFICATIONS  
For Daily Alerts
 

World Cup 2023: ವಿರಾಟ್ ಕೊಹ್ಲಿ 'ಚೇಸ್ ಮಾಸ್ಟರ್' ಆಟ; 2019ರ ಸೋಲಿಗೆ ಕಿವೀಸ್ ವಿರುದ್ಧ ಸೇಡು ತೀರಿಸಿಕೊಂಡ ಭಾರತ

ಭಾನುವಾರ, ಅಕ್ಟೋಬರ್ 22ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 21ನೇ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಆತಿಥೇಯ ಭಾರತ ಭರ್ಜರಿಯಾಗಿ ಗೆಲುವು ಸಾಧಿಸಿತು.

ಈ ಗೆಲುವಿನ ಮೂಲಕ ಭಾರತ ತಂಡ ಐದು ಪಂದ್ಯಗಳಲ್ಲಿ ಐದೂ ಪಂದ್ಯಗಳನ್ನು ಗೆದ್ದು 10 ಅಂಕಗಳೊಂದಿಗೆ 2023ರ ಏಕದಿನ ವಿಶ್ವಕಪ್‌ನ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು.

ಇದೇ ವೇಳೆ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 49ನೇ ಶತಕ ಬಾರಿಸುವ ಅವಕಾಶವನ್ನು ಕೇವಲ 5 ರನ್‌ಗಳಿಂದ ತಪ್ಪಿಸಿಕೊಂಡರು. ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 49 ಶತಕಗಳ ದಾಖಲೆ ನಿರ್ಮಿಸಿದ್ದಾರೆ.

ICC World Cup 2023: Virat Kohli Hits 69th ODI Half-century; India Beat New Zealand By 4 Wickets

ಇನ್ನು 2019ರ ವಿಶ್ವಕಪ್ ಸೆಮಿಫೈನಲ್‌ನ ರೋಚಕ ಸೋಲಿಗೆ 2023ರ ವಿಶ್ವಕಪ್‌ನಲ್ಲಿ ಪ್ರತೀಕಾರದ ರೂಪದಲ್ಲಿ ಸೋಲಿಸಿದ ಭಾರತ ತಂಡ, ಮತ್ತೊಮ್ಮೆ ಸೆಮಿಫೈನಲ್ ತಲುಪಲು ಮತ್ತಷ್ಟು ಹತ್ತಿರವಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಡೇರಿಲ್ ಮಿಚೆಲ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 273 ರನ್‌ಗಳಿಗೆ ಸರ್ವಪತನ ಕಂಡಿತು.

ಕಿವೀಸ್ ನೀಡಿದ 274 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಮತ್ತೊಮ್ಮೆ ಆಸರೆಯಾಗಿದ್ದು ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ. ಅವರ ಭರ್ಜರಿ 95 ರನ್‌ಗಳ ಅರ್ಧಶತಕದ ಸಹಾಯದಿಂದ ಭಾರತ 48 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.

ICC World Cup 2023: Virat Kohli Hits 69th ODI Half-century; India Beat New Zealand By 4 Wickets

274 ರನ್‌ಗಳ ಚೇಸಿಂಗ್‌ನಲ್ಲಿ ಭಾರತ ತಂಡದ ಆರಂಭಿಕ ಬ್ಯಾಟರ್‌ಗಳಾದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 71 ರನ್‌ಗಳ ಜೊತೆಯಾಟ ನೀಡಿತು.

ಶುಭ್ಮನ್ ಗಿಲ್ 31 ಎಸೆತಗಳಲ್ಲಿ 5 ಬೌಂಡರಿ ಸಮೇತ 26 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮಾ 40 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಮೂಲಕ 46 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಈ ವೇಳೆ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ಕೊನೆಯವರೆಗೂ ಆಟವಾಡಿ 104 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಮೇತ 95 ರನ್‌ಗಳನ್ನು ಬಾರಿಸಿ ಗೆಲುವಿನ ರೂವಾರಿ ಎನಿಸಿದರು. ವಿರಾಟ್ ಕೊಹ್ಲಿ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 29 ಎಸೆತಗಳಲ್ಲಿ 6 ಬೌಂಡರಿ ಮೂಲಕ 33 ರನ್ ಗಳಿಸಿದರು.

ICC World Cup 2023: Virat Kohli Hits 69th ODI Half-century; India Beat New Zealand By 4 Wickets

ಕೆಎಲ್ ರಾಹುಲ್ ಕೂಡ 35 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 27 ರನ್‌ ಗಳಿಸಿದರೆ, ಸೂರ್ಯಕುಮಾರ್ ಯಾದವ್ 2 ರನ್ ಗಳಿಸಿ ರನೌಟ್ ಆದರು. ಆಲ್‌ರೌಂಡರ್ ರವೀಂದ್ರ ಜಡೇಜಾ 44 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಅಜೇಯ 39 ರನ್ ಗಳಿಸಿ ಗೆಲುವಿನ ಬೌಂಡರಿ ಬಾರಿಸಿದರು.

ಬೌಲಿಂಗ್‌ನಲ್ಲಿ ನ್ಯೂಜಿಲೆಂಡ್ ಪರ ಲಾಕಿ ಫರ್ಗ್ಯುಸನ್ 8 ಓವರ್‌ಗಳಲ್ಲಿ 63 ರನ್ ನೀಡಿ 2 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ನ್ಯೂಜಿಲೆಂಡ್‌ನ ಇನ್ನಿಂಗ್ಸ್ ಆರಂಭಿಸಿದ ಡೆವೊನ್ ಕಾನ್ವೇ (0) ಮತ್ತು ವಿಲ್ ಯಂಗ್ (17) ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ತಂಡದ ಮೊತ್ತ 19 ರನ್‌ಗಳಾಗುಷ್ಟರಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ನಂತರ ಜೊತೆಯಾದ ರಚಿನ್ ರವೀಂದ್ರ ಮತ್ತು ಡೇರಿಲ್ ಮಿಚೆಲ್ 3ನೇ ವಿಕೆಟ್‌ಗೆ 159 ರನ್‌ಗಳ ಜೊತೆಯಾಟ ನಿರ್ಮಿಸಿದರು. ಆರಂಭದಲ್ಲಿ ರವೀಂದ್ರ ಜಡೇಜಾ ಅವರು ರಚಿನ್ ರವೀಂದ್ರ ಅವರಿಗೆ ದೊಡ್ಡ ಜೀವದಾನ ನೀಡಿದರು. ಇದಕ್ಕೆ ಭಾರತ ಬೆಲೆ ತೆರಬೇಕಾಯಿತು.

ರಚಿನ್ ರವೀಂದ್ರ 87 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 1 ಬೌಂಡರಿ ಸಮೇತ 75 ರನ್ ಗಳಿಸಿ ಔಟಾದರೆ, ನಾಯಕ ಟಾಮ್ ಲ್ಯಾಥಮ್ ಕೇವಲ 5 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಗ್ಲೆನ್ ಫಿಲಿಪ್ಸ್ 26 ಎಸೆತಗಳಲ್ಲಿ 1 ಸಿಕ್ಸರ್ ಮೂಲಕ 23 ರನ್ ಗಳಿಸಿದರು.

ಆ ಬಳಿಕ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಡೇರಿಲ್ ಮಿಚೆಲ್ 127 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ ಸಮೇತ 130 ರನ್‌ಗಳ ಶತಕ ಬಾರಿಸಿದರು. ಇದು ಸುಮಾರು 4 ದಶಕಗಳ ಬಳಿಕ ಭಾರತ ವಿರುದ್ಧ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಬ್ಯಾಟರ್‌ನ ಮೊದಲ ಶತಕವಾಗಿದೆ.

ಕೊನೆಯಲ್ಲಿ ನ್ಯೂಜಿಲೆಂಡ್‌ನ ಬ್ಯಾಟರ್‌ಗಳಾದ ಮಾರ್ಕ್ ಚಾಪ್‌ಮನ್ 6 ರನ್, ಮಿಚೆಲ್ ಸ್ಯಾಂಟ್ನರ್ 1 ರನ್, ಲಾಕಿ ಫರ್ಗ್ಯುಸನ್ 1 ರನ್ ಮಾತ್ರ ಗಳಿಸಿದರು.

ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ 10 ಓವರ್‌ಗಳಲ್ಲಿ 54 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಗಮನಾರ್ಹವಾಗಿ, ಇದು ಈ ವಿಶ್ವಕಪ್‌ನಲ್ಲಿ ಮೊದಲ ಪಂದ್ಯವಾಗಿದೆ. ಶಾರ್ದೂಲ್ ಠಾಕೂರ್ ಅವರ ಬದಲಿಗೆ ಅವಕಾಶ ಪಡೆದಿದ್ದಾರೆ.

ಇನ್ನು ಕುಲದೀಪ್ ಯಾದವ್ 10 ಓವರ್‌ಗಳಲ್ಲಿ 73 ರನ್ ನೀಡಿ 2 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ 10 ಓವರ್‌ಗಳಲ್ಲಿ 45 ರನ್ ನೀಡಿ 1 ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ 10 ಓವರ್‌ಗಳಲ್ಲಿ 45 ರನ್ ನೀಡಿ 1 ವಿಕೆಟ್ ಕಬಳಿಸಿದರು.

Story first published: Sunday, October 22, 2023, 22:24 [IST]
Other articles published on Oct 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+